ಹಿಂದೂ ಅನ್ನೋದು ನಾಗರಿಕ ಸಮಾಜ ಬಳಸದಂತ ಪದವಾಗಿದೆ: ಸಾಹಿತಿ ಸೂಳಿಭಾವಿ

By Girish Goudar  |  First Published Nov 10, 2022, 8:42 PM IST

ಹಿಂದುಸ್ತಾನ್ ಎನ್ನುವದು ಮಮ್ಮಡಿಯನ್ಸ್ ಕೊಟ್ಟಿರುವ ಪದ. ಸಿಂಧುಸ್ತಾನ ಎಂದು ಕರೆಯಿರಿ ಎಂದು ಸವಾಲು ಹಾಕಿದ ಬಸವರಾಜ್ ಸೂಳಿಭಾವಿ 


ಗದಗ(ನ.10):  ಹಿಂದೂ ಪದ ಭಾರತೀಯದ್ದಲ್ಲ ಅದು ಪರ್ಷಿಯನ್‌ನಿಂದ ಬಂದಿದೆ. ಪರ್ಷಿಯನ್ ಹಾಗೂ ಇಸ್ಲಾಂದಲ್ಲಿ ನೋಡಿದ್ರೆ, ಆ ಪದದ ಅರ್ಥ ಬೇರೆ ಇದೆ ಅಂತ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ ಹೇಳಿದ್ದಾರೆ.   ಇಂದು(ಗುರುವಾರ) ನಗರದಲ್ಲಿ ಮಾತನಾಡಿದ ಅವರು, ನಮ್ಮದಲ್ಲದ ಪದದಿಂದ ಇಷ್ಟೆಲ್ಲ ಚರ್ಚೆ ಯಾಕೆ ಅಂತಾ ಪ್ರಶ್ನಿಸಿದ ಅವರು, ಹಿಂದೂ ಅನ್ನೋದು ಒಂದು ನಾಗರಿಕ ಸಮಾಜ ಬಳಸದಂತ ಪದವಾಗಿದೆ. ಇಸ್ಲಾಂ ಸಂಸ್ಕೃತಿಯನ್ನು ಪರಕೀಯರ ಸಂಸ್ಕೃತಿ ಅಂತಾ ವಿರೋಧ ಮಾಡ್ತೀರಿ ಆದ್ರೆ ಅವರು ಕೊಟ್ಟಿರುವ ಪದದ ಬಗ್ಗೆ ನಿಮಗೆ ಯಾಕೇ ಇಷ್ಟೊಂದು ಪ್ರೀತಿ ಎಂದ್ರು. ಹಿಂದುಸ್ತಾನ್ ಎನ್ನುವದು ಮಮ್ಮಡಿಯನ್ಸ್ ಕೊಟ್ಟಿರುವ ಪದ. ಸಿಂಧುಸ್ತಾನ ಎಂದು ಕರೆಯಿರಿ ಎಂದು ಸವಾಲು ಹಾಕಿದ ಬಸವರಾಜ್ ಸೂಳಿಭಾವಿ, ಒಂದು ಪದವನ್ನು ಹುಟ್ಟಿಸಲಾಗದಂತ ಬೌದ್ಧಿಕ ದಾರಿದ್ರ್ಯ ಇದಿಯಾ ಎಂದ್ರು.. 

ನಮ್ಮದು ಸಿಂಧು ಸಂಸ್ಕೃತಿ, ದ್ರಾವಿಡ ಸಂಸ್ಕೃತಿ, ದೇಶಕ್ಕೆ ಭರತ ಖಂಡ ಅಂತಾ ಹೆಸರು ಇದೆ. ಭರತ ಖಂಡೆ, ಜಂಬು ದ್ವೀಪೆ ಎಂದು ಹೆಸರು ಇದೆ. ಚರಿತ್ರೆಯನ್ನು ಹುಡುಕಿದ್ರೆ ಹಿಂದುಸ್ತಾನ ಅಂತಾ ಎಲ್ಲಿದೆ ಅಂತಾ ಪ್ರಶ್ನಿಸಿದ್ರು.. ಪದಗಳ ಬಗ್ಗೆ ಚರ್ಚೆ ನಡೆಯಬೇಕು, ಭಾವನಾತ್ಮಕ ಅಂಧತ್ವದಿಂದ ನೋಡೋದಲ್ಲ.. ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಹಿಂದೂ ಪದ ಎನ್ನುವುದು ಈ ದೇಶದ ಮೂಲವಾಗಿದ್ದರೆ, ಬಹಿರಂಗ ಚರ್ಚೆಗೆ ಬನ್ನಿ ಗದಗನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡೋಣ ಅಂತಾ ಸವಾಲು ಹಾಕಿದ್ರು‌. 

Tap to resize

Latest Videos

ಮತದಾರರ ಋುಣ ತೀರಿಸಿದಲ್ಲಿ ರಾಜಕಾರಣ ಸಾರ್ಥಕ: ಸಚಿವ ಸಿ.ಸಿ.ಪಾಟೀಲ್

ಯಾವುದು ನಮ್ಮ ಪದ ಅಲ್ವೋ ಆ ಪದವನ್ನು ಇಟ್ಟುಕೊಂಡು ಮೂಲ ನಿವಾಸಿಗಳ ವಿರುದ್ಧ ಷಡ್ಯಂತರ ಮಾಡಲಾಗುತ್ತಿದೆ ಅಂತಾ ಸತೀಶ್ ಜಾರಕಿಹೊಳಿಯವರನ್ನ ಟಾರ್ಗೆಟ್ ಮಾಡ್ತಿರೋ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ರು. 
ಸತೀಶ್ ಜಾರಕಿಹೊಳಿಯವರ ಮಾತನ್ನು ಎಲ್ಲರು ಒಪ್ಪಿಕೊಳ್ಳಬೇಕು.. ನನ್ನ ಮಾತಿನಲ್ಲಿ ಸತ್ಯಾಂಶ ಇಲ್ಲದಿದ್ದರೆ, ಇತಿಹಾಸಗಾರರ ಸಮಿತಿಯನ್ನು ರಚನೆ ಮಾಡಿ ಅಂತಾ ಅವರು ಹೇಳಿದ್ದಾರೆ.. ಅದನ್ನು ಮಾಡಬೇಕಾದವರು ಈಗೀನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು. ಸರ್ಕಾರ ಅಲ್ಲ, ಸರ್ಕಾರ ತನಿಖೆ ಬೇಕಾದನ್ನು ಮಾಡಿಕೊಳ್ಳುತ್ತೆ.. ಹಿಂದೂ ಪದದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಬೇಕೆಂದು ಒತ್ತಾಯಿಸಿದ ಅವರು, ಇಲ್ಲವಾದರೆ ಇಂತಹ ಭಾವನಾತ್ಮಕ ಪದಗಳನ್ನುವ ಇಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸವಾಗುತ್ತದೆ.. ಈಗ ನಮ್ಮ ಅಭಿಪ್ರಾಯ ಹೇಳಲು ಆಗದಂತ ಸ್ಥಿತಿ ನಿರ್ಮಣವಾಗಿದೆ. ಇಲ್ಲಿ ಪ್ರಜಾಪ್ರಭುತ್ವ ಇಲ್ಲ ಅಂಧ ಆಡಳಿತ ನಡೆಯುತ್ತಿದೆ ಅಂತಾ ಆತಂಕ ವ್ಯಕ್ತಪಡಿಸಿದ್ರು.

ಇಲ್ಲಿ ಸರ್ವಾಧಿಕಾರಿ ಆಡಳಿದ ನಡೆಯುತ್ತಿದೆ. ರಾಮಾಯಣ ಹಾಗೂ ಮಹಾಭಾರತದಲ್ಲಿ ಈ ವಿಚಾರಗಳು ಇಲ್ಲ.. ಈ ದೇಶದ ಅತ್ಯುನ್ನತ ಗ್ರಂಥಗಳನ್ನು ಬ್ರಾಹ್ಮಣರೇತರು ಬರೆದಿದ್ದಾರೆ. ಆ ಗ್ರಂಥಗಳನ್ನು ಇಟ್ಟುಕೊಂಡು ಬ್ರಾಹ್ಮಣರು ಆಡವನ್ನು ಮಾಡ್ತಾಯಿದ್ದಾರೆ ಅದು ನಮ್ಮ ದುರಂತ. ಹಿಂದೂ ಪದದ ಬಹಿರಂಗವಾಗಿ ಚರ್ಚೆ ಮಾಡಲಿ, ಮಾವು ಬದ್ದರಿದ್ದೇವೆ ಹೇಳಿದ್ರು. 
 

click me!