ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ

By Kannadaprabha News  |  First Published Dec 15, 2020, 7:17 AM IST

ಬ್ಯಾಡಗಿ ಮೆಣಸಿನಕಾಯಿ ದಾಖಲೆ ದರಕ್ಕೆ ಮಾರಾಟವಾಗಿದೆ. ಇದರಿಂದ ರೈತರ ಜೇಬು ತುಂಬಿ ಬಂಪರ್ ಆದಾಯ ದೊರಕಿದೆ. 


ಬ್ಯಾಡಗಿ (ಡಿ.15): ಕಳೆದ ವರ್ಷ 33 ಸಾವಿರಕ್ಕೆ ಮಾರಾಟವಾಗು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಬ್ಯಾಡಗಿ ಮೆಣಸಿನಕಾಯಿ  ಇದೀಗ 35 ಸಾವಿರಕ್ಕೂ ಅಧಿಕ ದರಕ್ಕೆ ಮಾರಾಟವಾಗುತ್ತಿದೆ. 

ಈ ಮೂಲಕ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟು ಮಾಡುತ್ತಿದೆ. 

Tap to resize

Latest Videos

ಕಳೆದ ವರ್ಷ ಇಲ್ಲಿ ಪ್ರತೀ ಕ್ಷಿಂಟಾಲ್‌ಗೆ 33,259 ರು.ಗೆ ಮಾರಾಟವಾಗಿತ್ತು. ರೊಣ ತಾಲೂಕಿನ ಸವಡಿ  ಗ್ರಾಮದ ರೈತ ಬಸವರೆಡ್ಡೆಪ್ಪ  ಷಣ್ಮುಕಪ್ಪ ಭೂಸರೆಡ್ಡಿ ಇವರ ಜಮೀನಿನಲ್ಲಿ ಬೆಳೆದ 1 ಕ್ವಿಂಟಾಲ್ ಮೆಣಸಿನಕಾಯಿಯನ್ನು ಅಮರಜ್ಯೋತಿ ಟ್ರೇಡಿಂಗ್ ಕಂಪನಿ ದಾಖಲೆ ದರಕ್ಕೆ ಖರೀದಿಸಿದೆ. 

ಖಾರ ಖಾರ ಮೆಣಸಿನಕಾಯಿ ಇಷ್ಟಪಡೋರಿಗೆ ಇಲ್ಲಿದೆ ಗುಡ್ ನ್ಯೂಸ್...!

ಕೆಲ ದಿನಗಳ ಹಿಂದೆ ಈರುಳ್ಳಿ ದರವೂ ಕೂಡ ಗ್ರಾಹಕರ ಕಣ್ಣಲ್ಲಿ ನೀರು ತರಿಸುವ ಮಟ್ಟಿಗೆ ಏರಿಕೆಯಾಗಿತ್ತು. 

click me!