ಬಾಯ್‌ಫ್ರೆಂಡ್‌ಗಾಗಿ ಪತಿಯನ್ನೇ ಮರ್ಡರ್ ಮಾಡಿದ ಖತರ್ನಾಕ್ ಕ್ರೈಂ ಸ್ಟೋರಿ ಎರಡೂವರೆ ವರ್ಷದ ನಂತ್ರ ಬಯಲಾಗಿದೆ. ಎರಡು ವರ್ಷದ ಹಿಂದೆ ನಡೆದ ಕೊಲೆಯ ರಹಸ್ಯ ಬಯಲಾಗಿದೆ.
ಮಂಡ್ಯ(ಜ.14): ಬಾಯ್‌ಫ್ರೆಂಡ್‌ಗಾಗಿ ಪತಿಯನ್ನೇ ಮರ್ಡರ್ ಮಾಡಿದ ಖತರ್ನಾಕ್ ಕ್ರೈಂ ಸ್ಟೋರಿ ಎರಡೂವರೆ ವರ್ಷದ ನಂತ್ರ ಬಯಲಾಗಿದೆ. ಎರಡು ವರ್ಷದ ಹಿಂದೆ ನಡೆದ ಕೊಲೆಯ ರಹಸ್ಯ ಬಯಲಾಗಿದೆ.
ಎರಡೂವರೆ ವರ್ಷಗಳ ನಂತರ ಕೊಲೆ ಪ್ರಕರಣ ಬಯಲಾಗಿದ್ದು, ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಗಂಡನನ್ನೆ ಕೊಲೆ ಮಾಡಿದ ಪತ್ನಿಯ ಮುಖವಾಡ ಕಳಚಿಬಿದ್ದಿದೆ.
ಉಡುಪಿ: ಇಬ್ಬರು ಶಂಕಿತ ಉಗ್ರರ ಬಂಧನ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚೆಂದಹಳ್ಳಿ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ಚಾಮರಾಜನಗರದ ಮೂಲದ ರಂಗಸ್ವಾಮಿ(38) ಕೊಲೆಯಾಗಿದ್ದರು. ರಂಗಸ್ವಾಮಿ ಪತ್ನಿ ರೂಪ(26) ಹಾಗೂ ರಾಜೇಗೌಡನದೊಡ್ಡಿಯ ಮುತ್ತುರಾಜು(30) ಬಂಧಿತ ಆರೋಪಿಗಳು.
ಲವ್ ಮಾಡಿ ಮದುವೆಯಾದ ಪತಿಯನ್ನೇ ಕೊಂದಳು:
ರಂಗಸ್ವಾಮಿ ಮದ್ದೂರಿನ ಭೀಮನ ಕೆರೆ ಗ್ರಾಮದ ಕಲ್ಲು ಕ್ವಾರೆಯಲ್ಲಿ ಲಾರಿ ಚಾಲನಕಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಭೀಮನಕೆರೆಯ ರೂಪ ಜೊತೆ ಪರಿಚಯವಾಗಿ ನಂತರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ರಂಗಸ್ವಾಮಿ, ರೂಪ ರಾಜೇಗೌಡನದೊಡ್ಡಿಯಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ರಾಜೇಗೌಡನ ದೊಡ್ಡಿಯ ಮುತ್ತುರಾಜುನೊಂದಿಗೆ ರೂಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು.
ಗ್ರಾಮದ ಕೆರೆಯಲ್ಲಿ ಶವ ಹೂತಿಟ್ಟಿದ್ದಳು
ಗಂಡನಿಗೆ ಅನೈತಿಕ ಸಂಬಂಧ ಗೊತ್ತಾಗಿದ್ರಿಂದ ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ ಮಾಡಲು ಪ್ಲಾನ್ ಮಾಡಿದ್ದಳು. ಗಂಡನನ್ನು ಸಾಯಿಸಿದ ಬಳಿಕ ಗ್ರಾಮದ ಕೆರೆಯಲ್ಲಿ ಶವ ಹೂತಿಟ್ಟು ಜೋಡಿ ಮದ್ದೂರಿನಲ್ಲಿ ವಾಸ ಮಾಡುತ್ತಿದ್ದರು. ರೂಪ ಕೊಲೆ ಮಾಡಿದ ಬಳಿಕ ಗಂಡ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ್ದಳು. ಈ ನಡುವೆ ಬಿನ್ನಾಭಿಪ್ರಾಯ ಬಂದ ಹಿನ್ನಲೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಗಳಿಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ವಶಕ್ಕೆ ಪಡೆದ ನಂತರ ಶವ ಹೂತಿಟ್ಟಿರೋ ಜಾಗವನ್ನು ಪೊಲೀಸರು ಗುರುತಿಸಿದ್ದಾರೆ. ಜ.16ರಂದು ಎಸಿ ಸಮ್ಮುಖದಲ್ಲಿ ಶವ ಹೊರತೆಗೆಯಲು ದಿನಾಂಕ ನಿಗದಿ ಮಾಡಲಾಗಿದೆ. ಶವಪರೀಕ್ಷೆಗೆ ವೈದ್ಯರು ಸಿಗದ ಕಾರಣ ಡಿ.16ರಂದು ದಿನಾಂಕ ನಿಗದಿಪಡಿಸಲಾಗಿದೆ. ಆರೋಪಿಗಳ ಶವ ಹೂತಿರುವ ಸ್ಥಳದಲ್ಲಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರೀತಿಸಿದ ಅಪ್ರಾಪ್ತೆಗೆ ವಿಷ ಕುಡಿಸಿ ಕೊಂದ ಯುವಕ..!