ಡೈವೋರ್ಸ್ ಬೇಕೆಂದು ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಆಕೆಯ ಪತಿ ಹಾಗೂ ಅತ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೇಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, 9 ತಿಂಗಳ ಹಿಂದೆ ಮೃತ ಹರೀಶ್ ಅವರ ವಿವಾಹವಾಗಿತ್ತು.
ಕೊಡಗು(ನ.18): ಡೈವೋರ್ಸ್ ಬೇಕೆಂದು ಪತ್ನಿ ಕೋರ್ಟ್ ಮೆಟ್ಟಿಲೇರಿದ್ದು, ಆಕೆಯ ಪತಿ ಹಾಗೂ ಅತ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೇಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, 9 ತಿಂಗಳ ಹಿಂದೆ ಮೃತ ಹರೀಶ್ ಅವರ ವಿವಾಹವಾಗಿತ್ತು.
ಆಲೇಕಟ್ಟೆ ಗ್ರಾಮದ ತಂಗಮಣಿ(55) ಪುತ್ರ ಹರೀಶ್ (26) ನೇಣಿಗೆ ಶರಣಾದವರು. 9 ತಿಂಗಳ ಹಿಂದೆ ವಿವಾಹವಾಗಿದ್ದ ಹರೀಶ್ ಅವರ ಪತ್ನಿ ವರಿಗೆ ಡೈವೋರ್ಸ್ ನೀಡಲು ಮುಂದಾಗಿದ್ದರು. ಹರೀಶ್ ಜೊತೆ ಕೇವಲ 15 ದಿನವಷ್ಟೇ ಸಂಸಾರ ಮಾಡಿ ಪತ್ನಿ ತವರು ಸೇರಿಕೊಂಡಿದ್ದಳು.
ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!
ಹರೀಶ್ ಪತ್ನಿ ಇತ್ತೀಚೆಗಷ್ಟೇ ವಿಚ್ಚೇದನ ನೀಡುವಂತೆ ಕೆಳಿ ಕೋರ್ಟ್ ಮೊರೆ ಹೋಗಿದ್ದಳು. ಸೊಸೆ ಕೋರ್ಟ್ ಮೊರೆ ಹೋಗಿದ್ದಕ್ಕೆ ಮನನೊಂದಿದ್ದ ಹರೀಶ್ ತಾಯಿ ಹಾಗೂ ಹರೀಶ್ ನೇಣಿಗೆ ಶರಣಾಗಿದ್ದಾರೆ.
ನಿನ್ನೆ ತಂಗಮಣಿ ನೇಣಿಗೆ ಶರಣಾಗಿದ್ದು, ಅದನ್ನು ನೋಡಿ ಹರೀಶ್ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರೀಶ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ್ದದರು. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾವಿನ ಮನೆಮುಂದೆ ಮಸೀದಿ ಮೈಕ್ ಸೌಂಡ್ ಆಫ್, ಸೌಹಾರ್ದತೆ ಮೆರೆದ ಜನ