ಪುತ್ತೂರು: ಗೃಹಲಕ್ಷ್ಮಿ ಹಣದಿಂದ ಗಂಡನಿಗೆ ಸ್ಕೂಟರ್ ಕೊಡಿಸಿದ ಮಹಿಳೆ!

By Kannadaprabha News  |  First Published Nov 12, 2024, 12:31 PM IST

ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಕ್ರಿಯಾ ಎನ್ನುವ ಮಹಿಳೆ ಹೋಂಡಾ ಡಿಯೋ 125 ಎಂಬ ಸ್ಕೂಟರ್ ಖರೀದಿಸಿದ್ದು, ಪೇಂಟರ್‌ ಕೆಲಸ ಮಾಡುವ ತಮ್ಮ ಗಂಡ ಸಲೀಂ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. 


ಪುತ್ತೂರು(ನ.12):  ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯೊಬ್ಬರು ತಮ್ಮ ಗಂಡನಿಗೆ ಸ್ಕೂಟರ್‌ಕೊಡಿಸಿರುವ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕೋಡಿಂಬಾಡಿಯಲ್ಲಿ ನಡೆದಿದೆ. 

ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಕ್ರಿಯಾ ಎನ್ನುವ ಮಹಿಳೆ ಹೋಂಡಾ ಡಿಯೋ 125 ಎಂಬ ಸ್ಕೂಟರ್ ಖರೀದಿಸಿದ್ದು, ಪೇಂಟರ್‌ ಕೆಲಸ ಮಾಡುವ ತಮ್ಮ ಗಂಡ ಸಲೀಂ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. 

Tap to resize

Latest Videos

ಗೃಹಲಕ್ಷ್ಮೀ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಕಟ್ಟಿಸಿದ ತಾಯಿ!

ಸುಮಾರು 83 ಸಾವಿರಕ್ಕಿಂತ ಅಧಿಕ ಬೆಲೆ ಬಾಳುವ ಹೋಂಡಾ ಡಿಯೋ 125 ಖರೀದಿಸುವ ಉದ್ದೇಶದಿಂದ ಮಿಶ್ರಿಯಾ ಅವರು ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟಿದ್ದರು. ಈ ಗೃಹಲಕ್ಷ್ಮಿ ಹಣದ ಜತೆಗೆ ತಮ್ಮ ಬಳಿ ಇದ್ದ ಹಣ ಸೇರಿಸಿ ಸ್ಕೂಟರ್ ಖರೀದಿಸಿದ್ದಾರೆ. 

ಸ್ಕೂಟ‌ರ್ ಮೇಲೆ 'ಆರ್ಥಿಕ ನೆರವು ಗೃಹಲಕ್ಷ್ಮಿ' ಎಂಬ ನಾಮಫಲಕ ಹಾಕಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳರ್‌ ಹಾಗೂ ಶಾಸಕ ಅಶೋಕ್ ರೈ ಫೋಟೋ ಹಾಕಿದ್ದಾರೆ.

click me!