ನಮ್ಮ ಕೌಟುಂಬಿಕ ವ್ಯವಸ್ಥೆಗೆ ಮಹಿಳೆ ಆಧಾರ ಸ್ತಂಭವಾಗಿದ್ದು, ಇಡೀ ಜಗತ್ತು ಮಹಿಳೆಯನ್ನು ಗೌರವಿಸುತ್ತದೆ ಎಂದು ಅಮೆರಿಕನ ಮಿಡಲ… ಈಸ್ಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸುಝಾನ್ ಡಿಸೋಜಾ ಹೇಳಿದರು.
ಅಥಣಿ : ನಮ್ಮ ಕೌಟುಂಬಿಕ ವ್ಯವಸ್ಥೆಗೆ ಮಹಿಳೆ ಆಧಾರ ಸ್ತಂಭವಾಗಿದ್ದು, ಇಡೀ ಜಗತ್ತು ಮಹಿಳೆಯನ್ನು ಗೌರವಿಸುತ್ತದೆ ಎಂದು ಅಮೆರಿಕನ ಮಿಡಲ… ಈಸ್ಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸುಝಾನ್ ಡಿಸೋಜಾ ಹೇಳಿದರು.
ಇಲ್ಲಿನ ಕೆಎಲ್…ಇ ಸಂಸ್ಥೆಯ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯ ಅಥಣಿ ಹಾಗೂ ಸಬಲೀಕರಣ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕುವೈತನಿಂದ ಆನ್‌ಲೈನ್ ಮೂಲಕ ಮಾತನಾಡಿದ ಅವರು, ಈ ಜಗತ್ತಿಗೆ ದೇವರು ನೀಡಿದ ಅದ್ಭುತ್ ಕಾಣಿಕೆ ಎಂದರೆ ಮಹಿಳೆ. ಒಂದು ದ ಜವಾಬ್ದಾರಿ ಹೊತ್ತು, ಕುಟುಂಬದಲ್ಲಿ ಖುಷಿ ಹೆಚ್ಚಿಸುತ್ತಾಳೆ. ಯಾವುದೇ ಒತ್ತಡದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ ಮಹಿಳೆ ಹೊಂದಿದ್ದಾಳೆ. ಇಂದಿನ ಮಹಿಳೆಯರು ಶೈಕ್ಷಣಿಕವಾಗಿ ಮಂಚೂಣಿಯಲ್ಲಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರಗಳಲ್ಲಿನ ಜ್ಞಾನವನ್ನು ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಬದುಕಿನಲ್ಲಿ ಯಶಸ್ವಿಯಾಗಲು ಸಲಹೆ ನೀಡಿದರು.
ಮಧ್ಯಪ್ರದೇಶದ ಗೌರ್ಮೆಂಚ್ ಆದರ್ಶ ಕಾಲೇಜ ಹಾರ್ಡಾದ ಸಹಾಯಕ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಠಿ ಮಾತನಾಡಿ, ಎಲ್ಲರೂ ಎಲ್ಲೆಡೆ ಲಿಂಗಸಮಾನತೆ ಕುರಿತು ಮಾತನಾಡುತ್ತಾರೆ. ಆದರೆ, ವಾಸ್ತವವೇ ಬೇರೆ ಇರುತ್ತದೆ. ನಮ್ಮ ಮನಸ್ಥಿತಿ ಬದಲಿಸಿಕೊಂಡು ಸ್ವಾವಲಂಬಿ ಹಾಗೂ ಸ್ವತಂತ್ರವಾಗಿ ಬದುಕಲು ಕಲಿಯಬೇಕು ಎಂದರು.
21ನೇ ಶತಮಾನದಲ್ಲಿ ಮಹಿಳೆಯರಿಗೆ ನಾವಿನ್ಯತೆ ಮತ್ತು ತಂತ್ರಜ್ಞಾನದ ಸಾಕ್ಷರತೆ ಅತ್ಯಗತ್ಯವಾಗಿದೆ. ಆದರೆ, ಶೇ.77 ರಷ್ಟುಮಾತ್ರ ತಂತ್ರಜ್ಞಾನ ಸಾಕ್ಷರತೆಯನ್ನು ಹೊಂದಿದ್ದು, ತಂತ್ರಜ್ಞಾನದ ಸೌಲಭ್ಯಗಳ ಅಭಾವ ಆನಲೈನ್‌ದ ಅಭದ್ರತೆ ಮುಂತಾದವುಗಳು ಇದಕ್ಕೆ ಕಾರಣವಾಗಿದೆ. ತಂತ್ರಜ್ಞಾನವನ್ನು ಕಲಿಯುವ ಹಲವಾರು ವಿಧಾನಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದರು.
ಆಯುರ್ವೇದ ತಜ್ಞ ವೈದ್ಯರಾದ ಡಾ.ಜ್ಯೋತಿ ಎಸ್.ಬಕ್ಕಣವರ ಮಾತನಾಡಿ, ದೈನಂದಿನ ಒತ್ತಡದ ಬದುಕಿನಲ್ಲಿ ಮಹಿಳೆಯರು ಆರೋಗ್ಯವನ್ನು ನಿರ್ಲಕ್ಷಿಸಬಾರದು. ಸದೃಢವಾದ ಕುಟುಂಬವನ್ನು ನಡೆಸಬೇಕಾದ ಮಹಿಳೆ ಸದೃಢವಾದ ಶರೀರ ಮತ್ತು ಮಾನಸಿಕ ನೆಮ್ಮದಿ ಹೊಂದಿರಬೇಕು ಎಂದು ಆರೋಗ್ಯಕರ ಸಲಹೆಗಳನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಮಾತನಾಡಿ, ಈ ವರ್ಷದ ಮಹಿಳಾ ದಿನಾಚರಣೆಯ ಘೋಷವಾಕ್ಯ ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರೇಷ್ಮಾ ಇನಾಮದಾರ್ ಮತ್ತು ಉಪಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ, ಕಾಲೇಜು ಒಕ್ಕೂಟದ ಅಧ್ಯಕ್ಷೆ ಡಾ.ಭಾರತಿ ಗದ್ದಿ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರು. ಸಂಯೋಜಕಿ ಎಸ್.ಕೆ.ಸಜ್ಜನ ಸ್ವಾಗತಿಸಿದರು. ಕು.ಆರಾಧನಾ ಸೋಮಯ್ಯ ಹಾಗೂ ಕು.ಸಿಂಧು ಸವದತ್ತಿ ನಿರೂಪಿಸಿದರು. ಕು.ವೈಷ್ಣವಿ ನಾಯಕ ವಂದಿಸಿದರು.