ಹಾರ ಬದಲಾಯಿಸಿಕೊಂಡವನ ಮನೆ ಹೊರಗೆ ರಾತ್ರಿ ಕಳೆದ ಯುವತಿ

Published : Sep 10, 2019, 03:17 PM ISTUpdated : Sep 10, 2019, 03:18 PM IST
ಹಾರ ಬದಲಾಯಿಸಿಕೊಂಡವನ ಮನೆ ಹೊರಗೆ ರಾತ್ರಿ ಕಳೆದ ಯುವತಿ

ಸಾರಾಂಶ

ಚಾರಿತ್ರ್ಯ ಶಂಕಿಸಿ ಪ್ರಿಯತಮ ಬಿಟ್ಟು ಹೋಗಿದ್ದಾನೆಂದು ಯುವತಿ ರಾತ್ರಿ ಪೂರ ಯುವಕನ ಮನೆಮುಂದೆಯೇ ಕಳೆದಿದ್ದಾಳೆ. ಹಾರ ಬದಲಾಯಿಸಿಕೊಂಡು ಮದುವೆಯಾಗಿ, ಕಾನೂನು ಬದ್ಧವಾಗಿ ಇಬ್ಬರೂ ಸತಿಪತಿಗಳಾಗಿರಲಿಲ್ಲ. ಇದೀಗ ತನ್ನನ್ನು ಬಿಟ್ಟು ಹೋಗಿರುವ ಯುಕನಿಗಾಗಿ ಯುವತಿ ಪ್ರಿಯತಮನ ಮನೆಮುಂದೆ ಕುಳಿತಿದ್ದಾಳೆ.

ಕೊಪ್ಪಳ(ಸೆ.10): ಪ್ರೀತಿಸಿ ಹಾರ ಬದಲಾಯಿಸಿಕೊಂಡ ಯುವಕ ಯುವತಿಯ ಚಾರಿತ್ರ್ಯ ಶಂಕಿಸಿ ಬಿಟ್ಟು ಹೋಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹಠ ಬಿಡದ ಯುವತಿ ರಾತ್ರಿ ಪೂರ್ತಿ ಯುವಕನ ಮನೆ ಹೊರಗೆಯೇ ಪ್ರಿಯತಮನಿಗಾಗಿ ಕಾದಿದ್ದಾಳೆ.

ಶಕುಂತಲಾ ಎಂಬಾಕೆ ಪ್ರೀತಿಸಿ ಹಾರ ಬದಲಾಯಿಸಿಕೊಂಡವನ ಮನೆ ಎದುರು ರಾತ್ರಿಯಿಡೀ ಕಳೆದಿದ್ದಾಳೆ. ಕೊಪ್ಪಳದ ಕುಕನೂರು ತಾಲೂಕಿನ ಭಾನಾಪುರದಲ್ಲಿ ಘಟನೆ ನಡೆದಿದ್ದು, ಭರವಸೆ ನೀಡಿದ್ದ ಯುವಕನೀಗ ನಾಪತ್ತೆಯಾಗಿದ್ದಾನೆ.

ಕೊಪ್ಪಳ: ಹೆತ್ತ ಮಗನನ್ನೇ ಉಸಿರುಗಟ್ಟಿಸಿ ಕೊಂದ ತಾಯಿ..!

ಎಲ್ಲ ಅವಾಂತರಕ್ಕೂ ಪೊಲೀಸರ ಪೌರೋಹಿತ್ಯವೇ ಕಾರಣ:

ವಸಂತ ಎಂಬಾತನನ್ನ ಪ್ರೀತಿಸಿ ಸರ್ವಸ್ವ ಅರ್ಪಿಸಿದ್ದ ಯುವತಿಗೆ ಮದುವೆಯ ಭರವಸೆ ನೀಡಿದ್ದ ಯುವಕ ನಾಪತ್ತೆಯಾಗಿದ್ದಾನೆ. ಇದಕ್ಕೆಲ್ಲ ಪೊಲೀಸರ ಪೌರೋಹಿತ್ಯವೇ ಕಾರಣ ಎಂದು ಯುವತಿ ಆರೋಪಿಸಿದ್ದಾಳೆ.

ಮೊದಲು ನಿಮ್ಮ ಮನೆ ತೊಳ್ಕಳ್ಳಿ: ಸಿದ್ದುಗೆ ಮಾಧುಸ್ವಾಮಿ ಟಾಂಗ್

ಪೊಲೀಸ್ ಅಧಿಕಾರಿಗಳ ಅಣತಿಯಂತೆ ಯುವತಿ ಹಾರ ಬದಲಾಯಿಸಿಕೊಂಡಿದ್ದಳು. ಮದುವೆ ನೋಂದಣಿ ಮಾಡಿಸಬೇಕೆನ್ನುವಾಗ ಯುವಕ ನಿರಾಕರಿಸಿದ್ದಾನೆ. ಯುವತಿಯ ಚಾರಿತ್ರ್ಯ ಶಂಕಿಸಿ ಯುವಕ ತಲೆಮರೆಸಿಕೊಂಡಿದ್ದಾನೆ. ಯುವಕ ಬಂದು ಕಾರಣ ಹೇಳುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದ ಯುವತಿ ಪಟ್ಟು ಹಿಡಿದಿದ್ದಾಳೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು