ಬಾದಾಮಿ: ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮಹಿಳೆಯರಿಂದ ಮುತ್ತಿಗೆ

By Suvarna News  |  First Published Jun 4, 2020, 2:04 PM IST

ಕೈಕುಲುಕಲು ಬಂದ ಕಾರ್ಯಕರ್ತನ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ| ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ನಡೆದ ಘಟನೆ| ಮಾರಕ ಕೊರೋನಾ ವೈರಸ್‌ ಇರುವ ಹಿನ್ನೆಲೆಯಲ್ಲಿ ಕೈ ಕೊಡುವ ಹಾಗಿಲ್ಲ, ಕೈ ಕೊಡಬೇಡಾ ನೀನು ಯಾವಾಗಲೂ ಕೈ ಹಿಂದಕ್ಕೆ ಇಟ್ಟುಕೊಳ್ಳಬೇಕು ಎಂದು ಕುಲುಕಲು ಬಂದ ಕಾರ್ಯಕರ್ತನಿಗೆ ಬುದ್ದಿವಾದ ಹೇಳಿದ ಸಿದ್ದರಾಮಯ್ಯ|


ಬಾಗಲಕೋಟೆ(ಜೂ.04): ಅಶ್ರಯ ಮನೆ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ಇಂದು(ಗುರುವಾರ) ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ನಡೆದಿದೆ. 

ಬಾದಾಮಿಯಲ್ಲಿ ನೂತನ ಮಿನಿ ವಿಧಾನಸೌಧ ಕಟ್ಟಡದ ಭೂಮಿಗೆ ಸಿದ್ದರಾಮಯ್ಯ ಪೂಜೆ ಸಲ್ಲಿಸಿದ್ದಾರೆ. ಭೂಮಿ ಪೂಜಾ ಬಳಿಕ ಸಿದ್ದರಾಮಯ್ಯ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು ಅಶ್ರಯ ಮನೆ ಹಕ್ಕು ಪತ್ರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಮುತ್ತಿಗೆ ವೇಳೆ ಸಾಮಾಜಿಕ ಅಂತರ  ಉಲ್ಲಂಘನೆಯಾಗಿದೆ. ಕೊರೋನಾ ಮಹಾಮಾರಿ ಲೆಕ್ಕಿಸದೇ ಮಹಿಳೆಯರು ಕಾರಿಗೆ ಮುತ್ತಿಗೆ ಹಾಕಿದ್ದಾರೆ.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಪ್ರವಾಸಿ ಗೈಡ್‌ಗಳ ಆದಾಯಕ್ಕೂ ಸೋಂಕು..!

ಅರಣ್ಯ ಇಲಾಖೆ ಜಾಗದಲ್ಲಿ ಆಶ್ರಯ ಮನೆ ನಿರ್ಮಾಣ ಮಾಡಲಾಗಿದೆ. ಹಕ್ಕು ಪತ್ರ ಇಲ್ಲದಕ್ಕೆ ಮೂಲಸೌಕರ್ಯ ಸಿಗುತ್ತಿಲ್ಲ. ಹೀಗಾಗಿ ಹಕ್ಕು ಪತ್ರದ ಜೊತೆಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ತಹಶೀಲ್ದಾರ್, ತಾಪಂ ಇಓ ಅವರನ್ನು ಕರೆದು ಸಮಸ್ಯೆ ಬಗೆಹರಿಸುವಂತೆ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. 

ಕೈಕುಲುಕಲು ಬಂದ ಕಾರ್ಯಕರ್ತನ ಮೇಲೆ ಗರಂ

ಬಾದಾಮಿ ಪಟ್ಟಣದ ಕೃಷ್ಣಾ ಹೆರಿಟೇಜ್ ಹೋಟೆಲ್‌ಗೆ ಬಂದ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ಸಿದ್ದರಾಮಯ್ಯ ಅವರ ಕೈಕುಲುಕಲು ಮುಂದಾಗಿದ್ದ, ಈ ವೇಳೆ ಎಚ್ಚೆತ್ತ ಸಿದ್ದರಾಮಯ್ಯ ಅವರು ಕಾರ್ಯಕರ್ತನ ಮೇಲೆ ಗರಂ ಅಗಿದ್ದರು. ಮಾರಕ ಕೊರೋನಾ ವೈರಸ್‌ ಇರುವ ಹಿನ್ನೆಲೆಯಲ್ಲಿ ಕೈ ಕೊಡುವ ಹಾಗಿಲ್ಲವೆಂದು ಫುಲ್ ಗರಂ ಅಗಿದ್ದರು. ಕೈ ಕೊಡಬೇಡಾ ನೀನು ಯಾವಾಗಲೂ ಕೈ ಹಿಂದಕ್ಕೆ ಇಟ್ಟುಕೊಳ್ಳಬೇಕು ಎಂದು ಕೊರೊನಾ ಹಿನ್ನೆಲೆ ಕೈಕುಲುಕಲು ಬಂದ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಬುದ್ದಿವಾದ ಹೇಳಿದ್ದಾರೆ. 

ಸಿಡಿಲಿಗೆ ಬಲಿಯಾದ ಶಾಂತವ್ವನ ಮನೆ ಭೇಟಿ ನೀಡಿದ ಸಿದ್ದರಾಮಯ್ಯ 

ಇನ್ನು ಸಿಡಿಲಿಗೆ ಬಲಿಯಾದ ಮೃತ ಶಾಂತವ್ವಳ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಬಾದಾಮಿ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಮೃತ ಶಾಂತವ್ವಳ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 1 ಲಕ್ಷ ರೂ ಪರಿಹಾರ ನೀಡಿದ್ದಾರೆ. ಈ ಪರಿಹಾರವನ್ನ ಮಕ್ಕಳ ಶಿಕ್ಷಣಕ್ಕೆ ಬಳಸುವಂತೆ ಮನೆಯವರಿಗೆ ಸೂಚನೆ ನೀಡಿದ್ದಾರೆ.

News In 100 Seconds

"

click me!