ರಸ್ತೆಯಲ್ಲಿ ಬಿದ್ದು ಮೂರು-ನಾಲ್ಕು ಗಂಟೆಯಾದರೂ ಮಹಿಳೆ ಬಳಿಗೆ ಹೋಗದ ಜನ| ವೈದ್ಯರು ಶವ ಪರೀಕ್ಷೆ ನಡೆಸಿ ಕೊರೋನಾ ಇಲ್ಲವೆಂದು ದೃಢಪಡಿಸಿದ ಬಳಿಕ ಶವ ಸ್ಥಳಾಂತರ| ಕೋಲಾ ಜಿಲ್ಲೆಯ ಮುಳಬಾಗಿಲು ತಾಲೂಕು ಸಂಗೊಂಡಹಳ್ಳಿ ಗ್ರಾಮದಲ್ಲಿ ನಡೆದ ಘಟನೆ|
ಕೋಲಾರ(ಏ.30): ತಲೆ ಸುತ್ತು ಬಂದು ರಸ್ತೆಯಲ್ಲಿ ಕುಸಿದು ಬಿದ್ದ ಮಹಿಳೆ ಒದ್ದಾಡುತ್ತಿದ್ದರೂ ಕೊರೋನಾ ಎಂಬ ಭಯದಲ್ಲಿ ಆಕೆ ಹತ್ತಿರಕ್ಕೆ ಹೋಗದೆ ಇದ್ದುದ್ದರಿಂದ ಮಹಿಳೆ ರಸ್ತೆ ಮಧ್ಯದಲ್ಲೇ ನರಳಿ ಸತ್ತಿದ್ದಾಳೆ.
ಈ ಘಟನೆ ಮುಳಬಾಗಿಲು ತಾಲೂಕು ಸಂಗೊಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೆ ಗ್ರಾಮದ 48 ವರ್ಷದ ನೀಲಾವತಿ ಮೃತಪಟ್ಟಮಹಿಳೆಯಾಗಿದ್ದಾಳೆ. ತಲೆ ಸುತ್ತ ಬಂದು ಮಧ್ಯಾಹ್ನದ ಬಿಸಿಲಿಗೆ ಕುಸಿದು ಬಿದ್ದರೂ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಭಯದಲ್ಲಿ ಜನ ಹತ್ತಿರಕ್ಕೆ ಹೋಗದೆ ಆಕೆಯನ್ನ ರಸ್ತೆಯಲ್ಲೆ ಬಿಟ್ಟಿದ್ದರು. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೋವಿಡ್‌ಗೆ ಒಂದೇ ಗಂಟೆಯ ಅವಧಿಯಲ್ಲಿ ಪತಿ, ಪತ್ನಿ ಸಾವು
ಮಹಿಳೆ ರಸ್ತೆಯಲ್ಲಿ ಬಿದ್ದು ಮೂರು-ನಾಲ್ಕು ಗಂಟೆಯಾದರೂ ಮಹಿಳೆ ಬಳಿಗೆ ಯಾರೊಬ್ಬರು ಹೋಗದ ಭಯದಲ್ಲೇ ಕಾಲ ದೂಡಿದ್ದಾರೆ ಮೃತಪಟ್ಟ ಆಕೆಯನ್ನು ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಗೆ ಸಾಗಿಸಲಾಯಿತು. ವೈದ್ಯರು ಶವ ಪರೀಕ್ಷೆ ನಡೆಸಿ ಕೊರೋನಾ ಇಲ್ಲವೆಂದು ದೃಢಪಡಿಸಿದ ಬಳಿಕ ಶವ ಸ್ಥಳಾಂತರ ಮಾಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶಿಲ್ದಾರ್ ರಾಜಶೇಖರ್ ಪರಿಶೀಲನೆ ನಡೆಸಿದರು. ಸಂಬಂಧಿಕರು ಶವವನ್ನು ತೆಗೆದುಕೊಂಡು ಹೋಗಿ ಸಂಗೊಂಡಹಳ್ಳಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಿ ಮುಗಿಸಿದ್ದಾರೆ.