Bengaluru- ಬಿಬಿಎಂಪಿ ರಾಜಕಾಲುವೆಗೆ ಬಿದ್ದ ಪೌರಕಾರ್ಮಿಕ ಮಹಿಳೆ: ಬೆನ್ನು ಮೂಳೆ ಪುಡಿ, ಪುಡಿ

By Sathish Kumar KH  |  First Published Jun 3, 2023, 4:59 PM IST

ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ಮಿಸಿದ್ದ ರಾಜಕಾಲುವೆಯೊಳಗೆ ಕಸ ಸ್ವಚ್ಛಗೊಳಿಸುವ ವೇಳೆ ಪೌರಕಾರ್ಮಿಕ ಮಹಿಳೆ ಕುಸಿದುಬಿದ್ದು ಗಾಯಗೊಂಡಿದ್ದಾರೆ.


ಬೆಂಗಳೂರು (ಜೂ.03): ಬಿಬಿಎಂಪಿಯ ಕಳಪೆ ಕಾಮಗಾರಿ ಮತ್ತು ನಿರ್ಲಕ್ಷ್ಯದ ಪರಮಾವಧಿಗೆ ಅದೆಷ್ಟೋ ಸಾರ್ವಜನಿಕರು ಬಲಿಯಾಗಿದ್ದಾರೆ. ಈಗ ನಗರದ ನಂದಿನಿ ಲೇಔಟ್‌ನಲ್ಲಿ ಬಿಬಿಎಂಪಿ ನಿರ್ಮಿಸಿದ್ದ ರಾಜಕಾಲುವೆ ಮೇಲೆ ಮ್ಯಾನ್‌ಹೋಲ್‌ ಮುಚ್ಚದೇ ಕೈಬಿಟ್ಟಿದ್ದು, ಕಸವನ್ನು ಸ್ವಚ್ಛಗೊಳಿಸಲು ಹೋದ ಪೌರಕಾರ್ಮಿಕ ಮಹಿಳೆ ರಾಲುವೆಯೊಳಗೆ ಬಿದ್ದು, ಬೆನ್ನು ಮೂಳೆಗಳನ್ನು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ಮಾಡುವ ಕಾಮಗಾರಿಗಳು ಕಳಪೆಯಾಗಿರುತ್ತವೆ ಹಾಗೂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ ಎಂಬ ಆರೋಪಗಳನ್ನು ನಾವು ಕೇಳುತ್ತಲೇ ಬರುತ್ತಿದ್ದೇವೆ. ಆದರೆ, ಈಗ ಬಿಬಿಎಂಪಿಯ ಅಧಿಕಾರಿ ಮತ್ತು ನಿರ್ಲಕ್ಷ್ಯಕ್ಕೆ ಈಗ ಬಿಬಿಎಂಪಿ ಸ್ವಚ್ಛತಾ ಸಿಬ್ಬಂದಿಯೇ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Tap to resize

Latest Videos

undefined

ನಾಳೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾ ಇದೆಯಾ ನೋಡಿ

ರಾಜಕಾಲುವೆ ಮೇಲೆ ಹಾಕಿದ್ದ ಕಸ ಗುಡಿಸಲು ಹೋದಾಗ ದುರ್ಘಟನೆ: ನಗರದಲ್ಲಿ ಪ್ರತಿದಿನ ಬೆಳಗ್ಗೆ ಕಸ ಗುಡಿಸುವ ಕೆಲಸ‌ ಮಾಡುತ್ತಿದ್ದಂತೆ ಶನಿವಾರ ಬೆಳಗ್ಗೆಯೂ ಕೂಡ ನಂದಿನೆ ಲೇಔಟ್‌ನಲ್ಲಿ ಸ್ವಚ್ಛತಾ ಕೆಲಸ ಮಾಡುವ ವೇಳೆ ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ  ರಾಜಕಾಲುವೆಗೆ ಬಿದ್ದು ಬೆನ್ನು ಮೂಳೆಯನ್ನು ಮುರಿದುಕೊಂಡಿದ್ದಾರೆ. ಘಟನೆಯ ಬಗ್ಗೆ ಬರುವುದಾದರೆ ಪ್ರತಿನಿತ್ಯ ಕಸ ಗುಡಿಸುತ್ತಿದ್ದಂತೆ ರಾಜಕಾಲುವೆ ಮೇಲೆ ಹಾಕಲಾಗಿದ್ದ ಕಸವನ್ನು ಸ್ವಚ್ಛಗೊಳಿಸಲು ಮಹಿಳೆ ಹೋಗಿದ್ದಾರೆ. ಆದರೆ, ರಾಜಕಾಲುವೆಯ ಮ್ಯಾನ್‌ಹೋಲ್‌ ಮೇಲೆ ಕಸ ಹಾಕಲಾಗಿದ್ದು, ಕಸವನ್ನು ಎತ್ತಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟ ಕೂಡಲೇ ಮಹಿಳೆ ಕಾಲುವೆಯೊಳಗೆ ಬಿದ್ದಿದ್ದಾರೆ. ಆದರೆ, ಆಳವಾದ ಕಾಲುವೆಗೆ ಬಿದ್ದ ರಭಸಕ್ಕೆ ಬೆನ್ನಿನ ಮೂಳೆಗಳು ಮುರಿದು ಪುಡಿ, ಪುಡಿ ಆಗಿವೆ. ಅಲ್ಲಿಂದ ಮೇಲೆ ಎದ್ದೇಳಲು ಸಾಧ್ಯವಾಗದೇ ರಾಜಕಾಲುವೆಯಲ್ಲಿ ನರಳಾಡುತ್ತಿದ್ದ ಮಹಿಳೆಯನ್ನು ಇತರೆ ಸಿಬ್ಬಂದಿ ನೋಡಿ ರಕ್ಷಣೆ ಮಾಡಿದ್ದಾರೆ.

ನಂದಿನಿ ಲೇಔಟ್ ನ ಶ್ರೀಕಂಠ ನಗರದಲ್ಲಿ ಘಟನೆ: ಇನ್ನು ಪೌರಕಾರ್ಮಿಕ ಮಹಿಳೆ ಬಿದ್ದ ರಾಜಕಾಲುವೆ 20 ಅಡಿ ಆಳದ ರಾಜಕಾಲುವೆಗೆ ಬಿದ್ದು ಮುರಿದ ಸ್ವಚ್ಚತಾ ಸಿಬ್ಬಂದಿ ಬೆನ್ನುಮೂಳೆ ಮುರಿದಿದೆ. ನಂದಿನಿ ಲೇಔಟ್ ನ ಶ್ರೀಕಂಠ ನಗರದಲ್ಲಿ ಘಟನೆ ನಡೆದಿದೆ. ಮೇ 27ರಂದು ಸ್ವಚ್ಚತಾ ಕೆಲಸ ಮಾಡ್ತಿದ್ದ ಸಿಬ್ಬಂದಿ ರತ್ನಮ್ಮ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ರಾಜಕಾಲುವೆ ಮೋರಿ ಮೇಲೆ ಹಾಕಿದ್ದ ಕಸ ತೆಗೆಯುತ್ತಿದ್ದರು. ಕಸದ ಕೆಳಗೆ ದೊಡ್ಡ ಮ್ಯಾನ್ ಹೋಲ್ ಇರುವ ಅರಿವಿಲ್ಲದೆ ಸೀದಾ ಮೋರಿಗೆ ಬಿದ್ದಿದ್ದಾರೆ. ಬಳಿಕ‌ ಜೊತೆಯಿದ್ದ ಇನ್ನೊಬ್ಬ ಸಿಬ್ಬಂದಿ ಸ್ಥಳೀಯರನ್ನು ಕರೆದಿದ್ದಾರೆ.

 

ಗ್ಯಾರಂಟಿ ಜಾರಿಗೂ ಮುನ್ನವೇ ಬೆಂಗಳೂರು ಜನತೆಗೆ ಬಿಗ್‌ ಆಫರ್‌ ಕೊಟ್ಟ ಸರ್ಕಾರ

ಏಣಿ ಮೂಲಕ ಗಾಯಾಳು ರತ್ನಮ್ಮ ರಕ್ಷಣೆ: ರಾಜಕಾಲುವೆಯಲ್ಲಿ ಬಿದ್ದ ರತ್ನಮ್ಮಳನ್ನು ಏಣಿ ಮೂಲಕ 20 ಅಡಿ ಅಳದ ಮೋರಿಯಿಂದ ರಕ್ಷಣೆ ಮಾಡಲಾಗಿದೆ. ಸದ್ಯ ಬೆನ್ನು ಮೊಳೆ ಮುರಿದಿರುವ ಪೌರಕಾರ್ಮಿಕ ಮಹಿಳೆ ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ವರ್ಷಗಳ ಹಿಂದೆ ನೀರು‌ ಹೋಗಲು ದೊಡ್ಡ ರಾಜಕಾಲುವೆ ಮೋರಿ‌ ನಿರ್ಮಾಣ ಮಾಡಲಾಗಿತ್ತು. ದೊಡ್ಡ ಮೋರಿ ನಿರ್ಮಾಣ ಮಾಡಿ ಮ್ಯಾನ್ ಹೋಲ್ ಮುಚ್ಚದೆ ಹಾಗೇ ಬಿಟ್ಟಿದ್ದರು. ಸುತ್ತಮುತ್ತ ಸಾಕಷ್ಟು ಮನೆಯಿದೆ. ಒಂದು ವೇಳೆ ಮಕ್ಕಳು ಬಿದ್ದಿದ್ರೆ ಏನು ಕತೆ ಅಂತ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!