* ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದ ಘಟನೆ
* ಆಸ್ಪತ್ರೆಗೆ ಕೊರೋನಾ ಆವರಿಸಿಬಿಡುತ್ತೆ ಎಂಬ ಭಯದಲ್ಲಿದ್ದ ಗರ್ಭಿಣಿ
* ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
ವಿಜಯನಗರ(ಮೇ.22): ಮಹಾಮಾರಿ ಕೊರೋನಾ ಭಯದಲ್ಲಿದ್ದ ಗರ್ಭಿಣಿಗೆ 108 ಆ್ಯಂಬುಲೆನ್ಸ್ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿಯೇ ಸರಳ ಹೆರಿಗೆ ಮಾಡಿಸಿದ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ.
undefined
ಆಸ್ಪತ್ರೆಗೆ ಹೋದರೆ ಕೊರೋನಾ ಆವರಿಸಿಬಿಡುತ್ತೆ ಎಂದು ಗರ್ಭಿಣಿ ಚೈತ್ರಾ ಬಸವರಾಜ ಅವರು ಬಹಳ ಭಯದಲ್ಲಿದ್ದರು. ಇವರ ಭಯವನ್ನ ಹೋಗಲಾಡಿಸಿ ಆಸ್ಪತ್ರೆಗೂ ಕರೆದೊಯ್ಯದೆ 108 ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿಯೇ ಸರಳ ಮಾಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಂದೇ ಗ್ರಾಮದ 8 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆ, ಪೋಷಕರಲ್ಲಿ ಆತಂಕ
ಗರ್ಭಿಣಿ ಚೈತ್ರಾ ಬಸವರಾಜ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಹೊಸಪೇಟೆ ತಾಲೂಕಿನ ವೆಂಕಟಾಪುರದಿಂದ ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಕರೆದೊಯ್ಯಯಲಾಗುತ್ತಿತ್ತು. ದಾರಿ ಮಧ್ಯೆ ಗರ್ಭಿಣಿ ಚೈತ್ರಾ ಬಸವರಾಜ ಅವರು ಆಸ್ಪತ್ರೆಗೆ ಕೊರೋನಾ ಆವರಿಸಿಬಿಡುತ್ತೆ ಎಂಬ ಭಯದಲ್ಲಿದ್ದರು. ಇದನ್ನರಿತ 108 ಸಿಬ್ಬಂದಿ ಎ.ಎನ್.ಎಮ್. ಅನಿಲ್ ಅವರು ಆ್ಯಂಬುಲೆನ್ಸ್‌ನಲ್ಲಿಯೇ ಸುರಳ ಹೆರಿಗೆ ಮಾಡಿಸಿದ್ದಾರೆ. ಇದೀಗ ತಾಯಿ ಮತ್ತು ಗಂಡು ಮಗು ಇಬ್ಬರು ಸುರಕ್ಷಿತವಾಗಿದ್ದಾರೆ.
ಸರಳ ಹೆರಿಗೆ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯವನ್ನ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.