ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಫುಲ್ ಹವಾ: ಹೋದಲ್ಲೆಲ್ಲಾ ಸೆಲ್ಫಿ ಕ್ರೇಜ್

By Web Desk  |  First Published Dec 2, 2018, 6:02 PM IST

ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು ಅಂದ್ರೆ ಮಹಿಳೆಯರಿಗೆ ಏನೋ ಒಂಥರಾ ಖುಷಿ. ಹಿಂದೊಮ್ಮೆ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಸೆಲ್ಫಿಗಾಗಿ ಮಹಿಳೆಯರು ಮುಗಿಬಿದ್ದಿದ್ದರು. ಇಂದು [ಭಾನುವಾರ] ಸಿದ್ದು ಜೊತೆಗಿನ ಸೆಲ್ಫಿ ಕ್ರೇಜ್ ಮುಂದುವರೆದಿದೆ.


ಬಾಗಲಕೋಟೆ, [ಡಿ.2]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನಪ್ರಿಯ ರಾಜಕಾರಣಿ ಎಂಬುವುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ಹೋದಲ್ಲೆಲ್ಲಾ ಜನಜಾತ್ರೆ, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳುತ್ತಾರೆ. 

ಇನ್ನು ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು ಅಂದ್ರೆ ಮಹಿಳೆಯರಿಗೆ ಏನೋ ಒಂಥರಾ ಖುಷಿ. ಹಿಂದೊಮ್ಮೆ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಸೆಲ್ಫಿಗಾಗಿ ಮಹಿಳೆಯರು ಮುಗಿಬಿದ್ದಿದ್ದರು.

Tap to resize

Latest Videos

ಇದೀಗ ಇಂದು [ಭಾನುವಾರ] ಸ್ವಕ್ಷೇತ್ರ ಬಾದಾಮಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. 

ಮದುವೆ ಸಮಾರಂಭಕ್ಕೆ ಹೋಗಿದ್ದ ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ದುಂಬಾಲು ಬಿದ್ದಿದ್ದು, ಭೋಜನ ವೇಳೆಯೂ ಸಿದ್ದು ಜೊತೆ ನಗು ನಗುತಾ ಸೆಲ್ಫಿ  ಕ್ಲಿಕ್ಕಿಸಿಕೊಂಡು ಫುಲ್ ಖುಷ್ ಆದ್ರು.

ಇದೇ ವೇಳೆ ಬಾದಾಮಿ ವಿಧಾನಸಭೆ ಕ್ಷೇತ್ರದ ಹಿರೇ ಬೂದಿಹಾಳ, ನೀಲಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗಳಿಗೆ ಭೇಟಿ ನೀಡಿ, ಮೃತ ರೈತರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದರು.

 

ಬಾದಾಮಿ ವಿಧಾನಸಭೆ ಕ್ಷೇತ್ರದ ಹಿರೇ ಬೂದಿಹಾಳ, ನೀಲಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗಳಿಗೆ ಭೇಟಿ ನೀಡಿ, ಮೃತ ರೈತರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿದೆ. pic.twitter.com/x3O6VkQdEF

— Siddaramaiah (@siddaramaiah)
click me!