ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮಹಿಳೆ| ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದ ಘಟನೆ| ನದಿ ದಡದಲ್ಲಿ ಕಟ್ಟಿಗೆ ತರಲು ಹೋದಾಗ ಏಕಾಏಕಿ ಬಂದ ನೀರಿನ ರಭಸಕ್ಕೆ ಕೊಚ್ಚಿ ಹೋದ ಮಹಿಳೆ| ಈ ಸಂಬಂಧ ಸಿರಗುಪ್ಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪತಿ|
ಸಿರಗುಪ್ಪ(ಆ.20): ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ(32) ಎಂಬ ಮಹಿಳೆಯೇ ನದಿಯಲ್ಲಿ ಕೊಚ್ಚಿ ಹೋದ ಮಹಿಳೆಯಾಗಿದ್ದಾರೆ.
ಕಳೆದೆರಡು ದಿನಗಳಿಂದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಂಗಳವಾರ ಸಂಜೆ ಗ್ರಾಮದ ಮಹಿಳೆಯ ಜತೆಗೆ ನದಿ ದಡದಲ್ಲಿ ಕಟ್ಟಿಗೆ ತರಲು ಹೋದಾಗ ಏಕಾಏಕಿ ಬಂದ ನೀರಿನ ರಭಸಕ್ಕೆ ಲಕ್ಷ್ಮೀ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹೂವಿನಹಡಗಲಿ: ಸ್ಮಶಾನ ಮುಳುಗಡೆ, ಅಂತ್ಯಕ್ರಿಯೆಗೆ ಜನ ಹೈರಾಣು..!
ಈ ಸಂಬಂಧ ನೀರಿನಲ್ಲಿ ಕೊಚ್ಚಿ ಹೋದ ಲಕ್ಷ್ಮೀ ಗಂಡ ಮಾರೆಪ್ಪ ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾನೆ. ಈ ಬಗ್ಗೆ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.