ದಸರಾ ಮಹೋತ್ಸವ: ಇಂದು ಗಜ ಪಯಣ ಆರಂಭ

By Suvarna NewsFirst Published Aug 7, 2022, 11:06 AM IST
Highlights

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕಾಗಿ ಇಂದು ಗಜಪಡೆ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳೆಸಲಿದೆ.  ನಾಡಹಬ್ಬವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕಾಗಿ ಇಂದು ಗಜಪಡೆ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳೆಸಲಿದೆ.  ನಾಡಹಬ್ಬವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ದಸರಾದ ಪ್ರಮುಖ ಭಾಗವಾಗಿರುವ ಜಂಬೂ ಸವಾರಿಗೆ ಅಭಿಮನ್ಯು ನೇತೃತ್ವದ ಗಜಪಡೆ  ಮೈಸೂರಿಗೆ ಕಾಲಿಡಲಿದ್ದು, ದಸರಾ ಪೂರ್ವ ಜಂಬೂ ಸವಾರಿ ತಾಲೀಮು ನಡೆಸಲಿದೆ. 57 ವರ್ಷದ ಅಭಿಮನ್ಯು, 22 ವರ್ಷದ ಭೀಮ, 38 ವರ್ಷದ ಮಹೇಂದ್ರ ಹಾಗೂ 39 ವರ್ಷದ ಗೋಪಲಸ್ವಾಮಿ ಹಾಗೂ ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ. ದುಬಾರೆ ಆನೆ ಶಿಬಿರದಿಂದ‌ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ ಹಾಗೂ 63 ವರ್ಷದ ವಿಜಯಾ ಆನೆ ಆಯ್ಕೆಯಾಗಿದ್ದು, ಇಂದು ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳೆಸಲಿದ್ದಾರೆ.

ಇವರ ಜೊತೆಗೆ ರಾಮಾಪುರ ಆನೆ‌ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮಿ ಹಾಗೂ‌ 18 ವರ್ಷದ ಪಾರ್ಥಸಾರಥಿ ಆನೆಗಳು ಆಗಮಿಸಲಿವೆ. ಇಂದು ಹುಣಸೂರು ತಾಲೂಕಿನ ವೀರನ ಹೊಸಹಳ್ಳಿಯಿಂದ ಗಜಪಡೆಯ ಮೊದಲ‌ ತಂಡ ಆಗಮಿಸಲಿದ್ದು, ಈ ಮೊದಲ ತಂಡದಲ್ಲಿ‌  9 ಆನೆಗಳು ಆಗಮಿಸಲಿವೆ. ಅರಮನೆಗೆ ಬರುವ ಮಾವುತ ಕಾವಾಡಿ ಕುಟುಂಬಗಳಿಗಾಗಿ ಈಗಾಗಲೇ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ.

ಈ ಸಲ ಅದ್ಧೂರಿಯಾಗಿ ದಸರಾ ಮಹೋತ್ಸವ: ಸರ್ಕಾರದ ನಿರ್ಧಾರ

ದಸರಾ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಮಾವುತರು ಕಾವಾಡಿಗರು

ಸಾಕಾನೆ ಶಿಬಿರಗಳ ಆನೆ ಮಾವುತರು, ಕಾವಡಿಗರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಬಾರಿ ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕಾವಡಿಗರ ಸಂಘ ಆಗಸ್ಟ್‌ 3 ರಂದು ನಿರ್ಧರಿಸಿತ್ತು. ವೇತನ ತಾರತಮ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಮನವಿ ಮಾಡಿದರೂ ಇದುವರೆಗೆ ಈಡೇರದ ಕಾರಣ ಈ ಬಾರಿ ದಸರಾಗೆ ಸಾಕಾನೆಗಳನ್ನು ಕಳುಹಿಸದೆ ಪ್ರತಿಭಟನೆ ಹಮ್ಮಿಕೊಳ್ಳಲು ದುಬಾರೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕುಶಾಲನಗರ ವಲಯ ದುಬಾರೆ ಸಂಘದ ಅಧ್ಯಕ್ಷ ಅಣ್ಣಯ್ಯ ದೊರೆಯಪ್ಪ ಅಂದು ತಿಳಿಸಿದ್ದರು. 

ಅದ್ದೂರಿಯಾಗಿ ದಸರ ಆಚರಿಸಲು ಸಕಲ ಸಿದ್ಧತೆ:

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕಾಗಿ ಕಳೆಗುಂದಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಯು ಈಗಾಗಲೇ ಆರಂಭವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷವೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲಾಗಿತ್ತು. ಈ ಬಾರಿ ಕೋವಿಡ್‌ ಕರಿನೆರಳು ಮಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ದಸರಾ ಮಹೋತ್ಸವ ಆಚರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹೀಗಾಗಿ, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ತೆರೆಮರೆಯಲ್ಲಿ ಜಿಲ್ಲಾಡಳಿತವು ಮಾಡಿಕೊಳ್ಳುತ್ತಿದೆ.

ಅಂಬಾರಿ ಹೊತ್ತ ಆನೆ ‘ಅಭಿಮನ್ಯು’ವಿನ ಪರಾಕ್ರಮ

ದಸರಾ ಸಿದ್ಧತೆಗೆ ಮುನ್ನುಡಿ ಎಂಬಂತೆ ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ, ಉದ್ಯಾನವನದಲ್ಲಿ ಬೆಳೆದಿರುವ ಅನಗತ್ಯ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸುವ ಕಾರ್ಯವು ಆರಂಭವಾಗಿದೆ. ಮಹಿಳಾ ಮತ್ತು ಪುರುಷ ಕಾರ್ಮಿಕರು ಅರಮನೆ ಆವರಣದಲ್ಲಿ ಬೆಳೆದಿರುವ ಸಣ್ಣಪುಟ್ಟಗಿಡಗಂಟೆಗಳನ್ನು ಕಿತ್ತು ಸ್ವಚ್ಛಗೊಳಿಸುತ್ತಿದ್ದಾರೆ. 
 

click me!