ನವಲಗುಂದ: ಲಾರಿ-ಟಾಟಾ ಏಸ್‌ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

Kannadaprabha News   | Asianet News
Published : Jun 27, 2020, 07:22 AM IST
ನವಲಗುಂದ: ಲಾರಿ-ಟಾಟಾ ಏಸ್‌ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ದುರ್ಮರಣ

ಸಾರಾಂಶ

ಅಪಘಾತ: ಇಬ್ಬರು ಸಾವು| ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ನವಲಗುಂದ ಮಧ್ಯದ ಕಾಲವಾಡ ಕ್ರಾಸ್‌ ಬಳಿ ನಡೆದ ಘಟನೆ| ಕಾಲವಾಡ ಕ್ರಾಸ್‌ ಬಳಿ ನರಗುಂದದಿಂದ ಟಾಟಾ ಏಸ್‌ ವಾಹನವು ಹುಬ್ಬಳ್ಳಿಯತ್ತ ಹೊರಟಿತ್ತು ಹಾಗೂ ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಲಾರಿ ಆಗಮಿಸುತ್ತಿದ್ದ ವೇಳೆ ನಡೆದ ಅಪಘಾತ|

ನವಲಗುಂದ(ಜೂ. 27): ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ-ನವಲಗುಂದ ಮಧ್ಯದ ಕಾಲವಾಡ ಕ್ರಾಸ್‌ ಬಳಿ ಲಾರಿ ಮತ್ತು ಟಾಟಾ ಏಸ್‌ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ಮೂಲದ ಚಾಲಕ ಮಹಾದೇವ ಚಂದ್ರಕಾಂತ ಅಮಾಸಿ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನರಗುಂದ ಮೂಲದ ಗಣಪತಿ ಫಕ್ಕೀರಪ್ಪ ಕದಂ (26) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಮೂಲದ ಸಂಜೀವ ಚಂದ್ರಕಾಂತ ಕೊರವರ (26) ಗಂಭೀರ ಸ್ಥಿತಿಯಲ್ಲಿದ್ದಾರೆ.

ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

ತಾಲೂಕಿನ ಕಾಲವಾಡ ಕ್ರಾಸ್‌ ಬಳಿ ನರಗುಂದದಿಂದ ಟಾಟಾ ಏಸ್‌ ವಾಹನವು ಹುಬ್ಬಳ್ಳಿಯತ್ತ ಹೊರಟಿತ್ತು ಹಾಗೂ ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಲಾರಿ ಆಗಮಿಸುತ್ತಿತ್ತು. ಇವೆರಡರ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹುಬ್ಬಳ್ಳಿ ಮೂಲದ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟರೆ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ಮುಂದುವರೆದಿದೆ.
 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?