ಮೂಲ್ಕಿ: ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆ ಸಾವು

Published : Jul 27, 2020, 03:15 PM IST
ಮೂಲ್ಕಿ: ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆ ಸಾವು

ಸಾರಾಂಶ

ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆಯ ಸಾವು| ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಳಿ ಎಳತ್ತೂರು ಗ್ರಾಮದಲ್ಲಿ ನಡೆದ ಘಟನೆ| ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಮಹಿಳೆ| 

ಮೂಲ್ಕಿ(ಜು.27): ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಯ ಎಳತ್ತೂರು ಗ್ರಾಮದ ನೆಲಗುಡ್ಡೆ ಎಂಬಲ್ಲಿ ಭಾನುವಾರ ಮಧ್ಯಾಹ್ನ ಬಿರುಸಿನ ಮಳೆ ಸಂದರ್ಭ, ಸ್ನಾನದ ಕೋಣೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. 

ಉಡುಪಿ ಜಿಲ್ಲೆಯ ಉಚ್ಚಿಲ ನಿವಾಸಿ ಜಾನಕಿ ಆಚಾರ್ಯ (70) ಮೃತ ಮಹಿಳೆ. ಮಹಿಳೆ ತಿಂಗಳ ಹಿಂದೆ ನೆಲಗುಡ್ದೆಯ ಮಗಳ ಮನೆಗೆ ಬಂದಿದ್ದು, ಭಾನುವಾರ ಮಧ್ಯಾಹ್ನ ಸ್ನಾನ ಮಾಡಲೆಂದು ಬಚ್ಚಲು ಕೋಣೆಗೆ ಹೋದಾಗ ಆಕಸ್ಮಿಕವಾಗಿ ಬಚ್ಚಲು ಕೋಣೆಯ ಗೋಡೆ ಕುಸಿದು ಮಹಿಳೆಯ ಮೇಲೆ ಬಿದ್ದಿದೆ.

ದಕ್ಷಿಣ ಕನ್ನಡದ​ದಲ್ಲಿ ಕೊರೋನಾ ಅಬ್ಬ​ರದ ನಡು​ವೆಯೂ ತಗ್ಗಿದ ಸಾವಿನ ಪ್ರಮಾ​ಣ! 

ಈ ಸಂದರ್ಭ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೂಲ್ಕಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಎಲ್ಲವೂ ರಾಯರ ಪವಾಡ: ಸಾವಿನ ದವಡೆಯಿಂದ ಪಾರಾದ MBBS ವಿದ್ಯಾರ್ಥಿನಿ! ವೀಲ್ ಚೇರ್‍‌ನಿಂದ ಎದ್ದು ಓಡಾಡಿದ್ದು ಹೇಗೆ?
ಜಮೀರ್, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ: ಸರ್ಕಾರಕ್ಕೆ ಜನಾರ್ದನ ರೆಡ್ಡಿ ಎಚ್ಚರಿಕೆ ಕೊಟ್ಟಿದ್ಯಾಕೆ?