ನಾಳೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾ ಇದೆಯಾ ನೋಡಿ

By Sathish Kumar KHFirst Published Jun 3, 2023, 4:08 PM IST
Highlights

ನಾಳೆ ಭಾನುವಾರ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು (ಜೂ.03):  ಬ್ಯಾಡರಹಳ್ಳಿ ಹಾಗೂ ಶ್ರೀಗಂಧಕಾವಲಿನ ಬೆಸ್ಕಾಂ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಭಾನುವಾರ (ಜೂ.04) ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ( Bengaluru Electricity Supply) ಉಂಟಾಗಲಿದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಇಂಜಿನಿಯರ್ ಕಾಶಿ ರಾಮ ಪವಾರ್ ಮಾಹಿತಿ ನೀಡಿದ್ದಾರೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಸುಕಂದಕಟ್ಟೆ ಹೇರೋಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ತುಂಗಾನಗರ, ಹೊಸಳ್ಳಿ ಅನ್ನಪೂರ್ಣೇಶ್ವರಿ ನಗರ, ನೆಟ್ಟಕಲ್ಲಪ್ಪ ಇಂಡಸ್ಟ್ರಿಯಲ್ ಏರಿಯಾ, ಶಂಕ್ರಪ್ಪ ಇಂಡಸ್ಟ್ರಿಯಲ್ ಏರಿಯಾ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಬ್ಯಾಡರಹಳ್ಳಿ, ಬಿಇಎಲ್ ಎರಡನೇ ಹಂತ, ಅಂಜನಾನಗರ, ಗಿಡದಕೋನೇನಹಳ್ಳಿ, ಮುದ್ದಿನಪಾಳ್ಯ, ಬಿಡಿಎ 8 ಹಾಗೂ 9ನೇ ಬ್ಲಾಕ್, ಉಪಕಾರ ಲೇಔಟ್, ಗೊಲ್ಲರಹಟ್ಟಿ ಡಿ ಗ್ರೂಪ್ ಎಸ್ಟೇಟ್, ಚಿಕ್ಕ ಗೊಲ್ಲರಹಟ್ಟಿ, ಬಿಎಂಟಿಸಿ ಡಿಪೋ, ಪೈಪ್ ಲೈನ್ ರೋಡ್  ಸುತ್ತಮುತ್ತಲ ಪ್ರದೇಶಗಳಲ್ಲಿ ಜೂ. 4ರಂದು ವಿದ್ಯುತ್ ಸ್ಥಗಿತವಾಗಲಿದೆ.

ಸಾರಿಗೆ ವಾಹನದಲ್ಲಿ ಗಂಡಸರಿಗೆ ಮಾತ್ರ ಬೋರ್ಡ್, ಮಹಿಳೆಯರ ಫ್ರೀ ಬಸ್ ಪ್ರಯಾಣ ಫುಲ್ ಟ್ರೋಲ್!

ರಾಜ್ಯದ ಜನತೆಗೆ ಜು.1ರಿಂದ 200 ಯೂನಿಟ್‌ ವಿದ್ಯುತ್‌ ಫ್ರೀ: ರಾಜ್ಯದ ಗೃಹ ಬಳಕೆದಾರರಿಗೆ ಗರಿಷ್ಠ 200 ಯುನಿಟ್‌ ಉಚಿತ ವಿದ್ಯುತ್‌ ಒದಗಿಸುವ ‘ಗೃಹ ಜ್ಯೋತಿ’ ಯೋಜನೆ ಜುಲೈ 1ರಿಂದ ಬಳಕೆಯಾಗುವ ವಿದ್ಯುತ್‌ಗೆ ಅನ್ವಯವಾಗಲಿದ್ದು, ಹೀಗಾಗಿ ನಿಗದಿತ ಪ್ರಮಾಣದ ವಿದ್ಯುತ್‌ ಬಳಕೆದಾರರು ಆ.1ರಿಂದ ವಿದ್ಯುತ್‌ ಬಿಲ್‌ ಪಾವತಿಸುವ ಅವಶ್ಯಕತೆಯಿಲ್ಲ. ಆದರೆ, ಜುಲೈ 1ರವರೆಗೆ ಬಳಕೆ ಮಾಡಿರುವ ವಿದ್ಯುತ್‌ನ ಯಾವುದೇ ಶುಲ್ಕ (ಬಿಲ್‌) ಪಾವತಿ ಬಾಕಿ ಇಟ್ಟುಕೊಳ್ಳಬಾರದು. ಈ ಬಾಕಿ ಪಾವತಿಗೆ 3 ತಿಂಗಳ ಗಡುವು ವಿಧಿಸಿ ಪೂರ್ಣ ಪ್ರಮಾಣದ ಶುಲ್ಕ ವಸೂಲಿ ಮಾಡಲಾಗುತ್ತದೆ. ಇದನ್ನು ಸರ್ಕಾರ ಭರಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಿದ್ದಾರೆ.

ಉಚಿತ ವಿದ್ಯುತ್‌ಗೆ ಷರತ್ತುಗಳೇನು?:
ಗರಿಷ್ಠ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಘೋಷಿಸಿದ್ದರೂ, ಫಲಾನುಭವಿಗಳ ವಿದ್ಯುತ್‌ ಬಳಕೆಯ ಹಿಂದಿನ 12 ತಿಂಗಳ ಸರಾಸರಿಯನ್ನು ಲೆಕ್ಕಹಾಕಿ ಅದಕ್ಕೆ ಶೇಕಡಾ 10 ರಷ್ಟುಹೆಚ್ಚುವರಿ ಯುನಿಟ್‌ಗಳನ್ನು ಕೂಡಿ ಅಷ್ಟುಬಳಕೆವರೆಗೆ ಮಾತ್ರ ಉಚಿತ ವಿದ್ಯುತ್‌ ನೀಡಲಾಗುವುದು. ಉದಾಹರಣೆಗೆ, ಒಂದು ಮನೆಯ ವಿದ್ಯುತ್‌ ಬಿಲ್‌ನ 12 ತಿಂಗಳ ಸರಾಸರಿ ಬಳಕೆ 100 ಯುನಿಟ್‌ ಆಗಿದ್ದರೆ ಹೆಚ್ಚುವರಿ 10 ಯುನಿಟ್‌ (ಶೇ.10) ಸೇರಿಸಿ ಪ್ರತಿ ತಿಂಗಳು 110 ಯುನಿಟ್‌ ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡಲಾಗುವುದು. ಅದಕ್ಕಿಂತ ಹೆಚ್ಚು ಬಳಕೆ ಮಾಡಿದರೆ ಹೆಚ್ಚುವರಿ ಬಳಕೆಗೆ ತಕ್ಕಂತೆ ಶುಲ್ಕ ಪಾವತಿಸಬೇಕು. ಉದಾ: 110 ಯುನಿಟ್‌ ಉಚಿತ ವಿದ್ಯುತ್‌ಗೆ ಅರ್ಹತೆ ಹೊಂದಿರುವವರು 130 ಯುನಿಟ್‌ ಬಳಸಿದರೆ ಹೆಚ್ಚುವರಿ 20 ಯುನಿಟ್‌ನ ಶುಲ್ಕ ತೆರಬೇಕಾಗುತ್ತದೆ. ಇನ್ನು 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕು ಎಂದು ಹೇಳಲಾಗಿದೆ.

ಬಾಂಗ್ಲಾ ವಲಸಿಗರೆಂದು ಬೆಂಗಳೂರು ಜೈಲಲ್ಲಿ 301 ದಿನ ಬಂಗಾಳ ದಂಪತಿ ಬಂಧಿ..!

ಬಾಡಿಗೆದಾರರಿಗೂ ಉಚಿತ ವಿದ್ಯುತ್‌!:
ಇನ್ನು ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್‌ ಸೌಲಭ್ಯ ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಬಾಡಿಗೆ ಮನೆಗಳ ವಿದ್ಯುತ್‌ ಸಂಪರ್ಕದ ಮೀಟರ್‌ (ಆರ್‌.ಆರ್‌. ನಂಬರ್‌) ಮನೆ ಮಾಲೀಕರ ಹೆಸರಿನಲ್ಲಿರುತ್ತದೆ. ಅದನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟನೆ ದೊರಕಿಲ್ಲ. ಆದರೆ, ಬಾಡಿಗೆ ಮನೆಗಳಲ್ಲಿರುವವರಿಗೂ ಗೃಹ ಜ್ಯೋತಿ ಖಚಿತ ಎಂದು ಹೇಳಿದ್ದಾರೆ.

click me!