ಹಾಸನಾಂಬ ದೇಗುಲದ ಆವರಣದಲ್ಲಿ ಅವಘಡ, ವಿದ್ಯುತ್ ಶಾಕ್‌ಗೆ ಪ್ರಜ್ಞೆತಪ್ಪಿದ ಕಾರ್ಮಿಕ

Published : Oct 18, 2026, 05:44 PM IST
Worker Loses Consciousness After Electric Shock at Hasanamba Temple Premises

ಸಾರಾಂಶ

ಹಾಸನಾಂಬ ದೇವಸ್ಥಾನದ ಆವರಣದಲ್ಲಿ ಕಾಮಗಾರಿ ವೇಳೆ ಕಾರ್ಮಿಕನಿಗೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗೊಂಡಿದ್ದಾರೆ. ಸಚಿವ ಶಿವಲಿಂಗೇಗೌಡರ ಸಭೆ ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ತಹಸೀಲ್ದಾರ್ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಹಾಸನ: ಜಗತ್ ಪ್ರಸಿದ್ಧ ಹಾಸನಾಂಬ ದೇವಸ್ಥಾನದ ಆವರಣದಲ್ಲಿ ಅವಘಡ ನಡೆದಿದೆ. ಕಾಮಗಾರಿ ಕೆಲಸದ ವೇಳೆ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಶಾಕ್ ತಗುಲಿದೆ. ವಿದ್ಯುತ್ ಶಾಕ್ ಹೊಡೆದ ರಭಸಕ್ಕೆ ಕಾರ್ಮಿಕ ನೆಲಕ್ಕೆ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವರದಿಗಳ ಪ್ರಕಾರ.. ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳ ಜೊತೆ ದೇಗುಲ ಆವರಣದಲ್ಲಿ ಮೀಟಿಂಗ್ ನಡೆಸುತ್ತಿದ್ದರು. ಇದೇ ವೇಳೆಯೇ ಅನಾಹುತ ಆಗಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಮೀಟಿಂಗ್ ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಗೆ ದೌಡಾಯಿಸಿದ್ದಾರೆ. ಸಚಿವರ ಜೊತೆ ಅಧಿಕಾರಿಗಳು ಕೂಡ ಹೋಗಿದ್ದರು.

ಬಳಿಕ ಸಚಿವರ ಸೂಚನೆ ಮೇರೆಗೆ ಕೂಡಲೇ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳುವನ್ನು ಹಾಸನ ತಹಶಿಲ್ದಾರರೇ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಸಚಿವರು, ಜಿಲ್ಲಾಧಿಕಾರಿಗಳು ಸ್ಥಳೀಯ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ.

ಇಂದು ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದರು. ನಿರಂತರ ಕೆಲಸದಿಂದಾಗಿ ಅನಾಹುತ ಆಗಿರಬಹುದು ಎಂದು ಹೇಳಲಾಗುತ್ತಿದೆ. ಹಾಸನಾಂಬ ದೇವಸ್ಥಾನದ ಉತ್ತರ ಬಾಗಿಲು ಬಳಿ ಘಟನೆ ನಡೆದಿದೆ. ಘಟನೆ ಬಳಿಕ ವ್ಯಕ್ತಿ ಪ್ರಜ್ಞೆ ತಪ್ಪಿದ್ದಾರೆ. ಇದರಿಂದ ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ

ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಹಾಸನಾಂಬ ದೇಗುಲದ ಆವರಣದತ್ತ ಕುಟುಂಬಸ್ಥರು ಓಡೋಡಿ ಬಂದಿದ್ದರು. ಆದರೆ ಅಷ್ಟರೊಳಗೆ ಆಸ್ಪತ್ರೆಗೆ ಸೇರಿಸಿದ್ದರಿಂದ ಅಲ್ಲಿಗೆ ಹೋಗಿದ್ದಾರೆ. ಮನೆಯ ಸದಸ್ಯನ ಸ್ಥಿತಿ ನೋಡಿ ಗಾಬರಿ ಆಗಿದ್ದಾರೆ.

PREV
Read more Articles on
click me!

Recommended Stories

'ನನ್ನದೇ ಹಣಕ್ಕಾಗಿ ನಾನೇಕೆ ಬೇಡಿಕೊಳ್ಳಬೇಕು?' ಬೆಂಗಳೂರಿನ ಬಾಡಿಗೆದಾರನ ಗೋಳು ವೈರಲ್
Bengaluru: ನೈಸ್ ರೋಡ್‌ನಲ್ಲಿ ಹೊತ್ತಿ ಉರಿದ ಟ್ಯಾಂಕರ್, 5KM ಟ್ರಾಫಿಕ್ ಜಾಮ್