ರಾಮನಗರ ಧಾರಾಕಾರ ಮಳೆ; ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳು ಸಾವು

By Ravi Nayak  |  First Published Aug 7, 2022, 8:39 AM IST

ರಾಮನಗರದಲ್ಲಿ ಕಳೆದೆರಡು ದಿನಗಳಿಂದ ಗುಡುಗು ಸಹಿತ ಧಾರಕಾರ ಮಳೆ ಸುರಿದ ಹಿನ್ನೆಲೆ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ದುರ್ಘಟನೆ ಸೋಲೂರು ಗ್ರಾಮದಲ್ಲಿ ನಡೆದಿದೆ.


ರಾಮನಗರ (ಆ.7) : ರಾಮನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಶೆಡ್ ಮೇಲೆ ದನದ ಕೊಟ್ಟಿಗೆ ಕುಸಿದು ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಕೊಟ್ಟಿಗೆ ಕುಸಿದು ಬಿದ್ದು ದುರಂತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಪರ್ಭಿನ್ (4), ಇಷಿಕಾ (3) ಮಕ್ಕಳು ಮೃತಪಟ್ಟಿದ್ದಾರೆ. ಮೀನಾ ಬಿತ್ತು, ಮೋನಿಷಾ ಎಂಬುವವರಿಗೆ ಗಾಯಗಳಾಗಿವೆ. ನೇಪಾಳ ಮೂಲದವರಾಗಿದ್ದು,  ಒಂದೇ ಶೆಡ್ ನಲ್ಲಿ ಎರಡು ಕುಟುಂಬಗಳು ವಾಸವಾಗಿದ್ದರು. ಹಲವು ವರ್ಷಗಳಿಂದ ಸ್ಥಳೀಯ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. ಹೋಟೆಲ್ ಪಕ್ಕದ ಶೆಡ್‌ಗೆ ತಾಗಿಕೊಂಡಂತೆ ಇದ್ದ ಕೊಟ್ಟಿಗೆ ಕುಸಿದು ಬಿದ್ದಿದೆ.ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದ್ದು ಮೃತ ದೇಹ, ಗಾಯಾಳುಗಳು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 

Tap to resize

Latest Videos

ರೇಷ್ಮೆ ನಗರಿ ರಾಮನಗರದಲ್ಲಿ ಮುಂದುವರಿದ ಮಳೆ ಅಬ್ಬರ, ಅಪಾರ ಪ್ರಮಾಣದ ಬೆಳೆ ನಾಶ 

ನೀರಿನ ರಭಸಕ್ಕೆ ಕುಸಿದ ಬಿದ್ದ ಸೇತುವೆ:
  ರಾಮನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನಲೆ ನೀರಿನ ರಭಸಕ್ಕೆ ಕುಸಿದು ಬಿದ್ದ ಸೇತುವೆ ಕೊಂಡಾಪುರ-ಬಾಣಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗ್ರಾಮ ಕಣ್ವ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನಲೆ ಕುಸಿದು ಬಿದ್ದ ಸೇತುವೆ ಕೊಂಡಾಪುರ-ಬಾಣಹಳ್ಳಿ ಗ್ರಾಮಗಳ ಸಂಪರ್ಕ ಕಟ್ ಗ್ರಾಮಗಳಲ್ಲಿನ ಜನರು ಇದೀಗ ಹತ್ತಾರು ಕಿಮೀ ಗಟ್ಟಲೆ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಡ್ಯದಲ್ಲಿ ಮುಂದುವರಿದ ಮಳೆ ಅವಾಂತರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ  ಕೋಡಿ ಬಿದ್ದ ಕೆರೆ. ಕೆರೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ರಸ್ತೆ. ಕೆಆರ್‌ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಘಟನೆ. ರಸ್ತೆ ಇಲ್ಲದೇ ಪರದಾಡುತ್ತಿರುವ ಜನರು. ರಸ್ತೆ ಇಲ್ಲದ ಕಾರಣ ನೀರಿನಲ್ಲಿ ಜನರ ಸರ್ಕಸ್. ಕೆರೆಯಿಂದ ಬರುತ್ತಿರುವ ನೀರಿನಲ್ಲಿ ಜನರ ದುಸ್ಸಾಹಸ. ಊರಿಗೆ ಹೋಗಲು ನೀರಿನ ಮಧ್ಯೆ ನಡೆದು ಹೋಗುತ್ತಿರುವ ಜನ. ಸ್ವಲ್ಪ ಯಾಮಾರಿದ್ರು ಅಪಾಯ ಎದುರಾಗುವ ಸಾಧ್ಯತೆ.

click me!