
ರೋಣ(ಮೇ.19): ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ವೀರಭದ್ರೇಶ್ವರ ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಮೃತರಾಗಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಮಹಾರಥೋತ್ಸವ ನಡೆಯಿತು.
ದೇವಸ್ಥಾನದಿಂದ ಪಾದಗಟ್ಟೆವರೆಗೆ ಯಾವುದೇ ಅಡತಡೆಯಿಲ್ಲದೆ ರಥ ಎಳೆಯಲಾಯಿತು. ಬಳಿಕ, ವಾಪಸ್ ಮೂಲಸ್ಥಳಕ್ಕೆ ತೆರಳಲು ರಥ ಎಳೆಯುವ ವೇಳೆ ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆಯಲು ಹಾಗೂ ಉತ್ತತ್ತಿ ಆಯ್ದುಕೊಳ್ಳಲು ಮುಂದಾದಾಗ ನೂಕು, ನುಗ್ಗಲು ಉಂಟಾಗಿ ಮೂವರು ನೆಲಕ್ಕೆ ಬಿದ್ದರು. ಮೊದಲು ಬಿದ್ದವನನ್ನು ಅಲ್ಲಿದ್ದ ಜನರು ಎಳೆದಿದ್ದರಿಂದ ಆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ಬೊಮ್ಮಾಯಿ
ಇನ್ನಿಬ್ಬರನ್ನು ರಕ್ಷಿಸಬೇಕೆನ್ನುವಷ್ಟರಲ್ಲಿಯೇ ಒಬ್ಬನ ಬೆನ್ನಿನ ಮೇಲೆ, ಮತ್ತೊರ್ವನ ತಲೆಯ ಮೇಲೆ ರಥದ ಗಾಲಿ ಹರಿಯಿತು. ಇಬ್ಬರೂ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ರೋಣದ ನಿವಾಸಿ ಮಲ್ಲಪ್ಪ ಲಿಂಗನಗೌಡ್ರ ( 55) ಎಂದು ಗುರುತಿಸಲಾಗಿದೆ.