ಪ್ರಿಯಕರನ ಜೊತೆಗೆ ಪತ್ತೆಯಾದ್ಲು ನಾಪತ್ತೆಯಾಗಿದ್ದ ಆ ಮಹಿಳೆ

Kannadaprabha News   | Asianet News
Published : Nov 15, 2020, 04:28 PM IST
ಪ್ರಿಯಕರನ ಜೊತೆಗೆ  ಪತ್ತೆಯಾದ್ಲು ನಾಪತ್ತೆಯಾಗಿದ್ದ ಆ ಮಹಿಳೆ

ಸಾರಾಂಶ

 ಹುಡುಕಲು ಹೋಗಿದ್ದ ಪೊಲೀಸರಿಗೆ ವಿವಾಹಿತ ಪುರುಷನ ಮನೆಯಲ್ಲಿಯೇ ಮಹಿಳೆ ಪತ್ತೆಯಾದಳು. ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯ್ತು ಪೊಲೀಸ್ ಟೀಂ

ಉಳ್ಳಾಲ (ನ.15): ಒಂದೂವರೆ ವರ್ಷದ ಹಿಂದೆ ಹಿಂದೂ ಸಂಗಟನೆಗಳು ಫಜೀರು ಗೋ ವನಿತಾ ಆಶ್ರಮಕ್ಕೆ ಸೇರಿಸಿದ್ದ ವಿಧವೆ ಹಳೆಯ ಪ್ರಿಯಕರನ ಜತೆಗೆ ಉಳ್ಳಾಲದಲ್ಲಿ ಪತ್ತೆಯಾಗಿದ್ದಾಳೆ.

ಅಡ್ಯಾರು ಪದವಿನ್ಲಿದ್ದ ವಿಧವೆ ಮಹಿಳೆಗೆ ಎರಡು ವರ್ಷಗಳ ಹಿಂದೆ ಉಳ್ಳಾಲದ ವ್ಯಕ್ತಿಯೋರ್ವನ ಜತೆಗೆ ಪ್ರೇಮವಿತ್ತು. 

ಒಂದೂವರೆ ವರ್ಷದ ಹಿಂದೆ  ಜತೆಯಾಗಿ ವಾಮಂಜೂರಿನಲ್ಲಿದ್ದ ಪುರಷನನ್ನು ಮಹಿಳೆಯಿಂದ  ಹಿಂದೂ ಸಂಘಟನಕರು ಬೇರೆ ಮಾಡಿಸಿದ್ದರು. ಬಳಿಕ ಆಶ್ರಮಕ್ಕೆ ಕಳಿಸಿದ್ದರು. 

ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ? ..

ವಿಧವೆ ಮಹಿಳೆ ಆಶ್ರಮದಲ್ಲಿದ್ದು ಮತ್ತೆ ಆತನ ಸಂಪರ್ಕದಲ್ಲಿದ್ದಳು. ನ.2 ರಂದು ಮಹಿಳೆ  ಮಹಿಳೆ ಆಶ್ರಮದಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಶ್ರಮ ಸಮಿತಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. 

ವಿಚಾರಣ ನಡೆಸಿದ ಕೊಣಾಜೆ ಠಾಣೆ ಪೊಲೀಸರು  ಮಹಿಳೆಯನ್ನು ಮತ್ತೆ ಪುರುಷನೊಂದಿಗೆ ಪತ್ತೆ ಹಚ್ಚಿದ್ದಾರೆ. ಇಬ್ಬರು ವಯಸ್ಕರಾಗಿದ್ದು, ಸ್ವ ಇಚ್ಛೆಯಿಂದ ತೆರಳಿದ್ದು ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. 

PREV
click me!

Recommended Stories

ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!
Bengaluru: ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ