* ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.
* ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಯುವಕ.
* ಮಂಡ್ಯ ಜಿಲ್ಲೆ ತೂಬಿನಕೆರೆ ಹೇಮಂತ ಕುಮಾರ್ 27 ವರ್ಷ ಗಾಯಗೊಂಡಿದ್ದ ಯುವಕ.
* ಕಳೆರ ಗುರುವಾರ ಮರದಿಂದ ಬಿದ್ದಿದ್ದರು
ಮಂಡ್ಯ(ನ. 12) ಅಗಲಿದ ನಟ ಪುನೀತ್ ರಾಜ್ ಕುಮಾರ್ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು. ಪರಿಣಾಮ ನಾಲ್ಕು ಜನರು ಹೊಸ ಬೆಳಕನ್ನು ಕಂಡಿದ್ದರು.
ಈಗ ಮಂಡ್ಯದಿಂದ ವರದಿಯೊಂದು ಬಂದಿದೆ ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಡ್ಯ ಜಿಲ್ಲೆ ತೂಬಿನಕೆರೆ ಹೇಮಂತ ಕುಮಾರ್( 27 ) ತಮ್ಮ ಅಂಗಾಂಗಳನ್ನೆಲ್ಲ ದಾನ ಮಾಡಿದ್ದಾರೆ.
ರೈತರಾಗಿದ್ದ ಹೇಮಂತ ಕುಮಾರ್ ಕಳೆದ ಗುರುವಾರ ಮರದಿಂದ ಬಿದ್ದಿದ್ದರು. ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿತ್ತು. ಹನುಮಂತು ಪೂರ್ಣಿಮಾ ದಂಪತಿ ಪುತ್ರ ಹೇಮಂತ್ ಅವರ ಮೆದುಳು ನಿಷ್ಕ್ರಿಯವಾಗಿದೆ. ಪರಿಣಾಮ ಕುಟುಂಬವೇ ಅಂಗಾಂಗ ದಾನಕ್ಕೆ ಒಪ್ಪಿದೆ. ಹೃದಯದ ಕವಾಟ, 2 ಕಿಡ್ನಿ, 1 ಲಿವರ್ ದಾನ ಮಾಡಿದ್ದರ ಪರಿಣಾಮ ನಾಲ್ವರ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹೇಮಂತ್ ಕುಮಾರ್ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಸಾವಿನಲ್ಲಿಯೂ ಅಪ್ಪು ಸಾರ್ಥಕತೆ; ನೇತ್ರದಾನದ ಮಾದರಿ ಹೆಜ್ಜೆ
ಅಂಗಾಂಗ ದಾನ ಮಾಡಿದ್ದ ಹರೀಶ್; 2016ರ ಫೆಬ್ರವರಿ 16ರಂದು ಬೆಂಗಳೂರಿನ ನೆಲಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ತುಮಕೂರಿನ ಯುವಕ ಹರೀಶ್ ಎರಡು ತುಂಡಾಗಿ ಬಿದ್ದಿದ್ದರು. ಈ ವೇಳೆ ತಮ್ಮ ಉಸಿರು ನಿಲ್ಲುತ್ತದೆ ಎನ್ನುವುದು ಗೊತ್ತಿದ್ದರೂ ತನ್ನ ಅಂಗಾಂಗ ದಾನ ಮಾಡಿ ಎಂದು ಕೇಳಿಕೊಳ್ಳುತ್ತಿದ್ದರತು. ಹರೀಶ್ ಅಕಾಮಿಕ ಮರಣದ ನಂತರ ಅಂದಿನ ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಯೋಜನೆಯೊಂದನ್ನು ಶುರು ಮಾಡಿತ್ತು.
ಸರ್ಕಾರ ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸೂಕ್ತ ಸಹಾಯ ಹಾಗೂ ತತ್‍ಕ್ಷಣದ ಚಿಕಿತ್ಸೆ ಲಭ್ಯವಾದಲ್ಲಿ ಬಹಳಷ್ಟು ಪ್ರಾಣಗಳನ್ನು ಉಳಿಸಿಕೊಳ್ಳಬಹುದು ಎಂಬ ಉದ್ದೇಶದಲ್ಲಿ 'ಮುಖ್ಯಮಂತ್ರಿಗಳ ಸಾಂತ್ವನ-ಹರೀಶ್' ಯೋಜನೆ ಜಾರಿಗೆ ಬಂದಿತ್ತು.
ರಾಜ್ಯದ ವ್ಯಾಪ್ತಿಯೊಳಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುವ ಗಾಯಾಳುಗಳಿಗೆ ಅವರ ಪೂರ್ವಾಪರ ವಿಚಾರಿಸದೆ ತುರ್ತಾಗಿ ನಗದು ರಹಿತ ಉನ್ನತ ಗುಣಮಟ್ಟದ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಜಾರಿಗೆ ಬಂದಿತ್ತು.
ನೇತ್ರದಾನ ಮಹಾದಾನ; ಅಗಲಿದ ನಟ ಪುನೀತ್ ರಾಜ್ ಕುಮಾರ್ ನೇತ್ರದಾನದ ನಂತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಆದರ್ಶಗಳು ನಿಧಾನವಾಗಿ ಪಾಲನೆ ಆರಂಭವಾಗಿದೆ.