ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಗರ್ಭಿಣಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು (ಜೂ.20): ಆಸ್ಪತ್ರೆಗೆ ಕರೆ ತರುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಗರ್ಭಿಣಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ನಾಗರವಳ್ಳಿ ಸಮೀಪ ನಡೆದಿದೆ. ಬಸವನ ಕೋಡಿಯ 22 ವರ್ಷದ ಗಾಯಿತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಚಿಕ್ಕಮಗಳೂರಿನ 108 ಆ್ಯಂಬುಲೆನ್ಸ್ ಗೆ ಕರೆ ಬಂದಿದೆ. ಕೂಡಲೇ 108 ಅಂಬುಲೆನ್ಸ್ ಚಾಲಕ ಸ್ಥಳಕ್ಕೆ ಭೇಟಿ ನೀಡಿ ಗಾಯಿತ್ರಿ ಅವರನ್ನು ಬಸವನ ಕೋಡಿಯಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರುತ್ತಿರುವಾಗ ದಾರಿ ಮಧ್ಯೆ ನಾಗರಹಳ್ಳಿ ಹತ್ತಿರ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ 108 ಆ್ಯಂಬುಲೆನ್ಸ್ ನಲ್ಲಿದ್ದ ಶುಶ್ರೂಷಕಿ ದೊಡ್ಡಮ್ಮ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ . ಜೊತೆಯಲ್ಲಿದ್ದ ಸಿಬ್ಬಂದಿ ವಸಂತ್ ಸಹಾಯ ಮಾಡಿದ್ದಾರೆ. ಬಳಿಕ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದೆ.
ಮಗು ಆಗೋಕೆ ಅಂಡಾಣು, ಪುರುಷರ ವೀರ್ಯ ಬೇಕಿಲ್ಲ, ಸಂಶೋಧಕರ ತಂಡದಿಂದ ಅಚ್ಚರಿಯ ಮಾಹಿತಿ
undefined
ಆ್ಯಂಬುಲೆನ್ಸ್‌ನಲ್ಲೇ ಮಗು ಜನನ
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿಯಲ್ಲಿ ಮಹಿಳೆಯೊಬ್ಬರು ಜೂ.17ರಂದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಆ್ಯಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬೈಲುವದ್ದಿಗೇರಿ ಗ್ರಾಮದ ದೀಪಾ (24) ಎಂಬ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಬೈಲುವದ್ದಿಗೇರಿ ಗ್ರಾಮದಿಂದ ಹೊಸಪೇಟೆ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಹೆರಿಗೆಯಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಕರ್ತವ್ಯ ಪ್ರಜ್ಞೆ ಮೆರೆದ ಆ್ಯಂಬ್ಯುಲೆನ್ಸ್ ಚಾಲಕ ಹಾಗೂ ಸಿಬ್ಬಂದಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ ಹಾಗೂ ಮಗುವನ್ನು ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
4 ಕೈಗಳು ನಾಲ್ಕು ಕಾಲು ಎರಡು ಹೃದಯಗಳಿದ್ದ ಅಪರೂಪದ ಹೆಣ್ಣು ಮಗು ಜನನ
ಯುವತಿ ಗರ್ಭವತಿ: ತಂದೆಯಿಂದ ಪ್ರಕರಣ ದಾಖಲು
ಇಳಕಲ್ಲ: ತನ್ನ ಮಗಳನ್ನು ಯುವಕನೊರ್ವ ಪ್ರೀತಿಯ ನಾಟಕವಾಗಿ ಅವಳನ್ನು ಗರ್ಭವತಿಯನ್ನಾಗಿಸಿ ಮೋಸ ಮಾಡಿದ್ದಾನೆ ಎಂದು ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೂ.16ರಂದು ಯುವತಿಯ ತಂದೆ ದೂರು ದಾಖಲಿಸಿದ್ದಾನೆ. ತಾಲೂಕಿನ ನಂದವಾಡಗಿ ಗ್ರಾಮದ ಮೌನೇಶ ನಾಗಪ್ಪ ಕಟಂಬ್ಲಿ(20) ಎಂಬ ವ್ಯಕ್ತಿ ತನ್ನ ಮಗಳನ್ನು ಪ್ರೀತಿಸಿ ಗರ್ಭಿಣಿ ಮಾಡಿ ಕೈಕೊಟ್ಟಿದ್ದಾನೆ ಎಂದು ಯುವತಿಯ ತಂದೆ ಆರೋಪಿಸಿದ್ದಾನೆ. ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ. ದೂರು ದಾಖಲಿಸಿಕೊಂಡ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಎಸ್.ಬಿ.ಪಾಟೀಲ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.