‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಅಂಬೇಡ್ಕರ್ ಹೇಳಿದ್ದರು’

Kannadaprabha News   | Asianet News
Published : Jan 22, 2020, 02:51 PM IST
‘ಮುಸ್ಲಿಮರು ಪಾಕಿಸ್ತಾನಕ್ಕೆ  ಹೋಗಲಿ ಎಂದು ಅಂಬೇಡ್ಕರ್ ಹೇಳಿದ್ದರು’

ಸಾರಾಂಶ

ದೇಶದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಅಂಬೇಡ್ಕರ್ ಅವರೂ ಹೇಳಿದ್ದರು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. 

ಯಲ್ಲಾಪುರ [ಜ.22]: ದೇಶ ಇಬ್ಭಾಗವಾದಾಗ ಹಿಂದೂಗಳೆಲ್ಲ ಭಾರತದಲ್ಲಿರಲಿ, ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕೆಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಸಲಹೆ ನೀಡಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ಟ ಕಲ್ಲಡ್ಕ ಸ್ಮರಿಸಿದರು. 

ತಾಲೂಕಿನ ದೇಹಳ್ಳಿಯಲ್ಲಿ ಆರ್‌ಎಸ್‌ಎಸ್ ಹಮ್ಮಿಕೊಂಡಿದ್ದ ಚಾಂದನಿ ಕಾರ್ಯಕ್ರಮದಲ್ಲಿ ಮಾತನಾಡಿ,  ಪಾಕಿಸ್ತಾನ- ಬಾಂಗ್ಲಾಗಳಿಂದ 5 ಕೋಟಿಗಿಂತ ಅಧಿಕ ಸಂಖ್ಯೆಯ ಜನರು ನಮ್ಮ ದೇಶಕ್ಕೆ ಅಕ್ರಮವಾಗಿ ನುಗ್ಗಿದ್ದಾರೆ. ನಮ್ಮ ದೇಶದ ಪ್ರಜೆಗಳಿಗೆ ಪೌರತ್ವ ತಿದ್ದುಪಡಿ ಯಿಂದ ಲಾಭವೇ ಹೊರತು ಯಾವ ತೊಂದರೆ ಯೂ ಇಲ್ಲ ಎಂದರು. 

2023 ಕ್ಕೆ ಪಾಲಿಟಿಕ್ಸ್‌ಗೆ ಗುಡ್‌ ಬೈ ಹೇಳ್ತಾರಾ 'ರಾಜಾಹುಲಿ'?.

ಕಾನೂನಿನ ಕುರಿತು ಅರಿಯದೇ ಸುಮ್ಮನೆ ದೊಂಬಿ ಎಬ್ಬಿಸಲಾಗುತ್ತಿದೆ. ಇತ್ತೀಚೆಗೆ ಅಯೋಧ್ಯೆಯ ರಾಮಜನ್ಮ ಭೂಮಿ ಪ್ರಕರಣದ ತೀರ್ಪನ್ನು 120 ಕೋಟಿ  ಜನರು ಬೆಂಬಲಿಸಿದ್ದಾರೆ. ಇದು ಈ ದೇಶದ ಒಗ್ಗಟ್ಟು, ಶಿಸ್ತು, ಅನುಶಾಸನ. ಇಂತಹ ರಾಷ್ಟ್ರದಲ್ಲಿ ನಾವು ಸ್ವಾರ್ಥಕ್ಕಾಗಿ ಜನರಲ್ಲಿ ವಿಷಬೀಜ ಬಿತ್ತಿ, ಭಯೋತ್ಪಾದಕರನ್ನು ಬೆಂಬಲಿಸುತ್ತಿರುವುದು ವಿಪರ್ಯಾಸವೆಂದರು.

BJPಗೆ ಅಲ್ಪಸಂಖ್ಯಾತರೇ ಆಹಾರ, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ'...

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು