ಜಮಖಂಡಿ ಉಪಚುನಾವಣೆ: 'ಮತ ಎಣಿಕೆ ವೇಳೆ ಇವಿಎಂ ಬದಲು’

By Web Desk  |  First Published Nov 22, 2018, 9:54 AM IST

ಜಮಖಂಡಿ ಉಪಚುನಾವಣೆ ಮತ ಎಣಿಕೆ ವೇಳೆ ಎವಿಎಂ ಮಷೀನ್ ಗಳು ಬದಲಾಯಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.


ಬಾಗಲಕೋಟೆ, [ನ.22]: ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣಾ ನಿಯಮ ಉಲ್ಲಂಘನೆಯಾಗಿದೆ ಎಂದು ಪಕ್ಷೇತರ ಪರಾಜಿತ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ ಆರೋಪಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ, ತಮಗೆ ಮತ ಎಣಿಕೆ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಿಲ್ಲ. 

Tap to resize

Latest Videos

ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ನ್ಯಾಮಗೌಡ ಎರಡು ತಾಸು ಮೊಬೈಲ್‌ ಬಳಸಿದ್ದರು. ಈ ವೇಳೆ ಮತ ಎಣಿಕೆ ಕೊಠಡಿಯಲ್ಲಿ ಇವಿಎಂ ಬದಲಾವಣೆಯಾಗಿದ್ದು, ತಮಗೆ ಬರಬೇಕಿದ್ದ 60 ಸಾವಿರ ಮತಗಳು ಬೇರೆಯವರಿಗೆ ಹೋಗಿದೆ. ಇದರಿಂದ ತಾವು ಸೋಲಬೇಕಾಯಿತು ಎಂದು ಹೇಳಿದರು. 

ಜಮಖಂಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ 10 ಅಂಶಗಳು..!

ಚುನಾವಣಾ ನೀತಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಈಗಾಗಲೇ ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಹಾಗಾಗಿ ಈ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮರು ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ನ ಶಾಸಕರಾಗಿದ್ದ ಸಿದ್ದು ನಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನವೆಂಬರ್ 3ರಂದು ನಡೆದಿದ್ದು,ನ.6ರಂದು ಫಲಿತಾಂಶ ಪ್ರಕಟವಾಗಿತ್ತು। ಇದ್ರಲ್ಲಿ ಸಿದ್ದು ನಾಮಗೌಡ ಪುತ್ರ ಆನಂದ ನಾಮಗೌಡ ಜಯಶಾಲಿಯಾಗಿದ್ದರು.

click me!