ಯಾದಗಿರಿ: ಚಲಿಸುತ್ತಿರುವ ಬಸ್‌ನಲ್ಲಿಯೇ ನಡೆಯಿತು ಹೆರಿಗೆ..!

By Suvarna News  |  First Published Dec 3, 2019, 2:33 PM IST

ಚಲಿಸುತ್ತಿರುವ ಬಸ್‌ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಚಲಿಸುತ್ತಿರುಉವ ಬಸ್‌ನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಹೆಣ್ಣು ಮಗು ಸುರಕ್ಷಿತವಾಗಿದೆ.


ಯಾದಗಿರಿ(ಡಿ.03): ಚಲಿಸುತ್ತಿರುವ ಬಸ್‌ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಚಲಿಸುತ್ತಿರುಉವ ಬಸ್‌ನಲ್ಲಿಯೇ ಮಹಿಳೆ ಹೆರಿಗೆಯಾಗಿದ್ದು, ಹೆಣ್ಣು ಮಗು ಸುರಕ್ಷಿತವಾಗಿದೆ.

ಬಸ್‌ನಲ್ಲಿಯೆ ಹೆರಿಗೆ ಮಾಡಿಸಿ ಕಿರಿಯ ಆರೋಗ್ಯ ಸಹಾಯಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಬಸ್‌ ಯಾದಗಿರಿಯಿಂದ ಶಹಾಪುರಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ತಾಯಿ ಶಶಿಕಲಾ ಹಾಗೂ ಹೆಣ್ಣು ಮಗು ಸುರಕ್ಷಿತವಾಗಿದ್ದಾರೆ.

Tap to resize

Latest Videos

undefined

ಚಿಕ್ಕಬಳ್ಳಾಪುರ: ಆಂಬ್ಯುಲೆನ್ಸ್ 108ರಲ್ಲಿ ದಾರಿ ಮಧ್ಯೆಯೇ ಹೆರಿಗೆ

ಶಶಿಕಲಾ ಶಹಾಪುರ ತಾಲೂಕಿನ ಟೋಕಾಪುರ ಗ್ರಾಮದ ನಿವಾಸಿಯಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಯಿಂದ ಶಹಾಪುರ ಖಾಸಗಿ ಆಸ್ಪತ್ರೆಗೆ ತೆರಳುತ್ತಿರುವಾಗ ಹೆರಿಗೆಯಾಗಿದೆ. ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಅದೇ ಬಸ್‌ನಲ್ಲಿ ‌ಪ್ರಯಾಣಿಸುತ್ತಿದ್ದರು.

ಆಸ್ಪತ್ರೆ ಎದುರೇ ನರಳಾಡಿದ ಗರ್ಭಿಣಿ; ಬಾಗಿಲ ಹೊರಗೆ ಹೆರಿಗೆ!

ಗರ್ಭಿಣಿಯ ಸಹಾಯಕ್ಕೆ ಧಾವಿಸಿದ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ. ಮಸ್ತಾನ್ ಬಿ, ಅರುಣಾ, ಪ್ರತಿಭಾ, ಸಬೀನಾ ಅವರು ಮಹಿಳೆಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಆರೋಗ್ಯ ಸಿಬ್ಬಂದಿ. ಸದ್ಯ ಶಹಾಪುರನ ತಾಲೂಕು ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟೆ: ಗದ್ದೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

click me!