'ಪ್ರತಿ ಕುಟುಂಬಕ್ಕೆ ತಲಾ 25 ಸಾವಿರ ವಿಶೇಷ ಪ್ಯಾಕೇಜ್‌ ನೀಡಿ'

Kannadaprabha News   | Asianet News
Published : Apr 30, 2021, 12:18 PM ISTUpdated : Apr 30, 2021, 01:38 PM IST
'ಪ್ರತಿ ಕುಟುಂಬಕ್ಕೆ ತಲಾ  25 ಸಾವಿರ ವಿಶೇಷ ಪ್ಯಾಕೇಜ್‌ ನೀಡಿ'

ಸಾರಾಂಶ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು ಈ ನಿಟ್ಟಿನಲ್ಲಿ ಜನರು ಜೀವನ ಸಾಗಿಸುವುದು ದುಸ್ಥರವಾಗಿದೆ. ಇದರಿಂದ ಪ್ರತೀ ಕುಟುಂಬಕ್ಕೆ 25 ಸಾವಿರ ನೀಡಬೇಕು ಎಂದು ಡಾ. ಎಚ್.ಡಿ ರಂಗನಾಥ್ ಹೇಳಿದರು. 

ಕುಣಿಗಲ್‌ (ಏ.30):  ಲಾಕ್‌ಡೌನ್‌ ಜಾರಿಯಿಂದ ನಿತ್ಯ ದುಡಿದು ತಿನ್ನುವ ಬಡವರ ಬದುಕು ಸಾಗಿಸಲು ದಾರಿ ಕಾಣದೆ ಕಂಗಾಲಾಗಿದ್ದಾರೆ. ಹಾಗಾಗಿ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ  25 ಸಾವಿರ ರು. ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಡಾ.ಎಚ್‌.ಡಿ.ರಂಗನಾಥ್‌ ಆಗ್ರಹಿಸಿದರು.

 ಗುರುವಾರ ಈ ಬಗ್ಗೆ ಕುಣಿಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಕೊರೋನಾ ವೈರಸ್‌ ನಿಯಂತ್ರಿಸಲು ಸರ್ಕಾರ ಏ 27ರಿಂದ 14 ದಿನ ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಗೆ ತಂದಿದೆ. ಅದಕ್ಕೆ ನಮ್ಮ ಸಹಕಾರವಿದೆ ಆದರೆ ಬಡವರ ಜೀವನ ನಿರ್ವಹಣೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ದುರಾದೃಷ್ಟಕರ, ಸರ್ಕಾರ ಬಿಪಿಎಲ್‌ ಪಡಿತರ ಹೊಂದಿರುವ ಜನರಿಗೆ ಹಾಗೂ ಎಲ್ಲ ಬಡವ ವರ್ಗದ ಕುಟುಂಬಕ್ಕೆ ತಲಾ 25 ಸಾವಿರ ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ.

'ಭೀಕರ ಸಾವು ನೋವಿಗೆ ಸರ್ಕಾರ ಹೊಣೆ : 10 ಕೆಜಿ ಅಕ್ಕಿ ಕೊಡಿ' .

ನಿರಾಶ್ರಿತ ಕೇಂದ್ರ ಆರಂಭಕ್ಕೆ ಆಗ್ರಹ:  ತಾಲೂಕಿನಲ್ಲಿ ಅಸಂಘಟಿತ ಕೂಲಿ ಕಾರ್ಮಿಕರು, ಭಿಕ್ಷುಕರಿಗೆ ಹಸಿವು ನೀಗಿಸಲು ಹಾಗೂ ಆಶ್ರಯಕ್ಕಾಗಿ ತಾಲೂಕಿನ ವಿವಿಧೆಡೆ ನಿರಾಶ್ರಿತ ಕೇಂದ್ರ ಪ್ರಾರಂಭಿಸಿ ಆ ಮೂಲಕ ಜನರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು. ಅಲ್ಲದೆ ಕೆಲಸ ಕಳೆದುಕೊಂಡವರು, ಆರ್ಥಿಕ ನಷ್ಟವಾದವರನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೈ  ಜೋಡಿಸಬೇಕು, ಇದ್ದಾಕ್ಕಾಗಿ ವಿಶೇಷ ಪರಿಣಿತರ ತಂಡವನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ