ಮಳೆಗಾಗಿ ದೇವರ ಮೊರೆ ಹೋದ ಯಾದಗಿರಿ ಜನ!

By Suvarna News  |  First Published Jul 6, 2022, 8:12 PM IST
  • ಮಳೆಗಾಗಿ ದೇವರ ಮೊರೆ ಹೋದ 
  • ಕೈಕೊಟ್ಟ ವರುಣ ದೇವ ರೈತರು ಕಂಗಾಲು..!
  • ದೇವರಿಗೆ ಜಲಾಭಿಷೇಕ ಮಾಡಿ ಪ್ರಾರ್ಥನೆ..!
     

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ (ಜು.6): ಒಂದು ಕಡೆ ದಕ್ಷಿಣ  ಭಾಗದಲ್ಲಿ ವರುಣನ ಅಬ್ಬರದಿಂದ ಜನರು ನಲುಗಿ ಹೋಗಿದ್ರೆ, ಮತ್ತೊಂದೆಡೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿಂದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಕಾರಣ ಯಾದಗಿರಿ ಜನರು ಮಳೆಗಾಗಿ ಈಗ ದೇವರ ಮೊರೆ ಹೋಗಿದ್ದಾರೆ.

Tap to resize

Latest Videos

undefined

ಬಿತ್ತನೇ ಮಾಡಲು ರೈತರ ಹಿಂದೇಟು..!
ಯಾದಗಿರಿ ಜಿಲ್ಲೆಯ ಸುರಪುರ, ಹುಣಸಗಿ ತಾಲೂಕುಗಳನ್ನು ಹೊರತುಪಡಿಸಿ ಉಳಿದ ನಾಲ್ಕು  ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ. ವಡಗೇರಾ, ಯಾದಗಿರಿ, ಗುರುಮಿಠಕಲ್, ಶಹಾಪುರ ತಾಲೂಕಿನಲ್ಲಿ ಮಳೆ‌ಗಾಗಿ ಬಾಯ್ತೆರೆಯುಮತಾಗಿದೆ. ಏ.1 ರಿಂದ ಜುಲೈ 6 ರವರಗೆ ವಾಡಿಕೆ ಮಳೆ 115 ಎಂಎಂ ಮಳೆ ಬರಬೇಕಿತ್ತು, ಆದರೆ,105 ಎಂಎಂ ಮಳೆ ಬಂದಿದೆ. 

 Karnataka Rain Updates: ಮೋಟಮ್ಮ ತಮ್ಮನ ಕಾರಿನ ಮೇಲೆ ಬಿದ್ದ ಕಾರು,

ಗುರುಮಿಠಕಲ್ ತಾಲೂಕಿನಲ್ಲಿ 44 ಪ್ರತಿಶತ ಮಳೆ ಕೊರತೆಯಾಗಿದ್ದು, ಯಾದಗಿರಿ ತಾಲೂಕಿನಲ್ಲಿ 38 ಪ್ರತಿಶತ ಮಳೆ ಕೊರತೆ, ಶಹಾಪುರ ತಾಲೂಕಿನಲ್ಲಿ 19 ಪ್ರತಿಶತ ಮಳೆ ಕೊರತೆ, ವಡಿಗೇರಾ ತಾಲೂಕಿನಲ್ಲಿ 3 ಪ್ರತಿಶತ ಮಳೆ ಕೊರತೆಯಾಗಿದೆ. ಸುರಪುರ ತಾಲೂಕಿನಲ್ಲಿ 29 ಪ್ರತಿಶತ ಹಾಗೂ ಹುಣಸಗಿ ತಾಲೂಕಿನಲ್ಲಿ 20 ಪ್ರತಿಶತ ಮಳೆ ಹೆಚ್ಚಳವಾಗಿದೆ. ಮುಂಗಾರು ಹಂಗಾಮಿನಲ್ಲಿ ಈ ಬಾರಿ ಉತ್ತಮ ಮಳೆ ಬರುತ್ತದೆ ಎಂದು ರೈತರು ನಿರೀಕ್ಷೆ ಮಾಡಿ, ರೈತರು ಬೀಜ ಹಾಗೂ ಗೊಬ್ಬರ ಖರೀದಿ ಮಾಡಿದರು. ಆದರೆ, ಮಳೆ ಕೈಕೊಟ್ಟ ಕಾರಣ ಅನ್ನದಾತರು ಮಳೆಗಾಗಿ ಕಾದು ಕುಳಿತಿದ್ದಾರೆ.

392210 ಹೆಕ್ಟೇರ್ ಬಿತ್ತನೆ ಗುರಿ ಇದ್ದು ,73040 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಲಾಗಿದೆ. ತೊಗರಿ, ಹೆಸರು ಹಾಗೂ ಇನ್ನಿತರ ಬೀಜ ಬಿತ್ತನೆ ಮಾಡಬೇಕು. ಮಳೆ ಕೊರತೆಯಿಂದ ರೈತರು ಕಂಗಲಾಗಿದ್ದಾರೆ. ಮಳೆ ಕೊರತೆಯಿಂದ ಹತ್ತಿ,ತೊಗರಿ, ಹೆಸರು ಬೆಳೆ ಒಣಗುವ ಹಂತಕ್ಕೆ ಬಂದಿವೆ.

ಮಳೆಗಾಗಿ ದೇವರ ಮೊರೆ ಹೋದ ರೈತರು: ಮಳೆಗಾಗಿ ರೈತರು ಮುಗಿಲತ್ತ ಮುಖ ಮಾಡಿದ್ದಾರೆ. ಮಳೆ ಕೊರತೆಯಿಂದ ರೈತರು ಪ್ರಾರ್ಥನೆ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಜನರು ಕೃಷ್ಣಾ ನದಿಯಿಂದ 101 ಬಿಂದಿಗೆಯಲ್ಲಿ ವಾದ್ಯ ಮೇಳದೊಂದಿಗೆ ಗ್ರಾಮದ ದುರ್ಗಾದೇವಿ, ದ್ಯಾವಮ್ಮ,ಅಂಜನೇಯ ಹಾಗೂ ಕೃಷ್ಣಾ ನದಿಯ ನಡುಗಡ್ಡೆಯ ಗಡ್ಡೆ ಬಸವೇಶ್ವರ ಮಂದಿರಕ್ಕೆ ತೆರಳಿ ದೇವರಿಗೆ ನೀರು ಅರ್ಪಿಸಿದ್ದಾರೆ. ನಂತರ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಉತ್ತಮವಾಗಿ ಮಳೆ ಬರಲೆಂದು ಪ್ರಾರ್ಥನೆ ಮಾಡಿದರು.

ದೇವರಿಗೆ ಜಲಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು: ಯಾದಗಿರಿ ಜಿಲ್ಲೆಯಲ್ಲಿ ಕೆಲವು ಕಡೆ ಸ್ವಲ್ಪ ಮಳೆಯಾದ್ರೆ, ಇನ್ನೊಂದು ಕಡೆ ಮಳೆಯೇ ಇಲ್ಲದೇ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಇದು ರೈತಾಪಿ ವರ್ಗಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದಾಗಿ ಹಲವು ಗ್ರಾಮದ ರೈತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಜಲಾಭಿಷೇಕ ಮಾಡಿ ಕರುಣೆ ತೋರು ಮಳೆರಾಯ ಅಂತ ಪ್ರಾರ್ಥಸಿದ್ದಾರೆ.

ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ, ರಕ್ಷಣೆ ಪರಿಹಾರ ಕಾರ್ಯಚರಣೆಗೆ SDRF ತಂಡ

ಈ ರೀತಿ ಕೆಲವು ವಾರಗಳು ಮಾಡಿದ್ರೆ ಮಳೆ ಬರುತ್ತದೆ ಎಂಬುದು ನಂಬಿಕೆ ಜನರಲ್ಲಿದೆ. ಈ ಬಗ್ಗೆ ಕೋಡಾಲ ಗ್ರಾಮದ ಮುಖಂಡ ಸಿದ್ದಣ್ಣಗೌಡ ಮಾಲಿಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಕಡಿಮೆ ಬಂದ ಕಾರಣ ಬೆಳೆ ಬೆಳೆಯಲು ಕಷ್ಟವಾಗಿದೆ. ಬಿತ್ತನೆ ಮಾಡಿದ ಹತ್ತಿ, ಹೆಸರು, ತೊಗರಿ ಬೆಳೆ ಕೂಡ ಒಣಗುವ ಹಂತಕ್ಕೆ ಬಂದಿದೆ. ಹೀಗಾಗಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಅರ್ಪಿಸಿ ,ಮಳೆ ಬರಲೆಂದು ಸಾಮೂಹಿಕ ಪ್ರಾರ್ಥನೆ ಮಾಡಿದ್ದೆವೆ ಎಂದರು.

click me!