ಬೆಂಗಳೂರು (ಮೇ.26): ರಾಜ್ಯದ ಕೆಲವು ಭಾಗಗಳಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಇನ್ನು ಕರಾವಳಿಯಲ್ಲಿ ಬೆಳಗ್ಗೆ, ಬೆಂಗಳೂರು ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ಧಾರಾಕಾರ ಮಳೆಯಾಗಿದೆ.
ಕೆಲವೆಡೆ ಸಿಡಿಲು ಸಹಿತ ಮಳೆ ಸುರಿದಿದ್ದು, ದಾವಣಗೆರೆಯಲ್ಲಿ ರೈತನೊಬ್ಬ ಸಿಡಿಲಿಗೆ ಓರ್ವ ಸಾವನ್ನಪ್ಪಿದರೆ, 10 ಜನ ತೀವ್ರ ಗಾಯಗೊಂಡಿದ್ದಾರೆ. ಜಮೀನಿಗೆ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ. ಮನೆಗಳಿಗೂ ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಸ್ ಚಂಡಮಾರುತ ಪ್ರಭಾವ ಮಂಗಳವಾರವೇ ಶುರುವಾಗಿದೆ.
ಮಳೆಗಾಲದಲ್ಲಿ ಇನ್ಫೆಕ್ಷನ್ ಆಗದಿರಲು ಈ ಟಿಪ್ಸ್ ನೆನಪಿನಲ್ಲಿರಲಿ .
ಯೆಲ್ಲೋ ಅಲರ್ಟ್ : ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 4 ದಿನವೂ ಉತ್ತಮ ಮಳೆಯಾಗಲಿದೆ. ಮೇ 26ಕ್ಕೆ ಕರಾವಳಿ ಸೇರಿ ಒಟ್ಟು 7 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಮೇ 26ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆ ನಿರೀಕ್ಷೆ ಇರುವುದರಿಂದ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.