ಹುಬ್ಬಳ್ಳಿ: ಬಿಲ್ ಕೇಳಲು ಬಂದ ಮಹಿಳೆಗೆ ವೈದ್ಯಾಧಿಕಾರಿಯಿಂದ ಲೈಂಗಿಕ ಕಿರುಕುಳ

Kannadaprabha News   | Asianet News
Published : Jun 20, 2020, 09:34 AM IST
ಹುಬ್ಬಳ್ಳಿ: ಬಿಲ್ ಕೇಳಲು ಬಂದ ಮಹಿಳೆಗೆ ವೈದ್ಯಾಧಿಕಾರಿಯಿಂದ ಲೈಂಗಿಕ ಕಿರುಕುಳ

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮೇಲೆ ಲೈಂಗಿಕ ಆರೋಪ| ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿ ವಿತರಿಸುತ್ತಿದ್ದ ಮಹಿಳೆ| ಏಜೆನ್ಸಿ ಮುಖ್ಯಸ್ಥೆ  ಮೇಲೆ ಲೈಂಗಿಕ ಕಿರುಕುಳ| ಸಾಮಗ್ರಿ ವಿತರಿಸಿದ್ದರ ಬಿಲ್ ಕೇಳಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ|

ಹುಬ್ಬಳ್ಳಿ(ಜೂ.20): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮೇಲೆ ಲೈಂಗಿಕ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಮಹಿಳೆ ಹಾಗೂ ಸಂಬಂಧಿಕರು ವೈದ್ಯಾಧಿಕಾರಿ ಮೇಲೆ ಹಲ್ಲೆಗೂ ಮುಂದಾಗಿದ್ದರು. 

ಈ ಆಗಮಿಸಿದ ಪೊಲೀಸರು ಅಗಮಿಸಿ ಸಮಾಧಾನ ಪಡಿಸಿ ವೈದ್ಯಾಧಿಕಾರಿ ಹಾಗೂ ಮಹಿಳೆಯನ್ನ ಠಾಣೆಗೆ  ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.  ಫಾರ್ಮಾಸಿಟಿಕಲ್ ಏಜೆನ್ಸಿಯ ಮುಖ್ಯಸ್ಥೆಗೆ ವೈದ್ಯಾಧಿಕಾರಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲೆದ ಮೂರು ತಿಂಗಳಿಂದ ಆಸ್ಪತ್ರೆಯ ವೈದ್ಯಕೀಯ ಸಾಮಾಗ್ರಿ ಸರಬರಾಜು ಏಜೆನ್ಸಿಯಿಂದ ಮಾಡಲಾಗುತ್ತಿತ್ತು. ಆದರೆ ಬಿಲ್‌ ಆಗಿರಲಿಲ್ಲವಂತೆ. ಬಿಲ್‌ ಕೇಳಲು  ಬಂದಾಗ ಏಜೆನ್ಸಿ ಮುಖ್ಯಸ್ಥೆ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾರೆ ಎಂದು ಅರೋಪಿಸಲಾಗಿದೆ. 

ಧಾರವಾಡ: ಡಿಸಿ ಕಚೇರಿ ಮುಂದೆ ಜಿಮ್ ಮಾಡಿ ಯುವಕರ ಪ್ರತಿಭಟನೆ!

ಮಹಿಳೆ ಹಾಗೂ ಮಹಿಳೆಯ ಸಂಬಂಧಿಗಳಿಂದ ನಗರದ ಚಿಟಗುಪ್ಪಿ ಆಸ್ಪತ್ರೆ ಎದುರು ಆಕ್ರೋಶ ವ್ಯಕ್ತಪಡಿಸಿದರು. ಬಿಲ್‌ ಕೇಳಲು ಬಂದರೆ ಬಿರಾದಾರ ಅಸಭ್ಯವಾಗಿ ವರ್ತಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಬಿರಾದಾರ ಅವರನ್ನು ಥಳಿಸಲು ಮಹಿಳೆ ಹಾಗೂ ಸಂಬಂಧಿಗಳು ಮುಂದಾದರು. ಆಗ ಪೊಲೀಸರು ಅಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. 

ವೈದ್ಯಾಧಿಕಾರಿ ಬಿರಾದಾರ ಹಾಗೂ ಪ್ರತಿಭಟನಾನಿರತರನ್ನು ಉಪನಗರ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಇದರಿಂದ ಚಿಟಗುಪ್ಪಿ ಆಸ್ಪತ್ರೆ ಎದುರು ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ. 
 

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?