ಹೊಸಕೋಟೆ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಯಾದಗಿರಿಯ ಶಿವನ ಭಕ್ತರ ಸಾವು!

Published : Feb 14, 2026, 04:05 PM IST
Yadgir Devotees

ಸಾರಾಂಶ

ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ಮೂವರು ಭಕ್ತರು ಆಂಧ್ರಪ್ರದೇಶದ ಕಲಕುರ್ತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು  ಈ ದುರ್ಘಟನೆ ಸಂಭವಿಸಿದೆ. 

ಯಾದಗಿರಿ: ಹೊಸಕೋಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಜನ ಮೃತಪಟ್ಟ ದಾರುಣ ಘಟನೆ ಫೆಬ್ರವರಿ 13ರಂದು ನಡೆದಿತ್ತು. ಈ ಕರಾಳ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಶಿವರಾತ್ರಿ ಹಿನ್ನೆಲೆ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಮೂವರು ಭಕ್ತರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಆಂಧ್ರಪ್ರದೇಶದ ಕಲಕುರ್ತಿ ಸಮೀಪ ಈ ಘಟನೆ ನಡೆದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಗೋಗಿ ಗ್ರಾಮದ ನಿವಾಸಿಗಳು

ಪೊಲೀಸ್ ಮೂಲಗಳ ಪ್ರಕಾರ, ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ನಿವಾಸಿಗಳಾದ ರಾಮನಗೌಡ (52), ಮೇಘಾ (48) ಮತ್ತು ಮಹಾದೇವಮ್ಮ ಕಲಕೇರಿ (70) ಎಂಬವರು ಶಿವರಾತ್ರಿ ವಿಶೇಷ ದರ್ಶನಕ್ಕಾಗಿ ಶ್ರೀಶೈಲಂ ಮಲ್ಲಯ್ಯನ ದರ್ಶನಕ್ಕೆ ಹೊರಟಿದ್ದರು. ಭಕ್ತರು ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವು ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಹಲವರಿಗೆ ಗಾಯ

ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ಪಲ್ಟಿಯಾಗಿದ್ದು, ಇದರ ಪರಿಣಾಮವಾಗಿ ಮೂವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ವಾಹನದಲ್ಲಿದ್ದ ಇನ್ನೂ ಐದು ರಿಂದ ಆರು ಜನರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ..

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ಘಟನೆ ಬಳಿಕ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದ ಮೃತರ ಗೋಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

PREV
Read more Articles on
click me!

Recommended Stories

ಕೊರಿಯನ್ ಗೇಮ್‌ನ ಸುಳಿಯಲ್ಲಿ ಸಾವಿಗೆ ಶರಣಾದ್ನಾ ಧಾರವಾಡದ ಬಾಲಕ, ಮೊಬೈಲ್ ಚೆಕ್ ಮಾಡಿದ ಪೊಲೀಸರು ಶಾಕ್!
Maha Shivaratri 2026: ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ: ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ