*ಪೊಲೀಸರ ಸರ್ಪಗಾವಲಿನಲ್ಲಿ ನಡೆದ ರಸ್ತೆ ಕಾಮಗಾರಿ
*ಬೆಳೆದು ನಿಂತ ಬೆಳೆಯಲ್ಲಿ ಕಾಮಗಾರಿ: ರೈತರ ವಿರೋಧ
*ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಗಜ್ಜರಿ ನಾಶ
ಬೆಳಗಾವಿ(ನ.13): ರೈತರ ವಿರೋಧದ ನಡುವೆಯೇ ಬೆಳಗಾವಿ (Belagavi) ತಾಲೂಕಿನ ಹಲಗಾ-ಮಚ್ಛೆ ರಾಷ್ಟ್ರೀಯ ಹೆದ್ದಾರಿ 4ಎ ಬೈಪಾಸ್ ರಸ್ತೆ ಕಾಮಗಾರಿ ಶುಕ್ರವಾರ ಮುಂದುವರಿದಿದೆ. ರೈತರ ಪ್ರತಿರೋಧ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ (DC) ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಳ್ಳಂಬೆಳಗ್ಗೆಯೇ ಪೊಲೀಸರ ಸರ್ಪಗಾವಲಿನಲ್ಲಿ ಕಾಮಗಾರಿ ಆರಂಭಿಸಿತು. ಗುರುವಾರ ಕಾಮಗಾರಿ ನಡೆಸುತ್ತಿದ್ದ ವೇಳೆ ರೈತನೊಬ್ಬ (Farmer) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ (Suicide) ಯತ್ನಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.
ಈ ಹಿನ್ನೆಯಲ್ಲಿ ಇದೀಗ ರೈತರ ಜಮೀನಿನಲ್ಲಿ ಹತ್ತಕ್ಕೂ ಅಧಿಕ ಜೆಸಿಬಿಗಳು, ನಾಲ್ಕು ಡ್ರೈವರ್‌ಗಳು, ನೂರಕ್ಕೂ ಅಧಿಕ ಕಾರ್ಮಿಕರಿಂದ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ಮಧ್ಯೆ ಬೈಪಾಸ್ (Bypass) ರಸ್ತೆಗೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ಜಮೀನೊಂದರಲ್ಲಿ ರೈತರು ಧರಣಿಯನ್ನೂ ನಡೆಸುತ್ತಿದ್ದಾರೆ. ನಮಗೆ ಪರಿಹಾರ ಬೇಡ, ಭೂಮಿಯೇ ಮುಖ್ಯ. ಯಾವುದೇ ಕಾರಣಕ್ಕೂ ನಮ್ಮ ಕೃಷಿ ಭೂಮಿಯನ್ನು ಕಸಿದುಕೊಳ್ಳಬೇಡಿ ಎಂದು ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಆದರೆ, ರೈತರ ಮನವಿಗೆ ಸ್ಪಂದಿಸದೆ ಜಿಲ್ಲಾಡಳಿತ (Distric adminisration) ರೈತರ ವಿರೋಧದ ನಡುವೆ ಕಾಮಗಾರಿ ಆರಂಭಿಸಿದೆ. ಕೃಷಿ ಭೂಮಿಯಲ್ಲಿ ಜೆಸಿಬಿಗಳಿಂದ (JCB) ಕಾಮಗಾರಿ ನಡೆಸಲಾಗುತ್ತಿದೆ.
undefined
ಬೆಳೆದು ನಿಂತ ಬೆಳೆಯಲ್ಲಿ ಕಾಮಗಾರಿ ಮಾಡಲು ಬಂದಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಗಜ್ಜರಿ ನಾಶಪಡಿಸಲು ಬಂದಿದ್ದಾರೆ ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಿಮ್ಮ ಬೆಳೆ ಹಾನಿ ಮಾಡುವುದಿಲ್ಲ. ನಾವು ಬೇರೆ ಕಡೆಗೆ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ಹೇಳಿ, ಬೇರೆ ಕಡೆಗೆ ಕಾಮಗಾರಿ ಆರಂಭಿಸಿದರು.
ಕಚೇರಿಗೆ ಬಂದರೆ ಪರಿಹಾರ ನೀಡುತ್ತೇವೆ!
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು 825 ರೈತರಿಗೆ .27 ಕೋಟಿ ಪರಿಹಾರ ನೀಡಲಾಗಿದೆ. ಉಳಿದವರ ಮನವೊಲಿಸಿ ಪರಿಹಾರ ನೀಡಲಾಗುವುದು. ಅವರು ಪರಿಹಾರ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪರಿಹಾರದ ಹಣವನ್ನು ಜಮಾ ಮಾಡಲಾಗುವುದು. ಯಾರೂ ಮಧ್ಯವರ್ತಿಗಳ ಬಳಿ ಹೋಗದೆ ನಮ್ಮ ಕಚೇರಿಗೆ ಬಂದರೆ ಪರಿಹಾರ ನೀಡುತ್ತೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ಪೊಲೀಸರ ವಿರುದ್ಧ ರೈತರು, ಮಹಿಳೆಯರು ಭಾರೀ ಆಕ್ರೋಶ!
ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕಾಮಗಾರಿಯನ್ನ ವಿರೋಧಿಸಿದ ರೈತರು ಮಚ್ಚೆ ಗ್ರಾಮದ ಬಳಿ ದೊಡ್ಡ ಪ್ರತಿಭಟನೆಯನ್ನೇ ನಡೆಸಿದ್ದರು. ಪೊಲೀಸರ ವಿರುದ್ಧ ರೈತರು, ಮಹಿಳೆಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ರೈತ ಮಹಿಳೆಯನ್ನ ಎಳೆದಾಡಿ ಪೊಲೀಸರು ಸೀರೆಯನ್ನ ಹರಿದು ಹಾಕಿದ್ದರು. ಮಹಿಳೆಯರ ಮೇಲೆ ಪೊಲೀಸರು ದಬ್ಬಾಳಿಕೆಯನ್ನ ಮಾಡಿದ್ರಾ ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಹಸುಗೂಸನ್ನ ಎತ್ತಿಕೊಂಡು ರೈತ ಮಹಿಳೆ ಕಣ್ಣೀರು ಹಾಕಿದ್ದರು. ಪೊಲೀಸರ ದಬ್ಬಾಳಿಗೆ ವಿರುದ್ಧ ರೈತರು ಭಾರೀ ಆಕ್ರೋಶವನ್ನ ವ್ಯಕ್ತಪಡಿಸಿದ್ದರು.
ಜಿಲ್ಲಾಡಳಿತ 825 ರೈತರಿಗೆ ಈಗಾಗಲೇ ಪರಿಹಾರ (Compensation) ನೀಡಿದೆ. ಇನ್ನೂ 155 ರೈತರ ವಿರೋಧ ಇದೆ, ಅವರು ಪರಿಹಾರವನ್ನ ಪಡೆದಿಲ್ಲ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿನ್ನೆಯಿಂದಲೂ ಪ್ರತಿಭಟನೆ (Protest) ನಡೆಯುತ್ತಿದೆ. ನಿನ್ನೆ ಪ್ರತಿಭಟನೆ ವೇಳೆ ಆಕಾಶ್ (Aklash) ಎಂಬ ರೈತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ನಿನ್ನೆ ಸಂಜೆ ರೈತರೊಂದಿಗೆ ನಡೆದ ಸಂಧಾನ ಸಭೆ ಕೂಡ ವಿಫಲವಾಗಿತ್ತು.