ಐಸಿಯುನಲ್ಲಿದ್ದ ಮಹಿಳೆ ಸಾವು: 9.5 ಕೋಟಿ ಬಿಲ್..!

Published : May 27, 2022, 08:02 AM IST
ಐಸಿಯುನಲ್ಲಿದ್ದ ಮಹಿಳೆ ಸಾವು: 9.5 ಕೋಟಿ ಬಿಲ್..!

ಸಾರಾಂಶ

*  ಚಿಕಿತ್ಸೆ ಫಲಕಾರಿಯಾಗದೇ 35 ವರ್ಷದ ಮಹಿಳೆ ಸಾವು  *  2015 ಅ. 3 ರಂದು ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಪೂನಂ ರಾಣಾ  * 2 ಕೋಟಿ ರು. ಬಿಲ್‌ ಪಾವತಿ  

ಬೆಂಗಳೂರು(ಮೇ.27): ಸತತ 2,422 ದಿನಗಳ ಕಾಲ (ಆರೂವರೆ ವರ್ಷ) ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

‘ಪೂನಂ ರಾಣಾ ಎಂಬುವವರು 2015 ಅಕ್ಟೋಬರ್‌ 3 ರಂದು ಹೊಟ್ಟೆ ನೋವಿನ ಕಾರಣಕ್ಕೆ ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಪೂನಂ ಅವರನ್ನು ತುರ್ತು ನಿಗಾ ಘಟಕ (ಐಸಿಯು) ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇದುವರೆಗೆ ಎಲ್ಲ ವಿಧದ ಆರೈಕೆಯನ್ನು ಮಾಡಲಾಗಿದೆ. ಎಲ್ಲ ಪ್ರಯತ್ನಗಳ ನಡುವೆ ಮೇ 24ರಂದು ಮಧ್ಯಾನ 12ಕ್ಕೆ ಮೃತರಾದರು’ ಎಂದು ಮಣಿಪಾಲ್‌ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

Bidar: ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಮಾರಾಮಾರಿ: ನಾಲ್ವರಿಗೆ ಗಾಯ, ಒಬ್ಬನ ಸ್ಥಿತಿ ಚಿಂತಾಜನಕ

ಪೂನಂ ಅವರ ಪತಿ ರಾಜೇಶ್‌ ನಾಯರ್‌ ಕೇರಳ ಮೂಲದವರಾಗಿದ್ದು, ಪೂನಂ ದೆಹಲಿ ಮೂಲದವರಾಗಿದ್ದರು. ಇಬ್ಬರು ಉದ್ಯೋಗ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದರು. 6 ವರ್ಷ ಏಳು ತಿಂಗಳ ಕಾಲ ನಡೆದ ಚಿಕಿತ್ಸೆಗೆ ಒಟ್ಟು 9.5 ಕೋಟಿ ರು. ಆಸ್ಪತ್ರೆ ಶುಲ್ಕವಾಗಿದ್ದು, 2 ಕೋಟಿ ರು.ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 

PREV
Read more Articles on
click me!

Recommended Stories

ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌
ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣ: ಶಿಕ್ಷಕ ಬೀರಪ್ಪ ಅಂಡಗಿ ಮಾದರಿ ಕಾರ್ಯ