ತೀವ್ರ ವಿರೋಧದ‌ ನಡುವೆಯೂ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ

By Gowthami K  |  First Published Nov 10, 2022, 8:18 PM IST

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕೊನೆಗೂ ಟಿಪ್ಪು ಜಯಂತಿ ಆಚರಣೆಯಾಗಿದೆ. ಶ್ರೀರಾಮ ಸೇನೆ ಮತ್ತು ತಮ್ಮದೇ ಪಕ್ಷದ ಪ್ರಮುಖರ ವಿರೋಧದ ನಡುವೆಯೂ ಪಾಲಿಕೆಯಿಂದ ಅಧಿಕೃತ ಅನುಮತಿ ಪಡೆದ AIMIM ಪಕ್ಷದ ಮುಖಂಡರು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ.


ಹುಬ್ಬಳ್ಳಿ (ನ.10): ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕೊನೆಗೂ ಟಿಪ್ಪು ಜಯಂತಿ ಆಚರಣೆಯಾಗಿದೆ. ಶ್ರೀರಾಮ ಸೇನೆ ಮತ್ತು ತಮ್ಮದೇ ಪಕ್ಷದ ಪ್ರಮುಖರ ವಿರೋಧದ ನಡುವೆಯೂ ಪಾಲಿಕೆಯಿಂದ ಅಧಿಕೃತ ಅನುಮತಿ ಪಡೆದ AIMIM ಪಕ್ಷದ ಮುಖಂಡರು ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ, ಗಣೇಶ ಮೂರ್ತಿ ಪ್ರತಿಷ್ಠಾಪನೆಯಂತೆ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ. ಜಯಂತಿ ವಿರೋಧಿಸಿ ಶ್ರೀರಾಮಸೇನೆಯಿಂದ ಪ್ರತಿಭಟನೆ. ಪರಿಸ್ಥಿತಿ ನಿಯಂತ್ರಿಸಲು ಶ್ರೀರಾಮ ಸೇನೆ ಕಾರ್ಯಕರ್ತರ ಪೊಲೀಸರ ವಶಕ್ಕೆ ಪಡೆದ ಪೊಲೀಸರು.. ಹೌದು. ರಾಣಿ ಚೆನ್ನಮ್ಮ ಮೈದಾನ ಅರ್ಥಾತ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹು-ಧಾ ಮಹಾನಗರ ಪಾಲಿಕೆ ಗ್ರಿನ್ ಸಿಗ್ನಲ್ ನೀಡುತ್ತಿದ್ದಂತೆ. ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಅನುಮತಿ ಕೇಳಿದ್ದ AIMIM ಪಕ್ಷದಲೇ ಅಪಸ್ವರ ಉಲ್ಬಣಿಸಿತ್ತು. AIMIM. ಪಕ್ಷದ ಜಿಲ್ಲಾಧ್ಯಕ್ಷ. ಹಾಗು ಪಾಲಿಕೆ‌ ಕಾರ್ಪೊರೇಟರ್ಗಳು  ಮೈದಾನದಲ್ಲಿ ಜಯಂತಿ ಬೇಡ ಅಂತ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇನ್ನು ಶ್ರೀರಾಮಸೇನೆ ಮತ್ತು ವಿಪಕ್ಷ ಕಾಂಗ್ರೆಸ್ ಸಹ ಪಾಲಿಕೆ ನಿರ್ಣಯದ ವಿರುದ್ಧ ಕೆಂಡಾಮಂಡಲವಾಗಿದ್ದವು. ಹೀಗಾಗಿ ಇಂದು ಎಲ್ಲರ ಚಿತ್ತ ಈದ್ಗಾ ಮೈದಾನದತ್ತ ನೆಟ್ಟಿತ್ತು.‌ ನಿರೀಕ್ಷೆಯಂತೆ AIMIM ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮತ್ತು ಇತರೇ ಸದಸ್ಯರು ಈದ್ಗಾ ಮೈದಾನದಲ್ಲಿ ಟಿಪ್ಪು ಭಾವ ಚಿತ್ರವಿಟ್ಟು, ಪುಷ್ಪಾಪರ್ಣೆ ಮಾಡಿ, ಟಿಪ್ಪು ಪರ ಘೋಷಣೆ ಮೊಳಗಿಸುವ ಮೂಲಕ ಜಯಂತಿ ಆಚರಣೆ ಮಾಡಿದರು.

ಟಿಪ್ಪು ಜಯಂತಿಗೆ ಶ್ರೀರಾಮಸೇನೆಯ ತೀವ್ರ ವಿರೋಧ ಹಿನ್ನೆಲೆ ನಿನ್ನೆ ತಡರಾತ್ರಿಯಿಂದಲೆ ಮೈದಾನಕ್ಕೆ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು. ಇನ್ನೂ ಗಣೇಶ ಚತುರ್ಥಿಯ ಸಮಯದಲ್ಲಿ ಕೈಗೊಂಡ ನಿಯಮದಂತೆ, ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಸ್ಥಳವನ್ನು ಬಿಟ್ಟು ನಡುವೆ ಪರದೆಯನ್ನು ಕಟ್ಟಲಾಗಿತ್ತು. ಹಿಂದೂ ಸಂಘಟನೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲೇ ಟಿಪ್ಪು ಜಯಂತಿಗೆ ಅವಕಾಶ ನೀಡಲಾಗಿತ್ತು.

Tap to resize

Latest Videos

Hubballi: ಈದ್ಗಾ ಮೈದಾನದಲ್ಲಿಂದು ಟಿಪ್ಪು ಜಯಂತಿ

 ಹೀಗಿದ್ದರೂ ಜಯಂತಿ ಆಚರಣೆಗೂ ಮುನ್ನ ಮೈದಾನದ ಬಳಿ ಪ್ರತಿಭಟನೆ ನಡೆಸಲು ಆಗಮಿಸಿದ್ದ, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರನ್ನು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.. ಕಾರ್ಯಕರ್ತರನ್ನು ಬಸ್ ನಲ್ಲಿ ಸ್ಥಳಾಂತರ ಮಾಡಿದ್ರೆ, ಮುತಾಲಿಕ್ ರನ್ನು ಅವರದ್ದೇ ಕಾರಿನಳಗಿ ನಲ್ಲಿಯೇ ವಶಕ್ಕೆ ಪಡೆದ ಕರೆದೊಯ್ದರು. ಮ ಜಯಂತಿ ಆಚರಣೆ ಮುಗಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾಧ್ಯಮಗಳ‌ಜೊತೆ ಮಾತನಾಡಿದ ಮುತಾಲಿಕ್, ಟಿಪ್ಪು ಸುಲ್ತಾನ್ ವಿರುದ್ಧ ಮತ್ತು ಜಯಂತಿ ಆಚರಣೆ ಮಾಡುತ್ತಿರುವವರ ವಿರುದ್ಧ ಹರಿಹಾಯ್ದ್ರು ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನ ಸರ್ಕಾರವೇ ರದ್ದು ಮಾಡಿದೆ. ಹೀಗಿರುವಾಗ ಬಿಜೆಪಿ ಅಡಳಿತದಲ್ಲಿರುವ ಬಿಜೆಪಿ ಯಾಕೆ ಅನುಮನೀಡುದೆ ಅಂತ ಕಿಡಿಕಾರಿದ್ರು‌.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ; ಶ್ರೀರಾಮಸೇನೆ ಮುತ್ತಿಗೆ

ಒಟ್ಟಾರೆ ಇಷ್ಟುದಿನದಿಂದ ವಿವಾದ ಕೇಂದ್ರ ಬಿಂದುವಾಗಿದ್ದ ಈದ್ಗಾ ಮೈದಾನ ಈಗ ಸಾರ್ವಜನಿಕವ ಸಭೆ ಸಮಾರಂಭಗಳಿಗರ ಮುಕ್ತ ಮಾಡಲಾಗಿದೆ. ಯಾವುದೇ ಸಂಘ ಸಂಸ್ಥೆ ಧಾರ್ಮಿಕ ಆಚರಣೆಗಳಿಗೆ  ಮೈದಾನವನ್ನ ಬಾಡಿಗೆ ರೂಪದಲ್ಲಿ ಅನುಮತಿ ಒಡೆದು  ಬಳಕೆ ಮಾಡಲು‌ಮುಕ್ತ ಮಾಡಲಾಗಿದೆ. ಕೇವಲ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗಿದರೆ, ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಮುಕ್ತವಾಗಿದೆ. ಸರ್ವ ಧರ್ಮಗಳ ಹಿತಕ್ಕಾಗಿ ಪಾಲಿಕೆ  ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ವಿವಾದಕ್ಕೆ ಶಾಶ್ವತ ತೆರೆ ಎಳೆದಂತಾಗಿದೆ.

click me!