ಹೂಳಲು ಸ್ಮಶಾನವಿಲ್ಲ, ಕುಟುಂಬಸ್ಥರಿಂದ ವೃದ್ಧೆಯ ದೇಹದಾನ

By Suvarna News  |  First Published Jan 3, 2020, 10:24 AM IST

ಶವ ಹೂಳಲು ಸ್ಮಶಾನ ಇಲ್ಲದ ಕಾರಣ 40ಕ್ಕೂ ಹೆಚ್ಚು ಜನರ ದೇಹದಾನ| ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ಸತ್ತರೆ ಹೂಳಲು ಸ್ಮಶಾನವಿಲ್ಲ|ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿಯೇ ನಡೆದ ಘಟನೆ|
 


ಕಲಬುರಗಿ[ಜ.03]: ಚುನಾವಣೆ ಬಂದಾಗ ಮಾತ್ರ ಗ್ರಾಮಗಳಿಗೆ ಭೇಟಿ ಭರವಸೆ ನೀಡುವ ಮೂಲಕ ಮತ ಪಡೆಯಲು ಮುಂದಾಗುವ ಜನಪ್ರತಿನಿಧಿಗಳು ನಿಜವಾದ ಸಂಕಷ್ಟ ಎದುರಾದಾಗ ಸ್ಪಂದಿಸುವುದಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಈ ಗ್ರಾಮದ ಜನರಿಗೆ ಸತ್ತರೆ  ಹೂಳಲು ಸ್ಮಶಾನ ಕೂಡ ಇಲ್ಲ. ಹೌದು, ಈ ಗ್ರಾಮದಲ್ಲಿ ಶವ ಹೂಳಲು ಸ್ಮಶಾನ ಇಲ್ಲದ ಕಾರಣ ಸುಮಾರು 40ಕ್ಕೂ ಹೆಚ್ಚು ಜನರ ದೇಹದಾನ ಮಾಡಿದ್ದಾರೆ. 

ಶವ ಹೂಳಲು ಸ್ಮಶಾನವಿಲ್ಲದ ಕಾರಣ ವೃದ್ಧೆಯ ದೇಹದಾನ ಮಾಡಿದ ಘಟನೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದಲ್ಲಿ ನಡೆದಿದೆ. ಸುಭದ್ರಮ್ಮ(75) ಎಂಬ ಮಹಿಳೆ ಗುರುವಾರ ಮೃತಪಟ್ಟಿದ್ದರು. ಆದರೆ, ಶವ ಹೂಳಲು ಗ್ರಾಮದಲ್ಲಿ ಸ್ಮಶಾನವಿಲ್ಲದ ಹಿನ್ನಲೆಯಲ್ಲಿ ಮೃತ ವೃದ್ದೆಯ ಕುಟುಂಬಸ್ಥರು ದೇಹದಾನ ಮಾಡಲು ನಿರ್ಧರಿಸಿದ್ದರು. ಗ್ರಾಮದಲ್ಲಿ ಸ್ಮಶಾನವಿಲ್ಲದ ಹಿನ್ನಲೆಯಲ್ಲಿ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಜನ ದೇಹದಾನ ಪತ್ರ ನೀಡಿದ್ದಾರೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿಯೇ ಈ ಘಟನೆ ನಡೆದಿದೆ. ಇಷ್ಟಾದ್ರು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಗ್ರಾಮಸ್ಥರ ನೆರವಿಗೆ ಧಾವಿಸದೇ ಇರೋದು ಮಾತ್ರ ವಿಪರ್ಯಾಸ. 

click me!