ಮಹಿಳೆಯ ಶೀಲ ಶಂಕಿಸಿ ಆಕೆಯ ಬಗ್ಗೆ ಕರ ಪತ್ರ ಹಂಚಿಕೆ ಮಾಡಿದ ವ್ಯಕ್ತಿಗೆ ರಸ್ತೆ ಮಧ್ಯೆಯೇ ಧರ್ಮದೇಟು ನೀಡಲಾಗಿದೆ.
ಚಿಕ್ಕಮಗಳೂರು[ಜ.03]: ಮಹಿಳೆಯ ಶೀಲ ಶಂಕಿಸಿ ವ್ಯಕ್ತಿಯೋರ್ವ ಕರಪತ್ರ ಹಂಚಿದ್ದು ಆತನಿಗೆ ರಸ್ತೆಯಲ್ಲಿಯೇ ಧರ್ಮದೇಟು ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಘಟನೆ ನಡೆದಿದ್ದು, ಸಿಟ್ಟಿಗೆದ್ದ ಮಹಿಳೆ ಆಕೆಯ ವಿರುದ್ಧ ಕರಪತ್ರ ಹಂಚಿಕೆ ಮಾಡಿದ್ದ ಸುಂದರೇಶ್ ಎಂಬಾತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಆಕೆಯ ಬಗ್ಗೆ ಶೀಲ ಶಂಕಿಸಿ ಕರಪತ್ರವನ್ನು ಹಂಚಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಸುಂದರೇಶ್ ನನ್ನು ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಥಳಿಸಿದ್ದಾರೆ. ಅಲ್ಲದೇ ಕರಪತ್ರ ಹಂಚಿಕೆ ಮಾಡಿದ್ದರ ಬಗ್ಗೆ ಕ್ಲಾಸ್ ತೆಗೆದುಕೊಂಡು ಪೊಲೀಸರಿಗೂ ವಿಷಯ ಮುಟ್ಟಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳಕ್ಕಾಗಿಮಿಸಿದ ಜಯಪುರ ಠಾಣೆ ಪೊಲೀಸರು ಸುಂದರೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.