ಬರ ಪರಿಹಾರ, ಪಿಂಚಣಿ ಸಾಲಕ್ಕೆ ಜಮೆ: ಎಸ್‌ಬಿಐಗೆ ಯಾದಗಿರಿ ಡಿಸಿ ನೋಟಿಸ್‌

By Kannadaprabha News  |  First Published May 19, 2024, 12:02 PM IST

ಶಹಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಡಿಸಿ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯತಿ ಸಿಇಓ ನೇತೃತ್ವದಲ್ಲಿ ಸಭೆಗೆ ಬರಲು ಸೂಚಿಸಲಾಗಿದೆ. 


ಯಾದಗಿರಿ(ಮೇ.19):  ಸಾಮಾಜಿಕ ಪಿಂಚಣಿ ಹಾಗೂ ಬರ ಪರಿಹಾರ ಹಣವನ್ನು ಬೆಳೆ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಂಡಂತಹ ಬ್ಯಾಂಕುಗಳ ವಿರುದ್ದ ಕ್ರಮಕ್ಕಿಳಿದಿರುವ ಯಾದಗಿರಿ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ಜಿಲ್ಲೆಯ ಶಹಾಪುರ ಹಾಗೂ ಶಹಾಪುರ ತಾಲೂಕು ಸಗರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಕಾರಣ ಕೇಳಿ ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ. 

ಸರ್ಕಾರದ ಆದೇಶವಿದ್ದರೂ ಧೋರಣೆ ಮುಂದುವರಿಸಿರುವ ಬ್ಯಾಂಕುಗಳ ವಿರುದ್ದ ಕೇಳಿ ಬಂದಿರುವ ಆರೋಪದಡಿ, ಶನಿವಾರ ಶಹಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಡಿಸಿ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯತಿ ಸಿಇಓ ನೇತೃತ್ವದಲ್ಲಿ ಸಭೆಗೆ ಬರಲು ಸೂಚಿಸಲಾಗಿದೆ ಎಂದು 'ಕನ್ನಡಪ್ರಭ'ಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ. 

Latest Videos

undefined

ಪಿಂಚಣಿ, ನರೇಗಾ ಕೂಲಿ ಹಣವೂ ಸಾಲಕ್ಕೆ ಜಮೆ..!

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಬರ ಪರಿಹಾರ, ಪಿಂಚಣಿ ಮೊತ್ತವನ್ನು ಬ್ಯಾಂಕುಗಳು ಸಾಲಕ್ಕೆ ಜಮೆ ಮಾಡುತ್ತಿರುವ ಬಗ್ಗೆ ಮೇ 17ರಂದೇ 'ಕನ್ನಡಪ್ರಭ' ವರದಿ ಮಾಡಿತ್ತು.

click me!