ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ ಎಂದು ಮಾಜಿ ಸಿಎಂ ಮೈಸೂರಿನಲ್ಲಿ ಹೇಳಿದ್ದಾರೆ. ಸಿಎಎ ಬಗ್ಗೆ ಬಿಜೆಪಿಯ ಮಹಿಳೆಯರು, ಪುರುಷರು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಬರೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು(ಜ.22): ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ ಎಂದು ಮಾಜಿ ಸಿಎಂ ಮೈಸೂರಿನಲ್ಲಿ ಹೇಳಿದ್ದಾರೆ. ಸಿಎಎ ಬಗ್ಗೆ ಬಿಜೆಪಿಯ ಮಹಿಳೆಯರು, ಪುರುಷರು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಬರೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ. ಮಹಿಳೆಯರಿಗೆ ದೇವರು, ಮಸಣಿಯರ ಮೇಲೆ ಭಯ, ಭಕ್ತಿ ಇರುತ್ತೆ. ದೇವರ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ದೇವರನ್ನು ನಂಬಿ, ಆದರೆ ಪುರೋಹಿಯರು ಹೇಳುವ ಮೌಢ್ಯಗಳನ್ನು ಆಚರಣೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
undefined
'ಬಿಜೆಪಿಯವ್ರು ಪೌರತ್ವ ಕೊಡ್ತೀವಿ ಅಂತಾರೆ, ಆಚೆನೂ ಹಾಕ್ತಾರೆ'.
ಪೌರತ್ವ ಕಾಯ್ದೆಯ ಬಗ್ಗೆ ಬಿಜೆಪಿ ನಡೆಸುವ ಜಾಗೃತಿ ಅಭಿಯಾನದ ಬಗ್ಗೆ ಮಾತನಾಡಿ, ಸಿಎಎ ಬಗ್ಗೆ ಬಿಜೆಪಿಯ ಮಹಿಳೆಯರು, ಪುರುಷರು ಮನೆಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಬರೇ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಮೈತ್ರಿ, ಮನಸ್ವಿನಿ, ಉಚಿತ ಶಿಕ್ಷಣ, ಮಾತೃಶ್ರೀ ಸೇರಿದಂತೆ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ನಾವು ಸತ್ಯವನ್ನಾದರೂ ಮನೆ ಮನೆಗೆ ಹೇಳಬೇಕು ಎಂದಿದ್ದಾರೆ.
'ಫ್ರೀ ಕಾಶ್ಮೀರ' ಪ್ಲಕಾರ್ಡ್ ಪ್ರದರ್ಶನ ದೇಶ ದ್ರೋಹವಲ್ಲ: ಸಿದ್ದು
ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ