ಬಸ್ ನಿಲುಗಡೆಗಾಗಿ ಇಬ್ಬರು ಮಹಿಳೆಯರು ಬಸ್ ಚಾಲಕ ಹಾಗೂ ನಿರ್ವಾಹಕರ ಜೊತೆ ಗಂಟೆಗಳ ಕಾಲ ಜಗಳವಾಗಿದ್ದು, ಬಸ್ ಚಾಲಕ ನೇರವಾಗಿ ಕಬ್ಬೂರ ಪೊಲೀಸ್ ಉಪಠಾಣೆಗೆ ಬಸ್ ತಂದು ನಿಲ್ಲಿಸಿದ ಘಟನೆ ಕಬ್ಬೂರ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ.
ಕಬ್ಬೂರ (ಜು.16) : ಬಸ್ ನಿಲುಗಡೆಗಾಗಿ ಇಬ್ಬರು ಮಹಿಳೆಯರು ಬಸ್ ಚಾಲಕ ಹಾಗೂ ನಿರ್ವಾಹಕರ ಜೊತೆ ಗಂಟೆಗಳ ಕಾಲ ಜಗಳವಾಗಿದ್ದು, ಬಸ್ ಚಾಲಕ ನೇರವಾಗಿ ಕಬ್ಬೂರ ಪೊಲೀಸ್ ಉಪಠಾಣೆಗೆ ಬಸ್ ತಂದು ನಿಲ್ಲಿಸಿದ ಘಟನೆ ಕಬ್ಬೂರ ಪಟ್ಟಣದಲ್ಲಿ ಶನಿವಾರ ಸಂಜೆ ನಡೆದಿದೆ.
ಚಿಕ್ಕೋಡಿಯಿಂದ ಗೋಕಾಕ ಕಡೆ ಹೊರಟಿದ್ದ ಬಸ್‌ನಲ್ಲಿ ನಾಗರಮುನ್ನೋಳ್ಳಿಯಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಬಸ್ ಏರಿದ್ದಾರೆ. ನಂತರ ಕಬ್ಬೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಸ್ ನಿಲ್ಲಿಸುವಂತೆ ಚಾಲಕ, ನಿರ್ವಾಹಕರಿಗೆ ಹೇಳಿದ್ದಾರೆ. ಬಸ್ ಪ್ರಯಾಣಿಕರಿಂದ ತುಂಬಿರುವುದರಿಂದ ಬಸ್ ನಿಲ್ದಾಣಕ್ಕೆ ಬಸ್ ನಿಲ್ಲಿಸುತ್ತೇವೆ ಎಂದು ಚಾಲಕ, ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಬಸ್ ನಿಲ್ಲಿಸಬೇಕೆಂದು ಇಬ್ಬರೂ ಮಹಿಳಾ ಪ್ರಯಾಣಿಕರು ಹಠ ಹಿಡಿದು ಚಾಲಕ ಮತ್ತು ನಿರ್ವಾಹಕರೊಡನೆ ಜಗಳವಾಡಿ ಸಮಸ್ಯೆ ತಾರಕಕ್ಕೇರಿದೆ.
ಬಸ್ ಚಾಲಕ ನೇರವಾಗಿ ಕಬ್ಬೂರ ಪೊಲೀಸ್ ಉಪಠಾಣೆಗೆ ಬಸ್ ತಂದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಠಾಣೆ ಎದುರು ಮಹಿಳಾ ಪ್ರಯಾಣಿಕರು ಹಾಗೂ ಚಾಲಕ ನಿರ್ವಾಹಕ ಮತ್ತೆ ಕಿತ್ತಾಡಿಕೊಂಡಿದ್ದಾರೆ. ಕಬ್ಬೂರ ಪೊಲೀಸ್ ಉಪಠಾಣೆಯ ಪೊಲೀಸರು, ಪಟ್ಟಣದ ಸಾರ್ವಜನಿಕರು ಹಾಗೂ ಬಸ್‌ನಲ್ಲಿದ್ದ ಪ್ರಯಾಣಿಕರು ಮಧ್ಯಸ್ಥಿಕೆ ವಹಿಸಿ ಮಹಿಳಾ ಪ್ರಯಾಣಿಕರನ್ನು ಮತ್ತು ಬಸ್ ಚಾಲಕ, ನಿರ್ವಾಹಕರನ್ನು ಸಮಾಧಾನಪಡಿಸಿ ಬಸ್‌ನ್ನು ಬಿಟ್ಟಿದ್ದಾರೆ.
ರೈಲಿನಲ್ಲಿ ಮಹಿಳೆಯರ ಭರ್ಜರಿ ಫೈಟಿಂಗ್..!: ಲೇಡಿಸ್ ಬೋಗಿಯಲ್ಲಿ ನಾರಿಯರ ಚಪ್ಪಲಿ ಕಿತ್ತಾಟ..!