ಗಂಡನ ಅಗಲಿಕೆಯಿಂದ ಮನನೊಂದು ಜೀವನ ಕೊನೆಗೊಳಿಸಿದಳು

Published : Oct 02, 2019, 11:07 AM IST
ಗಂಡನ ಅಗಲಿಕೆಯಿಂದ ಮನನೊಂದು ಜೀವನ ಕೊನೆಗೊಳಿಸಿದಳು

ಸಾರಾಂಶ

ಗಂಡನ ಅಗಲಿಕೆಯಿಂದ ಮನನೊಂದ ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. 

ದಾಬಸ್‌ಪೇಟೆ [ಅ.02]: ಗಂಡನ ಅಗಲಿಕೆಯಿಂದ ಮನನೊಂದು ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಮದಲ್ಲಿ ನಡೆದಿದೆ.

ಹಸಿರುವಳ್ಳಿ ಗ್ರಾಮದ ಚೈತ್ರಾ (25) ಮೃತೆ. ಈಕೆ ಕಳೆದ ನಾಲ್ಕು ವರ್ಷಗಳ ಹಿಂದೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಮೂಲದ ವ್ಯಕ್ತಿಯ ಜೊತೆ ವಿವಾಹವಾಗಿತ್ತು. ಈಕೆಯ ಪತಿ ಆಕಸ್ಮಿಕವಾಗಿ ಮೂರು ವರ್ಷದ ಹಿಂದೆ ವೇತಪಟ್ಟಿದ್ದಾರೆ. ಪತಿ ಮೃತಪಟ್ಟನಂತರ ತನ್ನ ತವರು ಮನೆ ಹಸಿರುವಳ್ಳಿ ಗ್ರಾಮಕ್ಕೆ ಬಂದು ತಂದೆ ತಾಯಿಯ ಜೊತೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೂರು ವರ್ಷದ ಹಿಂದೆ ಮೃತಪಟ್ಟತನ್ನ ಪತಿಯ ನೆನಪಿನಲ್ಲಿಯೇ ಪ್ರತಿದಿನ ಕಾಲ ಕಳೆಯುತ್ತಿದ್ದಳು. ತನ್ನ ಪತಿಯ ಅಗಲಿಕೆಯಿಂದ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ತ್ಯಾಮಗೊಂಡ್ಲು ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.

PREV
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!