ಚಿಕ್ಕಮಗಳೂರು: ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು, ಮಧ್ಯರಾತ್ರಿವರೆಗೂ ಮಹಿಳೆ ಪ್ರತಿಭಟನೆ

By Girish Goudar  |  First Published Jun 2, 2023, 1:07 PM IST

ದಾಖಲೆ ಸಮೇತ ದೂರು ನೀಡಲು ಮುಂದಾದರೂ ಕೂಡ ಎರಡು ದಿನಗಳ ಕಾಲ ಪ್ರಕರಣ ದಾಖಲಿಸಿಕೊಳ್ಳದ ಕಳಸ ತಾಲೂಕಿನ ಕುದುರೆಮುಖ ಪೊಲೀಸರ ವಿರುದ್ಧ ಮಹಿಳೆಯೊಬ್ವಳು ತನ್ನ 4 ವರ್ಷದ ಮಗು ಜೊತೆ ಏಕಾಂಗಿಯಾಗಿ ಹೋರಾಡಿ ಮಧ್ಯರಾತ್ರಿ ಎರಡು ಗಂಟೆಗೆ ಎಫ್ಐಆರ್ ದಾಖಲಿಸಿದ್ದಾಳೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜೂ.02):  ಪೊಲೀಸರ ನಿರ್ಲಕ್ಷ ಖಂಡಿಸಿ ನ್ಯಾಯಕ್ಕಾಗಿ 4 ವರ್ಷದ ಮಗು ಜೊತೆ ರಾತ್ರಿ 1 ಗಂಟೆವರೆಗೂ ಮಹಿಳೆಯೊಬ್ಬರು ಠಾಣೆಯಲ್ಲಿ ಕಳೆದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ದಾಖಲೆ ಸಮೇತ ದೂರು ನೀಡಲು ಮುಂದಾದರೂ ಕೂಡ ಎರಡು ದಿನಗಳ ಕಾಲ ಪ್ರಕರಣ ದಾಖಲಿಸಿಕೊಳ್ಳದ ಕಳಸ ತಾಲೂಕಿನ ಕುದುರೆಮುಖ ಪೊಲೀಸರ ವಿರುದ್ಧ ಮಹಿಳೆಯೊಬ್ವಳು ತನ್ನ 4 ವರ್ಷದ ಮಗು ಜೊತೆ ಏಕಾಂಗಿಯಾಗಿ ಹೋರಾಡಿ ಮಧ್ಯರಾತ್ರಿ ಎರಡು ಗಂಟೆಗೆ ಎಫ್ಐಆರ್ ದಾಖಲಿಸಿದ್ದಾಳೆ. 

Tap to resize

Latest Videos

undefined

ಅಸಭ್ಯ ವರ್ತನೆ ವಿರುದ್ಧ ದೂರು: 

ಕಳಸ ತಾಲೂಕಿನ ಸಂಸೆ ಗ್ರಾಮದ ಸುನಿತಾ ಎಂಬುವರು ಪಕ್ಕದ ಮನೆಯ ನವೀನ್ ಹಾಗೂ ಶ್ರೇಯಾಂಶ ಎನ್ನುವರು ಮನೆಯ ಕಿಟಕಿ ಬಳಿಬಂದು ತೀರ ಅಸಭ್ಯವಾಗಿ ವರ್ತಿಸುತ್ತಾರೆ. ಪ್ರಶ್ನೆ ಮಾಡಿದರೆ ನಿನ್ನ ಗಂಡನನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ದಾಖಲೆ ಸಮೇತ ಕುದುರೆಮುಖ ಪೊಲೀಸರಿಗೆ ಎರಡು ದಿನಗಳ ಹಿಂದೆ ದೂರು ನೀಡಿದ್ದರು. ಆದರೆ, ಎರಡು ದಿನಗಳಿಂದ ಪ್ರಕರಣ ದಾಖಲಿಸದೆ ಕುದುರೆಮುಖ ಪೊಲೀಸರು ಮಹಿಳೆಗೆ ಸತಾಯಿಸಿದ್ದಾರೆ.

ಕಾಶ್ಮೀರದ ತೀತ್ವಾಲ್‌ಗೆ ಶೃಂಗೇರಿ ಶ್ರೀಗಳು: ಶಾರದಾಂಬೆಗೆ ವಿಧುಶೇಖರ ಸ್ವಾಮೀಜಿಯಿಂದ ವಿಶೇಷ ಪೂಜೆ

ಕರೆಂಟ್ ಇಲ್ಲ ಕಳಸಕ್ಕೆ ಹೋಗಿ ದೂರು ನೀಡಿ ಎಂದು ಕಳುಹಿಸಿದ್ದಾರೆ. ಕಳಸಕ್ಕೆ ಬಂದರೆ ಕುದುರೆಮುಖ ಪೊಲೀಸರು ಬರಲೇ ಇಲ್ಲ. ಈಗ ಬಂದೆ, ಬರುತ್ತಿದ್ದೇನೆ ಎಂದು ಎರಡು ದಿನಗಳಿಂದ ದೂರು ದಾಖಲಿಸಿ ಕೊಟ್ಟಿಲ್ಲ. ಪೊಲೀಸರ ವಿರುದ್ಧ ತನ್ನ ನಾಲ್ಕು ವರ್ಷದ ಮಗು ಜೊತೆ ಏಕಾಂಗಿಯಾಗಿ ಹೋರಾಟಕ್ಕಿಳಿದ ಮಹಿಳೆ ನಿನ್ನೆ ಇಡೀ ದಿನ ಕಳಸ ಕಾಣೆಯಲ್ಲಿ ಕಾದಿದ್ದಾರೆ. ತನ್ನ ನಾಲ್ಕು ವರ್ಷದ ಮಗುವಿಗೆ ಠಾಣೆಯಲ್ಲಿ ಊಟ ಮಾಡಿಸಿ, ಮಧ್ಯರಾತ್ರಿ ಎರಡು ಗಂಟೆವರೆಗೆ ಕಾದಿದ್ದಾರೆ. ವಿಷಯ ದೊಡ್ಡದಾದ ಬಳಿಕ ರಾತ್ರಿ ಎರಡು ಗಂಟೆಯ ನಂತರ ಠಾಣೆಗೆ ಬಂದ ಸಬ್ ಇನ್ಸ್ಪೆಕ್ಟರ್ ಶಂಭುಲಿಂಗ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಮಾಜಿ ಸಚಿವೆ ಮೋಟಮ್ಮ ಆರೋಪ

ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪೊಲೀಸರ ನಡೆ: 

ಸುನಿತಾ ಪತಿ ರಾಜೇಂದ್ರ ಸಂಸೆ ಗ್ರಾಮದಲ್ಲಿ ನಡೆಯುತ್ತಿದ್ದ ಗಲಾಟೆಯೊಂದರ  ವಿಡಿಯೋ ಮಾಡಿದ್ದಕ್ಕೆ ನವೀನ್ ಹಾಗೂ ಶ್ರೇಯಾಂಶ ನಮ್ಮ ಮೇಲೆ ಇ ರೀತಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸುನೀತ ಆರೋಪಿಸಿದ್ದಾರೆ. ಸರಿ-ತಪ್ಪು ಎರಡನೇ ಮಾತು. ಆದರೆ, ದಾಖಲೆ ಸಮೇತ ದೂರು ನೀಡಿದರು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನೂತನವಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಶಾಸಕರು ಕೂಡ ಮಹಿಳೆ ಜನಪ್ರತಿನಿಧಿ ಆಗಿದ್ದಾರೆ. ಕಳಸಾದ ಪೊಲೀಸರು ನಡೆದುಕೊಂಡಿರುವ ರೀತಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ.ಇನ್ನಾದ್ರೂ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನಹರಿಸಿ ನೊಂದ ಮಹಿಳೆಗೆ ಸೂಕ್ತ ನ್ಯಾಯ ಒದಗಿಸಿಕೊಡುತ್ತಾರೆ ಕಾದುನೋಡಬೇಕಾಗಿದೆ.

click me!