ತನ್ನ ಚರ್ಮ ರೋಗಕ್ಕೆ ಹೆದರಿ ಮನೆ ಬಿಟ್ಟು ಹೋದ ಮಹಿಳೆ

Kannadaprabha News   | Asianet News
Published : Feb 07, 2020, 11:26 AM IST
ತನ್ನ ಚರ್ಮ ರೋಗಕ್ಕೆ ಹೆದರಿ ಮನೆ ಬಿಟ್ಟು ಹೋದ ಮಹಿಳೆ

ಸಾರಾಂಶ

ಚರ್ಮರೋಗದಿಂದ ಬಳಲುತ್ತಿದ್ದ ಮಹಿಳೆಯೋರ್ವರು ತನ್ನ ರೋಗ ತನ್ನ ಮಕ್ಕಳಿಗೂ ತಗುಲುವ ಭೀತಿಯಿಂದ ಮನೆ ಬಿಟ್ಟು ಹೋಗಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ [ಜ.07]: ತನಗಿರುವ ಚರ್ಮರೋಗಕ್ಕೆ ಬೇಸತ್ತು ಮಹಿಳೆಯೋರ್ವರು ಮನೆ ಬಿಟ್ಟು ಹೋಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

ಹಾಸನ ಜಿಲ್ಲೆಯ ಅರಕಲಗೂರು ತಾಲೂಕಿನ ದಾಸನಪುರದ ಅನುಶ್ರೀ [30] ಎಂಬ ಮಹಿಳೆ ತನಗಿರುವ ಕಾಯಿಲೆ ತನ್ನ ಮಕ್ಕಳಿಗೂ ಹರಡುತ್ತದೆ ಎನ್ನುವ ಆತಂಕದಿಂದ ಮನೆ ಬಿಟ್ಟು ತೆರಳಿದ್ದಾರೆ. 

2019ರ ಅಕ್ಟೋಬರ್ 17 ರಂದು ರಾತ್ರಿಯಿಂದಲೇ ಮಹಿಳೆ ನಾಪತ್ತೆಯಾಗಿದ್ದು ಈಗ ಪ್ರಕರಣ ಬೆಳಕಿಗೆ ಬಂದಿದ್ದು ಅಂದಿನಿಂದಲೂ ಮಹಿಳೆಯ ಪತ್ತೆ ಕಾರ್ಯ ನಡೆಸಲಾಗುತ್ತಿದೆ. 

ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್...

ಇಬ್ಬರು ಮಕ್ಕಳೊಂದಿಗೆ ಇದೀಗ ಮಹಿಳೆಯ ಪತಿಯು ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೆಡೆ ಕಾಣೆಯಾಗಿರುವುದಾಗಿ ಪೋಸ್ಟರ್ ಅಂಟಿಸಿ ಪತ್ನಿ ಹುಡುಕಾಟಕ್ಕೆ ಇಳಿದಿದ್ದಾರೆ. 

ಹಾಸನ, ದಾವಣಗೆರೆ, ಶಿವಮೊಗ್ಗದಲ್ಲಿಯೂ ಪತ್ನಿಗಾಗಿ ಹುಡುಕಾಟ ನಡೆಸಿದ್ದು, ಅರಕಲಗೂಡು ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಲಾಗಿದೆ. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!