ವಿಜಯಪುರ: ಶೌಚಾಲಯಕ್ಕೆ ಚರಗಿ ಹಿಡಿದ ಮಹಿಳೆಯರು..!

By Kannadaprabha News  |  First Published Feb 25, 2023, 10:30 PM IST

ಚಿಕ್ಕರೂಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಡ್ಲೇವಾಡ ಗ್ರಾಮದ ಪ್ರಮುಖರು ಮಹಿಳೆಯರಿಂದ ಗ್ರಾಪಂ ಆವರಣದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಚರಗಿ ತೆಗೆದುಕೊಂಡು ಗ್ರಾಮದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗ್ರಾಪಂ ಅವರಣ ತಲುಪಿ ಪ್ರತಿಭಟನೆ ನಡೆಸಿದರು.


ದೇವರಹಿಪ್ಪರಗಿ(ಫೆ.25):  ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಿ ಮಹಿಳೆಯರು ಚರಗಿ ತೆಗೆದುಕೊಂಡು ಕಡ್ಲೇವಾಡ ಗ್ರಾಮದಿಂದ ಚಿಕ್ಕರೂಗಿ ಗ್ರಾಪಂ ವರೆಗೆ ಪಾದಯಾತ್ರೆಯ ಮೂಲಕ ಬಂದು ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಚಿಕ್ಕರೂಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕಡ್ಲೇವಾಡ ಗ್ರಾಮದ ಪ್ರಮುಖರು ಮಹಿಳೆಯರಿಂದ ಗ್ರಾಪಂ ಆವರಣದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಚರಗಿ ತೆಗೆದುಕೊಂಡು ಗ್ರಾಮದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗ್ರಾಪಂ ಅವರಣ ತಲುಪಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ವಿದ್ಯಾಧರ ಸಂಗೋಗಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪ್ರತಿ ಮನೆಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಹಣಕಾಸಿನ ನೆರವು ನೀಡುತ್ತಿವೆ. ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳದಿದ್ದರೆ ಸೌಲಭ್ಯಗಳು ಸಿಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಲು ಜಾಗೆ ಇಲ್ಲದವರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕಾದ ಅಗತ್ಯತೆ ಇದೆ. ಈ ಕುರಿತು ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರ ಗಮನಕ್ಕೂ ತರಲಾಗಿದ್ದು ಜಾಗದ ವ್ಯವಸ್ಥೆ ಆದ ತಕ್ಷಣ ಸಾರ್ವಜನಿಕ ಶೌಚಾಲಯಕ್ಕೆ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

Latest Videos

undefined

ನನ್ನ ವೋಟು ನನ್ನ ಮಾತು: ಬಬಲೇಶ್ವರ ಮಂದಿಯ ಮೂಡ್‌ ಹೇಗಿದೆ?

ಪ್ರತಿಭಟನೆಕಾರರ ಜೊತೆ ಗ್ರಾಮಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಪಿಡಿಒ ಶಿವಾನಂದ ನಾವಿ ಮಾತನಾಡಿ ನಾನು ಬಂದ ಮೇಲೆ ಸಾರ್ವಜನಿಕ ಶೌಚಾಲಯದ ತಡೆಗೋಡೆಯ ಅನುದಾನಕ್ಕೆ ಮನವಿ ಮಾಡಿದ್ದು, ಅನುದಾನ ಬಂದಿದ್ದು ಖಾಸಗಿ ವ್ಯಕ್ತಿಯ ಸಮಸ್ಯೆಯಿಂದ ತಡೆಗೋಡೆಯ ನಿರ್ಮಾಣಕ್ಕೆ ತಡವಾಗಿದೆ, ಶೀಘ್ರದಲ್ಲಿ ಗ್ರಾಮಸ್ಥರ ಸಮಕ್ಷಮದಲ್ಲಿ ಜಾಗದ ವ್ಯವಸ್ಥೆಯಾದ ತಕ್ಷಣ ಶೌಚಾಲಯದ ತಡೆಗೋಡೆ ನಿರ್ಮಾಣದ ಮಾಡುತ್ತೇವೆ, ಸದ್ಯ ಅಲ್ಲಿಯವರೆಗೆ ತಾತ್ಕಾಲಿಕ ತಡೆಗೋಡೆಯ ಶಡ್‌ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ ಕಾರಣ ಮಹಿಳೆಯರಿಂದ ಧರಣಿ ಹಿಂದಕ್ಕೆ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶ್ರೀಶೈಲ ದಳವಾಯಿ, ಮಾನಸೆಪ್ಪ, ಕಾಂತು, ರಾಜು ಗಣಜಲಗಿ, ಲಲಿತಾ ಬಸಪ್ಪ ಲೋಗಾವಿ, ಸವಿತಾ ಗಣಜಲಗಿ ಸೇರಿದಂತೆ ಹಲವಾರು ಮಹಿಳೆಯರು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

click me!