ಪ್ರಕೃತಿ ನಮ್ಮೆಲ್ಲರ ಬದುಕಿನ ಆಧಾರ. ಮಾನವ ಸಂಕುಲದ ಅನುಪಸ್ಥಿತಿ ಪ್ರಕೃತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರೆ ಪ್ರಕೃತಿಯ ಹೊರತು ಮಾನವನ ಅಸ್ತಿತ್ವವೇ ಇರಲಾರದು. ಪ್ರಕೃತಿ ಇಲ್ಲ ಅಂದ್ರೆ ಜಗತ್ತು ಕರಿ ನೆರಳಿನ ಹಾದಿಯಾಗುತ್ತದೆ.
ಸುಕನ್ಯಾ ಎನ್. ಆರ್, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ, ಆಳ್ವಾಸ್ ಕಾಲೇಜು, ಮೂಡುಬಿದಿರೆ
ಗಿಡ ಮರ ಬೆಳೆಸಿದರೆ ಆಗುವುದು ದೇಶದ ಸಂಪತ್ತು ಅದೇ ಗಿಡ ಮರಗಳನ್ನು ಕಡಿದರೆ ಆಗುವುದು ದೇಶಕ್ಕೆ ವಿಪತ್ತು. ಮಣ್ಣು ನೀರು ಗಾಳಿ ಬೆಳಕು ಬೆಟ್ಟ ಗುಡ್ಡ ಗಿಡ ಮರ ಇವುಗಳ ನಡುವೆ ನಮ್ಮ ಜೀವನ ಪ್ರತಿದಿನ ಸಾಗುತ್ತಿದೆ ಕಾರಣ ನಾವು ಕೂಡ ಪ್ರಕೃತಿಯ ಅಂಶ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಸಿಟಿ ಕಾನ್ಸೆಪ್ಟ್ ನಿಂದ ಕಾಂಕ್ರೆಟಿಕರಣದ ನೆಪದಿಂದ ಅದೆಷ್ಟು ಗಿಡ ಮರಗಳು ಅಳಿದು ಭೂಮಿ ಬರಡಾಗುತ್ತಿದೆ. ವಿದ್ಯಾವಂತರ ಬುದ್ಧಿ ಪ್ರಸ್ತುತ ಸಂತೋಷದ ಬಗ್ಗೆ ಯೋಚಿಸುತ್ತದೆ ವಿನಾಃ ಮುಂದಿನ ತಲೆಮಾರುಗಳ ಬಗ್ಗೆ ಯೋಚಿಸುವುದನ್ನು ಮರೆತುಬಿಡುತ್ತಿದೆ.
ಪ್ರಕೃತಿ ನಮ್ಮೆಲ್ಲರ ಬದುಕಿನ ಆಧಾರ. ಮಾನವ ಸಂಕುಲದ ಅನುಪಸ್ಥಿತಿ ಪ್ರಕೃತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದರೆ ಪ್ರಕೃತಿಯ ಹೊರತು ಮಾನವನ ಅಸ್ತಿತ್ವವೇ ಇರಲಾರದು. ಪ್ರಕೃತಿ ಇಲ್ಲ ಅಂದ್ರೆ ಜಗತ್ತು ಕರಿ ನೆರಳಿನ ಹಾದಿಯಾಗುತ್ತದೆ. ಈ ಸತ್ಯಾಂಶ ತಿಳಿದಿದ್ದರು ವಾಸ್ತವದ ಬದುಕಿನ ಜಂಜಾಟದಲ್ಲಿ ಕಳೆದು ಹೋಗುತ್ತಿರುವುದು ದುರಂತ. 1974ರಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಈ ದಿನವನ್ನು ವನಮೋತ್ಸವ ಎಂದು ಕೂಡ ಕರೆಯಲಾಗುತ್ತದೆ. ಈಗ ಇಡೀ ವಿಶ್ವದಾದ್ಯಂತ ಜೂನ್ 5ರಂದು ಪರಿಸರ ದಿನ ಎಂದು ಎಲ್ಲೆಡೆ ಆಚರಿಸಲಾಗುತ್ತಿದೆ.
ಮಲೆನಾಡಿನ ಮೂಲೆಯಲ್ಲಿ ಸದ್ದಿಲ್ಲದೇ ಪರಿಸರ ಕ್ರಾಂತಿಗೆ ಶ್ರೀಕಾರ ಹಾಕಿದ ಗಣಪತಿ ವಡ್ಡಿನಗದ್ದೆ
ಈ ದಿನದ ಮುಖ್ಯ ಉದ್ದೇಶ ಪರಿಸರವನ್ನು ರಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸುವಂತದ್ದಾಗಿದೆ. ಸಂಪನ್ಮೂಲಗಳ ಉಗ್ರಹಣ ವಾಗಿರುವ ಪರಿಸರವನ್ನ ಉಳಿಸುವಲ್ಲಿ ಮತ್ತು ಗಿಡಗಳನ್ನು ಬೆಳೆಸಿ ಪೋಷಿಸುತ್ತಾ ಬಹಳ ವರ್ಷಗಳಿಂದ ಮಂಗಳೂರಿನಲ್ಲಿ ಹುಟ್ಟಿಕೊಂಡ (ಎನ್ಈಸಿಎಫ್) ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಂಸ್ಥೆಯೊಂದು ಪ್ರತಿದಿನ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಮಂಗಳೂರಿನಂತಹ ಸಿಟಿಗಳಲ್ಲಿ ಬಿಸಿಲ ತಾಪಕೆ ಅದೆಷ್ಟು ಮರಗಳು ಒಳಗೆ ನೀರಿಲ್ಲದೆ ಬತ್ತಿ ಹೋಗುತ್ತಿರುವುದು ಕಾಣಬಹುದು.
ಇದನ್ನು ಕಂಡು ಪರಿಸರದಿಂದಲೇ ಬದುಕುವ ನಾವು ಪರಿಸರಕ್ಕೆ ಏನನ್ನು ಕೊಡಲು ಸಾಧ್ಯ ಎಂದು ಆಲೋಚಿಸಿದ ಪರಿಸರ ಪ್ರೇಮಿಯಾದ ಮಂಗಳೂರಿನ ಅಶೋಕನಗರದ ಹೇರಿಕುದ್ರ ಶಶಿಧರ್ ಶೆಟ್ಟಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಸಂಸ್ಥೆಯನ್ನು ಹುಟ್ಟಿ ಹಾಕಿದರು. ಅವರ ಸ್ನೇಹಿತರಾದ ದಿನೇಶ್ ಹೊಳ್ಳ, ಜೀತು ಮಿಲನ್, ಹಾಗೂ ಮುಂತಾದ ಪರಿಸರ ಪ್ರೇಮಿಗಳು ಈ ಸಂಸ್ಥೆಯೊಡನೆ ಕೈಜೋಡಿಸಿದರು. ಪ್ರಕೃತಿಯ ಮೇಲಿರುವ ಕಾಳಜಿಯಿಂದ ಅನೇಕ ಹೋರಾಟಗಳನ್ನು ದಾಟಿ ಪರಿಸರ ರಕ್ಷಿಸುವಲ್ಲಿ ಧ್ವನಿ ಎತ್ತಿ ಇಂದು ಎನ್ಈಸಿಎಫ್ ಸಂಸ್ಥೆಯ ತಂಡ ತಮ್ಮ ಕಾರ್ಯ ವೈಖರಿಯಿಂದ ವಿಶಾಲವಾಗಿ ಎಲ್ಲೆಡೆ ಪಸರಿಸಿದೆ.
World Environment Day 2023: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ
ಈ ತಂಡದ ಜೊತೆ ನಾನು ಕೂಡ ಕುಟುಂಬದ ಸದಸ್ಯಲಾಗಿ ಪ್ರಕೃತಿಯ ಸೇವೆಯಲ್ಲಿ ತೊಡಗಿಕೊಳ್ಳಲು ಅವಕಾಶವನ್ನು ಒದಗಿಸಿ ಕೊಟ್ಟಿದೆ. ಎನ್ ಈ ಸಿ ಎಫ್ ಕೇವಲ ಪರಿಸರ ದಿನಕ್ಕೆ ಸೀಮಿತವಾಗಿರದೆ ವರ್ಷದ 365 ದಿನಗಳು ಕೂಡ ಪ್ರಕೃತಿಯ ಒಳಿತಿಗಾಗಿ ಕಾರ್ಯಗಳನ್ನು ಮಾಡುತ್ತಿದೆ. ಈ ತಂಡದ ನಿಷ್ಕಲ್ಮಶ ಸೇವೆಗೆ ಮತ್ತು ಪರಿಸರದ ಮೇಲಿರುವ ಪ್ರೀತಿಗೆ ಇಂದು ಅನೇಕ ವಿದ್ಯಾರ್ಥಿಗಳು ಸಾರ್ವಜನಿಕರು ಗಿಡ ಮರಗಳ ಪ್ರಾಮುಖ್ಯತೆಯನ್ನು ಅರಿತು ರಕ್ಷಿಸುವಲ್ಲಿ ಸಮಾಜಕ್ಕೆ ಸ್ಪೂರ್ತಿ ಯಾಗಿದೆ. ಗಿಡ ಮೂಲಿಕೆಗಳ ರಸ ತಾಣವಾಗಿರುವ ಪ್ರಕೃತಿ ಶುದ್ಧ ಗಾಳಿ, ನೀರು ಆಹಾರ,ನೆಮ್ಮದಿಯ ಜೀವನ ಸ್ವಾರ್ಥ ಇಲ್ಲದ ವಿಶಾಲ ಸಂಪತ್ತು ನಮ್ಮ ಪರಿಸರ ಅದನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವುದು ನಮ್ಮೆಲ್ಲರ ಕರ್ತವ್ಯ