ಕಲಬುರಗಿ (ಜು.07): ಈಗಾಗಲೇ ಲಸಿಕೆ ಹಾಕುವ ಬಸ್ ವಿನ್ಯಾಸಗೊಳಿಸಿ ಕೊರೋನಾ ವಿರುದ್ಧದ ಯುದ್ಧದಲ್ಲಿ ತನ್ನದೇ ಆದಂತಹ ಸಹಯೋಗ ನೀಡಿ ಯಶ ಕಂಡಿರುವ ಕಲಬುರಗಿಯಲ್ಲಿರೋ ಈಶಾನ್ಯ ಸಾರಿಗೆ ಸಂಸ್ಥೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗುಜರಿಗೆ ಹೋಗಬೇಕಿದ್ದ ಬಸ್ಸನ್ನೇ ಮರು ವಿನ್ಯಾಸಗೊಳಿಸಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಶೌಚಾಲಯ, ನ್ಯಾಪಕೀನ್ ಸವಲತ್ತು, ಹಾಲುಣಿಸುವ ಸವಲತ್ತಿನೊಂದಿಗೆ 'ಮಹಿಳಾ ಸ್ನೇಹಿ' ಬಸ್ ಸಿದ್ಧಪಡಿಸಿ ಗಮನ ಸೆಳೆದಿದೆ.
4 ಸಾವಿರ KSRTC ಬಸ್‌ಗಳು ರಸ್ತೆಗೆ, ಪ್ರಯಾಣಿಕರಿಗೆ ಷರತ್ತುಗಳು ಅನ್ವಯ..! ..
ಒಮ್ಮೆ ಮಹಿಳಾ ಪ್ರಯಾಣಿಕರು ಈ ಬಸ್ ಹತ್ತಿದರೆ ಸಾಕು, ಅಲ್ಲಿ ಅವರು ಶೌಚಾಲಯ ಬಳಸಬಹುದು, ಒಳಗಡೆಯೇ ಉಚಿತವಾಗಿ ನ್ಯಾಪಕೀನ್ ವ್ಯವಸ್ಥೆಯನ್ನೂ ಮಾಡಲಾಗಿದ್ದು ತಿಂಗಳ ಕೋರ್ಸ್ ತೊಂದರೆ ಇರುವವರು ನ್ಯಾಪಕೀನ್ ಉಚಿತವಾಗಿ ಬಳಸಬಹುದು. ಅಷ್ಟೇ ಅಲ್ಲ, ಹಾಲುಣಿಸುವ ತಾಯಂದಿರು ಇದ್ದರೆ ಅವರು ನಿರುಮ್ಮಳರಾಗಿ ಈ ಬಸ್ ಹತ್ತಿ ತಮ್ಮ ಕಂದಮ್ಮಗಳಿಗೆ ಹಾಯಾಗಿ ಮಲಗಿಯೋ, ಕುಳಿತುಕೊಂಡೋ ತಮಗನುಕೂಲವಾಗುವಂತೆ ಹಾಲುಣಿಸಬಹುದು.
KSRTCಯಲ್ಲಿ ಬರುವ ಪ್ರಯಾಣಿಕರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ ...
ಮಹಿಳಾ ಪ್ರಯಾಣಿಕರ ದಟ್ಟಣೆ ಇರುವ ಕಲಬುರಗಿ ಮಹಾ ನಗರದ ಸೂಪರ್ ಮಾರ್ಕೆಟ್ ಹಾಗೂ ಗಂಜ್, ಹುಮ್ನಾಬಾದ್ ಬೇಸ್ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ಗ್ರಾಮೀಣ ಬಸ್ ನಿಲ್ದಾಣಗಳಲ್ಲೆಲ್ಲಾ ಈ ವಿಶೇಷ ಬಸ್ ಇಡೀ ದಿನ ಸಂಚರಿಸುತ್ತದೆ.
ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಅಸಮತೋಲನ, ಮುಟ್ಟಿನ ಬದಲಾವಣೆಗೆ ಪರಿಹಾರವೇನು..?
ಬೆAಗಳೂರಿನ ಸೆಲ್ಕೋ ಸೌರಶಕ್ತಿ ಕಂಪನಿಯ ಸಹಯೋಗದಲ್ಲಿ ಇಲ್ಲಿನ ಈಶಾನ್ಯ ಸಾರಿಗೆ ಕಾರ್ಯಾಗಾರದಲ್ಲಿ ಈ ಬಸ್ ವಿನ್ಯಾಸಗೊಂಡಿದೆ. ಗುಜರಿಗೆ ಹೋಗಬೇಕಿದ್ದ ಈ ಬಸ್ಸನ್ನು ಸಾರಿಗೆ ಸಂಸ್ಥೆಯ ಕೌಶಲ್ಯ ಸಿಬ್ಬಂದಿ ಹೊಸ ರೂಪ ನೀಡಿ ಮಹಿಳಾ ಸಂಚಾರಿ ಶೌಚಾಲಯ ಹಾಗೂ ಹಾಲುಣಿಸುವ ಬಸ್ಸನ್ನಾಗಿಸಿ ತಮ್ಮ ಜಾಣತನ ಮೆರೆದಿದ್ದಾರೆ. ಬಸ್ಸಿನಲ್ಲಿ ಸೌರಶಕ್ತಿ ಬಳಸಲಾಗುತ್ತಿರುವುದು ವಿಶೇಷ. ಬಸ್ಸಿನ ಟಾಪ್ ಪೂರ್ತಿ ಸೌರಫಲಕಗಳಿಂದಲೇ ಆವೃತ್ತವಾಗಿದೆ.