ಡಿಕೆಸು ಕ್ಷೇತ್ರದಲ್ಲಿ ಆಪರೇಷನ್ : ಬಿಗ್ ಶಾಕ್

Kannadaprabha News   | Asianet News
Published : Dec 15, 2020, 07:24 AM IST
ಡಿಕೆಸು ಕ್ಷೇತ್ರದಲ್ಲಿ ಆಪರೇಷನ್ : ಬಿಗ್ ಶಾಕ್

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಬಿರುಸುಗೊಂಡಿದೆ. ಗ್ರಾಮ ಪಂಚಾಯತ್ ಚುನಾವಣೆ ಗೆ ತಯಾರಿಯೂ ಜೋರಾಗಿದೆ. ಇದರ ಬೆನ್ನಲ್ಲೇ ಪಕ್ಷಾಂತರವೂ ಹೆಚ್ಚಾಗಿ ನಡೆಯುತ್ತಿದೆ. 

ಕೆ.ಆರ್‌.ಪುರ (ಡಿ.15): ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮಂಡಲದ ಬೈರತಿ, ಕಣ್ಣೂರು, ದೊಡ್ಡಗುಬ್ಬಿ, ಬಂಡೆಹೊಸೂರು, ಬಿದರಹಳ್ಳಿ, ಬಿಳೆಶೀವಾಲಯ, ಕೋನದಾಸಪುರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಅನ್ಯಪಕ್ಷದ ಮುಖಂಡರು ಸಚಿವ ಬಿ.ಎ.ಬಸವರಾಜ ಹಾಗೂ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ನಂತರ ಮಾತನಾಡಿದ ಸಚಿವ ಬಸವರಾಜು, ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯ ಆಡಳಿತ ವೈಖರಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಕ್ಷೇತ್ರದ ಜನತೆಗೆ ನೀಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅನ್ಯ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿರುವುದು ಖುಷಿಯ ವಿಚಾರವಾಗಿದೆ ಎಂದರು.

ಸಿಂಧೂನೂರು: ಗ್ರಾಮ ಎಲೆಕ್ಷನ್‌ನಲ್ಲಿ ಸ್ಥಾನ ಹರಾಜು, 9 ಜನರ ವಿರುದ್ಧ ಕೇಸ್ ಬುಕ್

ಶಾಸಕ ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ್ರ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಟರಾಜ್‌, ರಾಮಾಂಜಿನೇಯ, ಚಿದಾನಂದ, ಕಣ್ಣೂರು ಅಶೋಕ್‌, ರಮೇಶ್‌, ಕೆಂಪೇಗೌಡ ಮತ್ತಿತರರು ಇದ್ದರು.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!