ದಾವಣಗೆರೆ: ಇಲಿ ಸಾಯಿಸಲು ಇಟ್ಟಿದ್ದ ಟೊಮೊಟೋ ತಿಂದು ಯುವತಿ ಸಾವು

By Girish Goudar  |  First Published Jun 10, 2023, 11:26 PM IST

ವಿಷ ಸವರಿದ್ದ ಟೊಮೊಟೊವನ್ನು ಐಶ್ವರ್ಯ ತಿಂದಿದ್ದಾರೆ. ಆದರೆ ಅವರು ಟೊಮೊಟು ಹಣ್ಣು ತಿಂದಿರುವುದು ಯಾರಿಗೆ ಗೊತ್ತಿರಲಿಲ್ಲ. ನಂತರ ಐಶ್ವರ್ಯಗೆ ಅತಿಯಾದ ವಾಂತಿಯಾಗಿದೆ. ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಹೊಟ್ಟೆಯಲ್ಲಿ ವಿಷ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಶುಕ್ರವಾರ ಮತಪಟ್ಟಿದ್ದಾರೆ. 


ವರದಿ: ವರದರಾಜ್ 

ದಾವಣಗೆರೆ(ಜೂ.10): ಇಲಿ ಸಾಯಿಸಲು ಇಟ್ಟಿದ್ದ ಟೊಮೊಟು ಪಾಷಾಣ ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನ್ಯಾಮತಿ ಪಟ್ಟಣದ ಎ. ಕೆ. ಕಾಲೋನಿಯ ಹಾಲೇಶಪ್ಪ ಎಂಬುವರ ಮನೆಯಲ್ಲಿ ಇಂದು(ಶನಿವಾರ) ನಡೆದಿದೆ. 
ಇದೇ ಗ್ರಾಮದ ಎಚ್.ಐಶ್ವರ್ಯ (21) ಮೃತ ಯುವತಿಯಾಗಿದ್ದು, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದರು. ಹೀಗಿರುವಾಗ ಮನೆಯಲ್ಲಿ ಯಾವಾಗಲೂ ಇಲಿಗಳ ಕಾಟ ಹೆಚ್ಚಿತ್ತು.

Tap to resize

Latest Videos

ಮನೆಯಲ್ಲಿಟ್ಟಿದ್ದ ಸಾಮಾನುಗಳನ್ನೇಲ್ಲ ಅದು ತಿಂದು ಹಾಳು ಮಾಡುತ್ತಿತ್ತು. ಇದರಿಂದ ಬೇಸತ್ತಿದ್ದ ತಂದೆ ಹಾಲೇಶಪ್ಪ ಇಲಿಗಳನ್ನು ಸಾಯಿಸಲು ಪಾಷಾಣ ತಂದಿದ್ದಾರೆ. ಸಾಮಾನ್ಯವಾಗಿ ಇಲಿಗಳಿಗೆ ಟೊಮೋಟು ಕಂಡ್ರೆ ಜಾಸ್ತಿ ರುಚಿ ಇದ್ದು, ಅವುಗಳನ್ನು ಕಚ್ಚಿ ತಿನ್ನುವುದರಿಂದ ಹಾಲೇಶಪ್ಪ ಟೊಮೋಟು ಹಣ್ಣಿಗೆ ವಿಷಪ್ರಾಶನ ಮಾಡಿದ್ದಾರೆ. ಇಲಿಗಳ ಕಾಟದಿಂದ ಬೇಸತ್ತಿದ್ದ ಇವರ ಮನೆಯವರು ಇಲಿ ಕೊಲ್ಲಬೇಕೆಂಬ ಉದ್ದೇಶದಿಂದ ಇಲಿ ಬರುವ ಜಾಗಕ್ಕೆ ಟೊಮೇಟೂ ಇಟ್ಟಿದ್ದಾರೆ. 

ದಾವಣಗೆರೆ: ತೊದಲ ನುಡಿಗಳ ಜತೆ ಅಕ್ಷರಾಭ್ಯಾಸ

ಹೀಗಿರುವಾಗ ವಿಷ ಸವರಿದ್ದ ಟೊಮೊಟೊವನ್ನು ಐಶ್ವರ್ಯ ತಿಂದಿದ್ದಾರೆ. ಆದರೆ ಅವರು ಟೊಮೊಟು ಹಣ್ಣು ತಿಂದಿರುವುದು ಯಾರಿಗೆ ಗೊತ್ತಿರಲಿಲ್ಲ. ನಂತರ ಐಶ್ವರ್ಯಗೆ ಅತಿಯಾದ ವಾಂತಿಯಾಗಿದೆ. ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಹೊಟ್ಟೆಯಲ್ಲಿ ವಿಷ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಶುಕ್ರವಾರ ಮತಪಟ್ಟಿದ್ದಾರೆ. ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ ತಂದೆ ಹಾಲೇಶಪ್ಪ ಪ್ರಕರಣ ದಾಖಲಾಗಿದೆ. ಒಟ್ಟಾರೆ ಇಲಿ ಸಾಯಿಸಲು ಇಟ್ಟಿದ್ದ ಟೊಮೊಟು ಹಣ್ಣು ಒಂದು ಜೀವವನ್ನೇ ಬಲಿ ತೆಗೆದುಕೊಂಡಿದ್ದು, ಮನೆಯಲ್ಲಿ ನೀರವ ,ಮೌನ ಆವರಿಸಿದೆ.

click me!