ದಾವಣಗೆರೆ ಗಿಳಿವಿಂಡು ಬಳಗದ ಸಂಯೋಜನೆಯಲ್ಲಿ ಜೂ.5 ರಂದು ಸಂಜೆ 5.30 ಕ್ಕೆ ನಗರದ ಜನತಾ ಬಜಾರ್ ಟೆರೇಸ್ ಮೇಲೆ ಗಿಳಿವಿಂಡು ನೋಡೊಣ ಬನ್ನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ದಾವಣಗೆರೆ (ಜೂನ್ 3): ದಾವಣಗೆರೆ ಗಿಳಿವಿಂಡು ಬಳಗದ ಸಂಯೋಜನೆಯಲ್ಲಿ ಜೂ.5 ರಂದು ಸಂಜೆ 5.30 ಕ್ಕೆ ನಗರದ ಜನತಾ ಬಜಾರ್ ಟೆರೇಸ್ ಮೇಲೆ ಗಿಳಿವಿಂಡು ನೋಡೊಣ ಬನ್ನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಎಸ್‌ಟಿ ವಿರೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗಿಳಿವಿಂಡು ನೋಡೊಣ ಬನ್ನಿ ಹೆಸರಿನಲ್ಲಿ ಪಕ್ಷಿ ಸಂಕುಲ ಉಳಿಸಿ ಬೆಳೆಸುವ ಕುರಿತು ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮೇಯರ್ ವಿನಾಯಕ ಪೈಲ್ವಾನ್ ಉದ್ಘಾಟನೆ ನೆರವೇರಿಸಲಿದ್ದಾರೆ.ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶಿಶುಪಾಲ್ ಉಪನ್ಯಾಸ ನೀಡಲಿದ್ದಾರೆ.ಜನತಾ ಬಜಾರ್ ಅಧ್ಯಕ್ಷ ಗುರುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಎಸ್.ಟಿ ವೀರೇಶ್,ಹಿರಿಯ ಪತ್ರಕರ್ತ ಕೆ.ಚಂದ್ರಣ್ಣ,ಎಸ್ ಬಿಎಂ ನಿವೃತ್ತ ಅಧಿಕಾರಿ ಅಜಿತ್ ಕುಮಾರ್ ಆಗಮಿಸಲಿದ್ದಾರೆ ಎಂದರು.
ಕೆಲಸಕ್ಕೆ ಹೋಗು ಎಂದಿದ್ದೇ ತಪ್ಪಾಯ್ತು, ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪತಿ!
ಜನತಾ ಬಜಾರ್ ,ರೈಲ್ವೆ ನಿಲ್ದಾಣ,ಪಾಲಿಕೆ ಸುತ್ತಮುತ್ತಲಿನಲ್ಲಿ ಸುಮಾರು 25 ರಿಂದ 30 ಸಾವಿರ ಗಿಳಿಗಳು ದೊಡ್ಡ ದೊಡ್ಡ ಮರದಲ್ಲಿ ವಾಸವಾಗಿವೆ. ಬೆಳಗಿನ ಸಮಯದಲ್ಲಿ ಸುಮಾರು 100 ರಿಂದ 150 ಕಿ.ಮಿ ದೂರದಲ್ಲಿ ಸಂಚಾರ ಮಾಡುತ್ತವೆ.ಸಂಜೆ ವೇಳೆಗೆ ಮರದಲ್ಲಿ ವಾಸವಾಗಿರುತ್ತವೆ. ಪಕ್ಷಿ ಸಂಕುಲ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಸ್ಲಿಂರ ಮನೆಯಲ್ಲಿ ಎರಡು-ಮೂರು ಹೆಂಡ್ತಿ, ಅವರಲ್ಲಿ ಯಾರು ಯಜಮಾನಿ?: ಪ್ರತಾಪ್ ಸಿಂಹ
ಮಧ್ಯ ಕರ್ನಾಟಕದಲ್ಲಿರುವ ವಿಶೇಷ ಗಿಳಿವಿಂಡು ಆವಾಸ ಸ್ಥಾನ ಇದಾಗಿದ್ದು ಬೆಳಿಗ್ಗೆ ಸಂಜೆ ಗಿಳಿವಿಂಡು ನೋಡಲು ನೂರಾರು ಜನ ಆಗಮಿಸುತ್ತಾರೆ. ದಾವಣಗೆರೆ ರೈಲ್ವೆ ನಿಲ್ದಾಣ, ಮಹಾನಗರ ಪಾಲಿಕೆ ಅಂಚೆಕಚೇರಿ , ಗಡಿಯಾರ ಕಂಬ ಈ ಭಾಗದಲ್ಲಿರುವ ಬೃಹತ್ ಮರಗಳ ಮೇಲೆ ಇವುಗಳ ಆವಾಸ ಸ್ಥಾನವಿದೆ.ಈ ಗಿಳಿವಿಂಡಿನ ಬಗ್ಗೆ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಪರಿಸರ ಪ್ರೇಮಿಗಳ ,ಸಾರ್ವಜನಿಕ ವಲಯದಲ್ಲಿ ವಿಶೇಷ ಕುತೂಹಲವಿದೆ. ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಸಕ್ಕಟ್ಟು,ಎಂ.ಜಿ ಶ್ರೀಕಾಂತ್, ಅಶೋಕ್,ವಸಂತ್ ಉಪಸ್ಥಿತರಿದ್ದರು.