ಗೃಹಲಕ್ಷ್ಮಿ ನೋಂದಣಿಗೆ ಮಹಿಳೆಯರ ದಂಡು: ನೋಂದಣಿ ಕೇಂದ್ರಗಳಲ್ಲಿ ನೂಕುನುಗ್ಗಲು..!

By Kannadaprabha News  |  First Published Jul 27, 2023, 1:49 PM IST

ಜು.19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹೇಳಿದ್ದರಿಂದ ಅರ್ಜಿ ಪಡೆಯುವ ಸೇವಾ ಕೇಂದ್ರಗಳ ಮುಂದೆ ಅಸಂಖ್ಯಾತ ಮಹಿಳೆಯರ ದಂಡು ಕಾಗದ ಪತ್ರಗಳ ಸಮೇತ ಸೇರುತ್ತಿದ್ದಾರೆ. ಆದರೆ, ಅವರನ್ನು ನಿಯಂತ್ರಿಸಲು ಸೇವಾ ಕೇಂದ್ರಗಳಿಗೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿ ಪೊಲೀಸ್‌ ಭದ್ರತೆಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.


ಗುಳೇದಗುಡ್ಡ(ಜು.27):  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಮನೆ ಯಜಮಾನಿಗೆ ಮಾಸಿಕ 2000 ನೀಡುವ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಜನರು ಮುಗಿ ಬೀಳುತ್ತಿರುವ ಹಿನ್ನೆಲೆಯಲ್ಲೇ ಎಲ್ಲ ಕೇಂದ್ರಗಳು ಭಾರೀ ಜನಸ್ತೋಮದಿಂದ ಕೂಡುತ್ತಿವೆ. ಹೀಗಾಗಿ ನಿತ್ಯ ಜನರಿಗೆ ಇದೊಂದೆ ಕಾಯಕ ಎನ್ನುವಂತಾಗಿದೆ.

ಜು.19 ರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಹೇಳಿದ್ದರಿಂದ ಅರ್ಜಿ ಪಡೆಯುವ ಸೇವಾ ಕೇಂದ್ರಗಳ ಮುಂದೆ ಅಸಂಖ್ಯಾತ ಮಹಿಳೆಯರ ದಂಡು ಕಾಗದ ಪತ್ರಗಳ ಸಮೇತ ಸೇರುತ್ತಿದ್ದಾರೆ. ಆದರೆ, ಅವರನ್ನು ನಿಯಂತ್ರಿಸಲು ಸೇವಾ ಕೇಂದ್ರಗಳಿಗೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಂದು ಕಡೆಗಳಲ್ಲಿ ಪೊಲೀಸ್‌ ಭದ್ರತೆಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Tap to resize

Latest Videos

undefined

ಗೃಹ ಲಕ್ಷ್ಮೀ ಯೋಜನೆ ಜಾರಿ ಬೆನ್ನಲ್ಲೇ ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನರು

ಅರ್ಜಿ ಸ್ವೀಕರಿಸಲು ಪಟ್ಟಣದ ಪುರಸಭೆ ಭಂಡಾರಿ ಕಾಲೇಜು ಹತ್ತಿರದ ಪುರಸಭೆ ಮಳಿಗೆಯಲ್ಲಿ, ಭಾರತ್‌ ಮಾರ್ಕೆಟ್‌ ಹತ್ತಿರದ ಮಳಿಗೆ ಹಾಗೂ ಪ್ರವಾಸಿ ಮಂದಿರದ ಹತ್ತಿರ ಪುರಸಭೆ ವಸತಿ ಗೃಹದಲ್ಲಿ ಹೀಗೆ ಒಟ್ಟು 3 ಗೃಹಲಕ್ಷ್ಮೀ ನೋಂದಣಿ ಸೇವಾ ಕೇಂದ್ರಗಳನ್ನು ತೆರೆದಿದೆ. ಆದರೂ ಮಹಿಳೆಯರು ಮಾತ್ರ ಬೆಳಗ್ಗೆಯಿಂದ ನೂರಾರು ಜನ ಸೇವಾ ಕೇಂದ್ರಗಳತ್ತ ಮುಗಿಬಿದ್ದು ಅರ್ಜಿ ಸ್ವೀಕರಿಸಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ನೋಂದಣಿಗೆ ಸರ್ಕಾರ ಕಾಲಮಿತಿ ನಿಗದಿ ಮಾಡಿಲ್ಲ. ಆದರೂ ಜನರು ಇಷ್ಟೊಂದು ಸಂಖ್ಯೆಯಲ್ಲಿ ಜಮಾಯಿಸಿ ನೋಂದಣಿಗೆ ಮುಗಿ ಬೀಳುತ್ತಿರುವುದು ವಿಪರ್ಯಾಸ.

ದಿನಕ್ಕೆ 60 ಅರ್ಜಿ ಸ್ವೀಕಾರ ನಿಯಮ ಗಾಳಿಗೆ:

ಸರ್ಕಾರ ಮುಂದಾಲೋಚನೆ ಮಾಡಿ, ಗೃಹಲಕ್ಷ್ಮಿ ನೋಂದಣಿಗೆ ಅರ್ಜಿಗಳ ಮಿತಿ ಹೇರಿತ್ತು. ಅದು ಮೊಬೈಲ್‌ ಮೂಲಕ ಮೇಸೆಜ್‌ ಹಾಕಬೇಕು. ನಂತರ ಯಾವ ದಿನ, ಯಾವ ಸಮಯ ಎಂಬುವುದು ಮೇಸೆಜ್‌ ಮೂಲಕ ಬರುತ್ತದೆ. ಆಗ ಮಾತ್ರ ಕೇಂದ್ರಗಳಿಗೆ ಹೋಗಿ ಅರ್ಜಿ ಹಾಕಬೇಕು ಎಂಬ ಆದೇಶ ನಿಯಮ ಮಾಡಿತ್ತು. ಆದರೆ, ಇದೀಗ ಆ ನಿಯಮಗಳನ್ನು ಗಾಳಿ ತೋರಿ ಮೇಸೆಜ್‌ ಬರದೇ ಇದ್ದರೂ ನೋಂದಣಿಗೆ ಮುಂದಾಗಿದ್ದರ ಪರಿಣಾಮ ಗೃಹಲಕ್ಷ್ಮಿ ಅರ್ಜಿ ಸ್ವೀಕಾರದ ಕೇಂದ್ರಗಳ ಮುಂದೆ ಜನ ಜಂಗುಳಿ ನಿರ್ಮಾಣವಾಗುತ್ತಿದೆ. ಈ ರೀತಿ ನಿತ್ಯ ಸೇವಾ ಕೇಂದ್ರದ ಮುಂದೆ ನೂಕು ನುಗ್ಗಲು ದಿನೇ ದಿನೇ ಹೆಚ್ಚುತ್ತಿದ್ದೂ ಸಂಬಂಧ ಪಟ್ಟಇಲಾಖೆಗೆ ಈ ಕಾರ್ಯ ತಲೆನೋವಾಗಿ ಪರಿಣಮಿಸಿದೆ.

ಗೃಹಜ್ಯೋತಿ ಸರ್ವರ್‌ ಡೌನ್‌, ಸೇವಾಸಿಂಧು ಪೋರ್ಟಲ್ ಕ್ರ್ಯಾಶ್ ಜನರ ಪರದಾಟ!

ಪ್ರಜಾಪ್ರತಿನಿಧಿ ನೇಮಕ ಯಾವಾಗ?:

ಅರ್ಜಿ ನೋಂದಣಿ ಆರಂಭಗೊಂಡು ವಾರಗಳು ಕಳೆಯುತ್ತಾ ಬಂದರೂ ಇನ್ನೂವರೆಗೂ ಪ್ರಜಾಪ್ರತಿನಿಧಿಗಳ ನೇಮಕ ಮಾಡದೇ ಇರುವುದು ಕೇಂದ್ರಗಳ ಮುಂದೆ ಜನಸ್ತೋಮ ಸೇರಲು ಕಾರಣವಾಗಿದೆ. ಸರ್ಕಾರದಿಂದ ನೇಮಕಗೊಂಡ ಪ್ರಜಾಪ್ರತಿನಿಧಿಗಳು ನೇರವಾಗಿ ಫಲಾನುಭವಿಗಳ ಮನೆಗೆ ಹೋಗಿ ನೋಂದಣಿ ಮಾಡಿಕೊಳ್ಳುತ್ತಾರೆ. ಆದರೆ, ಇನ್ನುವರೆಗೂ ಪ್ರಜಾಪ್ರತಿನಿಧಿಗಳ ಸುಳಿವೇ ಕಾಣುತ್ತಿಲ್ಲ. ಆದಷ್ಟುಬೇಗ ಪ್ರಜಾಪ್ರತಿನಿಧಿಗಳ ನೇಮಕವಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರು ಉಚಿತವಾಗಿ ಸೇವಾ ಕೇಂದ್ರದಲ್ಲಿ ಗೃಹ ಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಕೊಳ್ಳಲು ಮೂರು ಸೇವಾ ಕೇಂದ್ರಗಳನ್ನು ತೆರೆದು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಸರದಿಯಲ್ಲಿ ಸಾಲು ನಿಂತು ಶಾಂತ ರೀತಿಯಿಂದ ನೋಂದಣಿ ಮಾಡಿಕೊಳ್ಳಬೇಕು ಎಂದು ಗುಳೇದಗುಡ್ಡ ಪುರಸಭೆ ಮುಖ್ಯಾಧಿಕಾರಿ ಎ.ಎಚ್‌. ಮುಜಾವರ ತಿಳಿಸಿದ್ದಾರೆ. 

click me!