ಶ್ವದ ಜನಸಂಖ್ಯೆಯಲ್ಲಿ ಭಾರತ ನಂ.1 ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿ ಪ್ರತಿ ಗಂಟೆಗೆ 3,321 ಜನನ ಸಂಖ್ಯೆ ಇದೆ. ಈ ರೀತಿಯ ವೇಗದ ಜನಸಂಖ್ಯೆ ಬೆಳವಣಿಗೆ ದೇಶದ ಪ್ರಗತಿಗೆ ಪೂರಕವಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗಲೀಕರ್ ಹೇಳಿದರು.
ಶಿವಮೊಗ್ಗ (ಜು.11) : ವಿಶ್ವದ ಜನಸಂಖ್ಯೆಯಲ್ಲಿ ಭಾರತ ನಂ.1 ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿ ಪ್ರತಿ ಗಂಟೆಗೆ 3,321 ಜನನ ಸಂಖ್ಯೆ ಇದೆ. ಈ ರೀತಿಯ ವೇಗದ ಜನಸಂಖ್ಯೆ ಬೆಳವಣಿಗೆ ದೇಶದ ಪ್ರಗತಿಗೆ ಪೂರಕವಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ನಾಗಲೀಕರ್ ಹೇಳಿದರು.
ನಗರದ ತುಂಗಾನಗರ ಪ್ರಸೂತಿ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ, ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಂಖ್ಯಾ ಚರ್ಚೆ: ಭಾರತದ ಜನಗಣತಿಯ ಅಂಕಿಅಂಶಗಳು ನಂಬಿಕಾರ್ಹವೇ?
ಸದ್ಯ ಭಾರತದ ಜನಸಂಖ್ಯೆ 142 ಕೋಟಿ ದಾಟಿದೆ. ಕರ್ನಾಟಕದಲ್ಲೂ ಜನಸಂಖ್ಯೆ 7 ಕೋಟಿ ಸನಿಹದಲ್ಲಿದೆ. ದೇಶದಲ್ಲಿ ಪ್ರತಿದಿನ 79,726 ಮಕ್ಕಳ ಜನನವಾಗುತ್ತಿದ್ದು, ಪ್ರತಿ ಗಂಟೆಗೆ 3321 ಮಕ್ಕಳ ಹುಟ್ಟು ಆಗುತ್ತಿದೆ. ಈ ರೀತಿಯ ವೇಗದ ಜನಸಂಖ್ಯೆ ಬೆಳವಣಿಗೆ ದೇಶದ ಪ್ರಗತಿಗೆ ಪೂರಕವಲ್ಲ. ಆರೋಗ್ಯವಂತ ಕುಟುಂಬ ಹೊಂದಲು ಸಾಧ್ಯ ಆಗುವುದಿಲ್ಲ. ನಿರುದ್ಯೋಗ, ಆಹಾರ, ವಸತಿ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಆದ್ದರಿಂದ ಜನಸಂಖ್ಯೆಗೆ ಕಡಿವಾಣ ಹಾಕಲೇಬೇಕಿದೆ. ರೂಢಿ, ಸಂಪ್ರದಾಯ, ಮೂಢನಂಬಿಕೆ ಇತರೆ ಆಚರಣೆ ಹಂಗನ್ನು ತೊರೆದು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕುಟುಂಬ ಕಲ್ಯಾಣ ವಿಧಾನಗಳು ಲಭ್ಯವಿದೆ. ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳಾದ ಶಸ್ತ್ರಚಿಕಿತ್ಸೆ, ಗರ್ಭನಿರೋಧಕ ಚುಚ್ಚುಮದ್ದು ಗರ್ಭನಿರೋಧಕ ಮಾತ್ರೆಗಳು ಇತರೆ ನೂತನ ವಿಧಾನಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ತಾಯಿ ಮರಣ ಮತ್ತು ಶಿಶುಮರಣ ತಗ್ಗಿಸಬಹುದು ಎಂದರು.
ಉಪ ಮೇಯರ್ ಲಕ್ಷಿ ್ಮೕಶಂಕರ್ ನಾಯ್ಕ… ಮಾತನಾಡಿ, ಜನಸಂಖ್ಯೆ ನಿಯಂತ್ರಣದ ಕುರಿತು ನಾವು ನಮ್ಮ ಸುತ್ತಮುತ್ತ ಮುಖ್ಯವಾಗಿ ಅಲೆಮಾರಿ, ವಲಸೆ ಬರುವ ಸಮುದಾಯಗಳಿಗೆ ಅರಿವು ಮೂಡಿಸಬೇಕು. ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯವನ್ನು ಇವರಿಗೆ ತಲುಪಿಸಬೇಕು ಎಂದರು.
ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಮಾತನಾಡಿ, ಹಿಂದೆಲ್ಲ ಮನೆಯಲ್ಲಿ ಆರೆಂಟು ಮಕ್ಕಳು ಸಾಮಾನ್ಯವಾಗಿತ್ತು. ಆದರೆ, ಜನಸಂಖ್ಯೆ ಸ್ಫೋಟಗೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಮಕ್ಕಳು ಹೊರೆ ಅನ್ನೋ ಸ್ಥಿತಿ ಎದುರಾಗಿದೆ. ಜೀವನಶೈಲಿ ಬದಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಎಲ್ಲವನ್ನು ನೀಡಿ ಅವರನ್ನು ಅತ್ಯಂತ ಜವಾಬ್ದಾರಿ ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರಿಗಿದೆ ಎಂದು ಹೇಳಿದರು.
ಇಂದಿನ ವೈಜ್ಞಾನಿಕ ಯುಗದಲ್ಲೂ ಹೆಣ್ಣುಮಗು ಹುಟ್ಟಿದ ನಂತರ ಗಂಡಾಗಲಿ ಎಂದು ಕಾಯುವವರಿದ್ದಾರೆ. ಆದರೆ, ಪ್ರಸ್ತುತ ಗಂಡು, ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ಸರಿಸಮಾನವಾಗಿದ್ದಾರೆ. ಹೆಣ್ಣೇ ಹೆಚ್ಚು ಸ್ಪಂದನೀಯವಾಗಿದ್ದು, ಹೆಣ್ಣೆಂದು ಹಿಂಜರಿಯವುದನ್ನು ಬಿಡಬೇಕು. ಜನಸಂಖ್ಯೆ ನಿಯಂತ್ರಣ ಮಾಡಬೇಕು ಎಂದು ಸಲಹೆ ನೀಡಿದರು.
ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ… ಮಾತನಾಡಿ, ಜನಸಂಖ್ಯೆ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯ. ಜನಸಂಖ್ಯೆ ಹೆಚ್ಚಿದಷ್ಟುಸಮಸ್ಯೆಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ಆಹಾರ, ಶಿಕ್ಷಣ, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತವೆ. ಸಮತೋಲನ ಜೀವನ ನಡೆಸಲು ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ. ಎಲ್ಲ ಇಲಾಖೆಗಳು ಕೈಜೋಡಿಸಿ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ ಆಗಬೇಕು ಎಂದರು.
India Population Surpasses China: ಚೀನಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಗರಿಷ್ಠ ಜನಸಂಖ್ಯೆಯ ದೇಶವಾಗಲಿದೆ ಭಾರತ!
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ, ನಗರ ಪ್ರಸೂತಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭೀಮಪ್ಪ, ಡಾ.ಹರ್ಷವರ್ಧನ್, ಎಫ್ಪಿಎ ಪ್ರತಿನಿಧಿ ಪುಷ್ಪಾ ಶೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಸಿಬ್ಬಂದಿ ಹಾಜರಿದ್ದರು.
ಜಾಗೃತಿ ಮೂಡಿಸಬೇಕು: ಮೇಯರ್
ಪಾಲಿಕೆ ಮೇಯರ್ ಎಸ್.ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮಗಳು ಹಾಗೂ ಜನಸಂಖ್ಯೆ ನಿಯಂತ್ರದ ಬಗ್ಗೆ ಅಲೆಮಾರಿ, ಸ್ಲಂ, ವಲಸಿಗರು ವಾಸಿಸುವ ಸ್ಥಳಗಳಲ್ಲಿ ಹೆಚ್ಚು ಅರಿವು ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಜನಸಂಖ್ಯೆ ಹೆಚ್ಚಾದಷ್ಟುನಮಗೆ ಎಲ್ಲ ಸೌಲಭ್ಯಗಳು ಕಡಿಮೆ ಆಗುತ್ತವೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದÜರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಎಲ್ಲ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.